ಬೆಂಗಳೂರು: ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್ ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲರಿಗೂ ನನ್ನ ತುಂಬು ಹೃದಯದ ಶುಭ ಹಾರೈಕೆಗಳು. ಭಯ ಪಡದಿರಿ, ಎಚ್ಚರಿಕೆಯಿಂದ ಇರಿ. ಮಾಸ್ಕ್ ಧರಿಸಿ, ನಿಮ್ಮ ಅಂತರ ಕಾಯ್ದುಕೊಳ್ಳಿರಿ ಮತ್ತು ಸ್ಯಾನಿಟೈಸರ್ ಉಪಯೋಗಿಸಿರಿ. ಶುಭವಾಗಲಿ ಎಂದಿದ್ದಾರೆ.
ಲಾಕ್‍ಡೌನ್ ಮಾಡುವುದು ಉತ್ತಮ
ಮಹಾನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಮತ್ತೊಂದು ಟ್ವೀಟ್ನಲ್ಲಿ, ಬೆಂಗಳೂರನ್ನು ಕೊರೊನಾದಿಂದ ಮುಕ್ತಗೊಳಿಸುವುದು ನಮ್ಮ ಮುಂದಿರುವ ಸವಾಲಾಗಿದೆ ಎಂದು ಬರೆದಿದ್ದಾರೆ.
ಸೋಂಕಿತರ ಸಂಖ್ಯೆಯನ್ನು ಕಡಿಮೆಗೊಳಿಸಿ ಕೊರೊನಾ ವೈರಸ್ ಹತೋಟಿಗೆ ತರಲು ಲಾಕ್‍ಡೌನ್ ಮಾಡುವುದು ಉತ್ತಮ. ಸರ್ಕಾರ ಎಲ್ಲಾ ಅಂಶಗಳನ್ನು ಪರಿಗಣಿಸಿ ನಗರಕ್ಕೆ, ಜನರ ಹಿತಕ್ಕೆ ತಕ್ಕ ನಿರ್ಧಾರವನ್ನು ಕೂಡಲೇ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.