ETV Bharat / state

ಗುತ್ತಿಗೆದಾರರಿಗೆ ನ್ಯಾಯ ಒದಗಿಸಲು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು: ಗೋಪಾಲಯ್ಯ - ಬೆಂಗಳೂರು ನ್ಯೂಸ್​

Commission allegations: ಗುತ್ತಿಗೆದಾರರ ಬಾಕಿ ಹಣ ತಕ್ಷಣ ಬಿಡುಗಡೆ ಮಾಡಿ, ಅನಾಹುತಗಳಿಗೆ ಅವಕಾಶ ಕೊಡದಿರಿ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Former minister Gopalaya
ಮಾಜಿ ಸಚಿವ ಗೋಪಾಲಯ್ಯ
author img

By

Published : Aug 11, 2023, 3:32 PM IST

ಬೆಂಗಳೂರು: ಬಿಲ್ ತಡೆ ಹಿಡಿದ ವಿಷಯದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಗುತ್ತಿಗೆದಾರರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮಾಜಿ ಸಚಿವ ಕೆ. ಗೋಪಾಲಯ್ಯ ಒತ್ತಾಯಿಸಿದರು. ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಂಪಣ್ಣನವರು ಪ್ರಧಾನಿಗೂ ಮನವಿ ನೀಡಿದ್ದರು. ಅವರು ಗುತ್ತಿಗೆ ಕೆಲಸ ಮಾಡುತ್ತಿದ್ದರೆ 400-500 ಜನರ ಪರವಾಗಿರುತ್ತಾರಾ?, ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರಾ?. 224 ಜನ ಶಾಸಕರಿದ್ದೀವಿ. ನೀವು ಯಾರಿಗೆ ಹಣ ಕೊಟ್ಟಿದ್ದೀರೆಂದು ಬಹಿರಂಗಪಡಿಸಿ ಎಂದು ಸವಾಲೆಸೆದರು. ಅಲ್ಲದೇ ಶೇ.40ರಷ್ಟು ಕಮಿಷನ್ ಯಾರಿಗೆ ಕೊಟ್ಟಿದ್ದೀರೆಂದು ತಿಳಿಸಿ. ಇಲ್ಲವಾದರೆ ರಾಜ್ಯದ ಜನರ ಕ್ಷಮೆ ಕೇಳಿ ಎಂದರು.

ಕೆಂಪಣ್ಣನವರು ಕಾಂಗ್ರೆಸ್‍ನಿಂದ ಕಿಕ್ ಬ್ಯಾಕ್ ಪಡೆದದ್ದು ಸ್ಪಷ್ಟವಾಗುತ್ತಿದೆ. ಗುತ್ತಿಗೆದಾರರ ಕುಟುಂಬ ನೇಣು ಹಾಕಿಕೊಳ್ಳುವ ಸ್ಥಿತಿಗೆ ಬಂದಿದೆ. ನಿನ್ನೆ ಮೃತ ಗೌತಂ ಕಂಟ್ರಾಕ್ಟರ್ ಕುಟುಂಬಕ್ಕೆ ಸೇರಿದವರು ಎಂದು ಆರಂಭದಲ್ಲಿ ತಿಳಿಸಲಾಗಿತ್ತು. ಹೀಗಾಗಿ, ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ. ಅವರಿಗೆ ರಾಜ್ಯದ ಮೇಲೆ ಹಿಡಿತ ಇಲ್ಲ. ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಟಿ.ನಾಗರಾಜ್ ಹಿನ್ನೆಲೆಯನ್ನೂ ಕೆದಕಬೇಕಲ್ಲವೇ?. 26 ಕಂಡಿಷನ್ ಹಾಕಿ ಕಿರುಕುಳ ಕೊಡುವುದನ್ನು ಗಮನಿಸಿ. ರಾಜ್ಯದ ಲೂಟಿ ಹೊಡೆಯಲು ಈ ನೇಮಕ ಆಗಿದೆಯೇ ಎಂದು ಗೋಪಾಲಯ್ಯ ನೇರವಾಗಿ ಪ್ರಶ್ನಿಸಿದರು.

