ನೆಲಮಂಗಲ: ಮಾಜಿ ಸಚಿವ ಅಂಜನಮೂರ್ತಿ (78) ವಿಧಿವಶರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಗಿನ ಜಾವ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ನೆಲಮಂಗಲದ ಇಂದಿರಾನಗರದಲ್ಲಿ ವಾಸವಾಗಿದ್ದ ಅಂಜನಮೂರ್ತಿ 3 ಬಾರಿ ಕಾಂಗ್ರೆಸ್ನಿಂದ ಸ್ಫರ್ಧಿಸಿ ಶಾಸಕರಾಗಿ ಮತ್ತು ವಸತಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು.
ಕೆಲವು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು. ಎರಡು ದಿನಗಳ ಹಿಂದೆ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಜನಮೂರ್ತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದ ಇಂದಿರಾನಗರದ ಮನೆಗೆ ತರಲಾಗಿದೆ. ಬಂಧು-ಮಿತ್ರರು ಮತ್ತು ಪಕ್ಷದ ಕಾರ್ಯಕರ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಂಜನಮೂರ್ತಿ ಹಿನ್ನೆಲೆ: ಏಪ್ರಿಲ್ 10, 1941ರಂದು ಜನಿಸಿದ್ದ ಅಂಜನಮೂರ್ತಿ ಶಾಸಕರಾಗಿ ನೆಲಮಂಗಲ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1989 - 1994, 1999 - 2004, 2004-2007 ಮೂರು ಅವಧಿಗೆ ಆಯ್ಕೆಯಾಗಿದ್ದರು. ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ವಿಧಾನಸಭೆಯ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. 2003 ರಿಂದ 2004 ಎಸ್ಸಿ ಮತ್ತು ಎಸ್ಟಿ ಆಯೋಗದ ಮುಖ್ಯಸ್ಥರಾಗಿದ್ದರು. 2005 ರಿಂದ 2006 ಅವಧಿಯಲ್ಲಿ ವಸತಿ ಸಚಿವರು ಆಗಿ ಬಡ್ತಿ ಪಡೆದಿದ್ದರು.
2005 ರಿಂದ 06 ರವರೆಗೆ ನೆಲಮಂಗಲ ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, 1972-76 ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯ, 1983-88 ವಕೀಲರ ಸಂಘ ನೆಲಮಂಗಲ ಅಧ್ಯಕ್ಷ, 1985-88 ಅರುಂಧತಿ ವಿದುವಾ ಸಂಸ್ಥೆ ನೆಲಮಂಗಲ ಅಧ್ಯಕ್ಷ, 1978-83 ಲ್ಯಾಂಡ್ ಟ್ರಿಬ್ಯೂನಲ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ಮುಖಂಡರಾಗಿರುವ ಅಂಜನಮೂರ್ತಿ ಸಾವಿಗೆ ಗಣ್ಯರು, ಪಕ್ಷದ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
-
ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ.
— Siddaramaiah (@siddaramaiah) March 23, 2023 " class="align-text-top noRightClick twitterSection" data="
ಅವರ ಅಗಲಿಕೆಯ ದುಃಖ ದಲ್ಲಿರುವ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಾಂತ್ವನಗಳು.
ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/EurZuVJtKJ
">ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ.
— Siddaramaiah (@siddaramaiah) March 23, 2023
ಅವರ ಅಗಲಿಕೆಯ ದುಃಖ ದಲ್ಲಿರುವ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಾಂತ್ವನಗಳು.
ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/EurZuVJtKJಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ.
— Siddaramaiah (@siddaramaiah) March 23, 2023
ಅವರ ಅಗಲಿಕೆಯ ದುಃಖ ದಲ್ಲಿರುವ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಾಂತ್ವನಗಳು.
ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ. pic.twitter.com/EurZuVJtKJ
ಸಿದ್ದರಾಮಯ್ಯ ಸಂತಾಪ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ಮಾಜಿ ಸಚಿವ ಅಂಜನಮೂರ್ತಿ ಅವರ ನಿಧನದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾರ್ಗದರ್ಶಕನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯ ದುಃಖದಲ್ಲಿರುವ ಕುಟುಂಬ ಮತ್ತು ಅಭಿಮಾನಿಗಳಿಗೆ ಸಾಂತ್ವನಗಳು. ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಸ್ತಂಗತ; ಸಿಎಂ, ಗಣ್ಯರ ಸಂತಾಪ
ಇದನ್ನೂ ಓದಿ: ಅವರು ದಲಿತ ಸಿಎಂ ಆಗ್ತಾರೆ ಎನ್ನುವ ಆಶಾಭಾವನೆ ಇತ್ತು: ಧ್ರುವ ಒಡನಾಡಿಗಳ ಕಂಬನಿ