ಬೆಂಗಳೂರು: ನಮ್ಮ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಕಳೆದ ಜುಲೈ 19 ಮತ್ತು 22ರಂದು ನಡೆಸಲಾಯಿತು. ನಾವು ಭರವಸೆ ಕೊಟ್ಟಂತೆ ಪರೀಕ್ಷಾ ಕೇಂದ್ರಗಳು ಇಡೀ ರಾಜ್ಯದಲ್ಲಿ ಮಕ್ಕಳ ಸುರಕ್ಷಾ ಕೇಂದ್ರಗಳಾಗಿಯೂ ಸಹ ಕಾರ್ಯ ನಿರ್ವಹಿಸಿದವು ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
![former-education-minister-suresh-kumar-talk-about-sslc-result](https://etvbharatimages.akamaized.net/etvbharat/prod-images/kn-bng-2-sslc-sureshkumar-7201801_08082021175939_0808f_1628425779_210.jpg)
ಕೋವಿಡ್ ಹಿನ್ನೆಲೆಯಲ್ಲಿ ವಿನೂತನ ರೀತಿಯಲ್ಲಿ ನಡೆಸಿದ ಈ ಪರೀಕ್ಷೆಗಳಲ್ಲಿ ಶೇಕಡ 99.6 ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಹಾಜರಾಗಿ ಉತ್ತರ ಬರೆದರು. ಜುಲೈ 22ರಂದು ಪರೀಕ್ಷೆಗಳು ಮುಗಿದ ನಂತರ ಫಲಿತಾಂಶವನ್ನು ಆಗಸ್ಟ್ ಹತ್ತರೊಳಗೆ ಪ್ರಕಟಿಸಲಾಗುವುದು ಎಂದು ಮಾಧ್ಯಮ ಮಿತ್ರರಿಗೆ ತಿಳಿಸಿದ್ದೆ.
ಇದೀಗ ನಾಳೆ ಆಗಸ್ಟ್ 9ರಂದು ಸಂಜೆ 3.30 ಗಂಟೆ ಸುಮಾರಿಗೆ ನೂತನ ಶಿಕ್ಷಣ ಸಚಿವರಾದ ಬಿ. ಸಿ ನಾಗೇಶ್ ಅವರು 2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಅಂದು ಕೊಟ್ಟ ಮಾತಿನಂತೆ ಫಲಿತಾಂಶ ಪ್ರಕಟವಾಗುತ್ತಿದೆ. ಒಂದು ರೀತಿಯ ಸಮಾಧಾನ, ತೃಪ್ತಿ ಮತ್ತು ಸಂತಸ ನನ್ನದು ಎಂದಿದ್ದಾರೆ.
ಓದಿ: ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ವಾಪಸ್ ನೀಡಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ : ಸಿದ್ದರಾಮಯ್ಯ