ಕಳೆದ 85 ದಿನಗಳಿಂದ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ದುರ್ಘಟನೆಗಳಿಗೆ ನೇರ ಹೊಣೆಯಾಗಿದೆ. ಗುತ್ತಿಗೆದಾರರು ರಾಜ್ಯಪಾಲರಿಗೆ ನೇರ ದೂರು ಕೊಟ್ಟಿರಲಿಲ್ಲ. ಉಪ ಮುಖ್ಯಮಂತ್ರಿಗಳು ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ?. ಮುಖ್ಯಮಂತ್ರಿಗಳು ಡಿಸಿಎಂ ಜತೆ ಕೈ ಜೋಡಿಸಿದ್ದಾರಾ?. ಅಜ್ಜಯ್ಯ ದೇವರನ್ನು ನಂಬಿದ್ದೀರಾ, ಆಣೆ ಮಾಡಿ ಎಂದು ಹೇಳಿದರು.

ಕಂಟ್ರಾಕ್ಟರ್​‍ಗಳು ಬೀದಿ ಬೀದಿ ಸುತ್ತುತ್ತಿದ್ದಾರೆ. ನಮ್ಮ ನಾಯಕರನ್ನೂ ಭೇಟಿ ಮಾಡಿದ್ದಾರೆ. ಕೇಂದ್ರದ ನಾಯಕರಿಗೆ ಹಣ ಸಂಗ್ರಹಿಸಲು ಹೊರಟಿದ್ದಾರೆಯೇ?. 300ಕ್ಕಿಂತ ಹೆಚ್ಚು ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದು, ಬಿಲ್ ತಡೆಹಿಡಿದು ಮತ್ತು ಲಂಚ ಕೇಳಿದ್ದು ನಾಚಿಕೆಗೇಡಿನ ಕೆಲಸವಲ್ಲವೇ?. ಗುತ್ತಿಗೆದಾರರು ಕೆಲಸ ನಿಲ್ಲಿಸಿದರೆ ಲಕ್ಷಗಟ್ಟಲೆ ನಿರುದ್ಯೋಗ ಸೃಷ್ಟಿ ಆಗುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ?, ರಾಜ್ಯ ಸರ್ಕಾರ ಬೆಂಗಳೂರಿಗೆ ಒಂದು ನೀತಿ, ಇತರೆಡೆಗೆ ಇನ್ನೊಂದು ನೀತಿ ಅನುಸರಿಸುತ್ತಿದ್ದು, ರಾಜ್ಯದಲ್ಲಿ ಒಂದು ಸರ್ಕಾರ ಇದೆಯೇ ಅಥವಾ ಎರಡು ಸರ್ಕಾರಗಳಿವೆಯೇ ಎಂದು ಮಾಜಿ ಸಚಿವ ಪ್ರಶ್ನಿಸಿದರು.

ನಾನು, ನನ್ನ ಪತ್ನಿ ಹಾಗೂ ಕುಟುಂಬ ಬದುಕಿರುವವರೆಗೂ ಬಿಜೆಪಿಗಾಗಿ ದುಡಿಯುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟಿದೆ. ಮೋದಿ ಅವರ ಆಡಳಿತ ಇನ್ನೂ ಮುಂದುವರೆಯಬೇಕೆಂಬ ಆಶಯ ನನ್ನದು. ಅವರು ವಿಶ್ವ ನಾಯಕ, 2024ರಲ್ಲೂ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶೇ 15ರಷ್ಟು ಕಮಿಷನ್ ಬಗ್ಗೆ ದಾಖಲೆ ಕೊಟ್ಟರೆ ಹೋರಾಟದ ಪರ ನಿಲ್ಲುತ್ತೇವೆ: ಕೆಂಪಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.