ETV Bharat / state

ಸಂಗಮೇಶ್ ಯಾವುದೇ ತಪ್ಪು ಮಾಡಿಲ್ಲ, ಯಾರ ಜೊತೆಯೂ ಅಸಭ್ಯವಾಗಿ ನಡೆದುಕೊಂಡಿಲ್ಲ: ಸಿದ್ದರಾಮಯ್ಯ - ಮಾಜಿ ಸಿಎಂ ಸಿದ್ದರಾಮಯ್ಯ

ಸ್ಪೀಕರ್ ಸಂವಿಧಾನದ ರೀತಿಯ ನಿಯಮಾವಳಿ ರೀತಿಯಲ್ಲಿ ನಡೆದುಕೊಳ್ಳದೇ, ಪಕ್ಷದವರಂತೆ ಚರ್ಚಿಸುತ್ತಿದ್ದಾರೆ. ಇದು ಆರ್​​​ಎಸ್​​​ಎಸ್ ಹಿಡನ್ ಅಜೆಂಡಾ. ಒನ್ ನೇಷನ್, ಒನ್ ಪಾರ್ಟಿ, ಒನ್ ಲೀಡರ್ ಎಂಬಂತೆ ವರ್ತಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

former-cm-siddaramaiah
ಸಿದ್ದರಾಮಯ್ಯ
author img

By

Published : Mar 4, 2021, 7:50 PM IST

ಬೆಂಗಳೂರು: ಸಂಗಮೇಶ್ ಅವರು ಯಾವುದೇ ತಪ್ಪು ಮಾಡಿಲ್ಲ, ಯಾರ ಜತೆಯೂ ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ಉಭಯ ಸದನಗಳಲ್ಲಿ ಗದ್ದಲದ ಕಾರಣದಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂಗಮೇಶ್ ಅಮಾನತು ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಸಿಎಂ ಯಡಿಯೂರಪ್ಪನವರ ಪುತ್ರ ಸಂಸದ ರಾಘವೇಂದ್ರ ಅವರು ಶಾಸಕ ಸಂಗಮೇಶ್ ಹಾಗೂ ಅವರ ಕುಟುಂಬದ 7 ಸದಸ್ಯರ ಮೇಲೆ ಕೊಲೆ ಯತ್ನ ಕೇಸ್ ಹಾಕಿಸಿದ್ದಾರೆ. ನಮ್ಮ ಪಕ್ಷದ ಒಬ್ಬರೇ ಶಾಸಕರು ಆ ಕ್ಷೇತ್ರದಲ್ಲಿ ಇರುವುದು. ಹೀಗಾಗಿಯೇ ರಾಜಕೀಯ ಜಿದ್ದಿನಿಂದ ಕೇಸ್ ಹಾಕಿಸಿದ್ದಾರೆ. ಆ ನೋವಿನಲ್ಲಿ ಸಂಗಮೇಶ್ ಶರ್ಟ್ ತೆಗೆದಿದ್ದು ಎಂದು ಸಮರ್ಥಿಸಿಕೊಂಡರು.

ವಿಧಾನಸೌಧ ಬಳಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಈ ಹಿಂದೆ ಗೂಳಿಹಟ್ಟಿ ಶೇಖರ್ ಅವರೂ ಶರ್ಟ್ ತೆಗೆದಿದ್ದರು, ಸ್ಪೀಕರ್ ಕ್ರಮ ಇರಲಿಲ್ಲ, ಚರ್ಚೆ ಮಾಡದೇ ಒಂದು ವಾರ ಅಮಾನತು ಮಾಡಿದೀನಿ ಅಂದ್ರೆ ಅದನ್ನು ನಾವು ವಿರೋಧಿಸಬಾರದಾ.? ಇದು ಫ್ಯಾಸಿಸ್ಟ್ ಮನೋಭಾವ, ಜನರಿಂದ ಆಯ್ಕೆಯಾಗಿರುವ ಶಾಸಕನ ಮೇಲೆ ಸೆಕ್ಷನ್​ 307ಅಡಿ ಕೇಸ್ ಹಾಕಿದರೆ, ಇವರು ಜನರ ಧ್ವನಿ ಆಗೋದು ಹೇಗೆ. ಕಬಡ್ಡಿ ಆಟ ಆಡುವಾಗ ಯಾರೋ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಆಗ ತಳ್ಳಾಟ ನಡೆದಿದೆ ಅಷ್ಟೇ. ಸರ್ಕಾರ ಸಂಗಮೇಶ್ ಬಳಿ ಕ್ಷಮೆ ಕೇಳಬೇಕು, ಬಿ ರಿಪೋರ್ಟ್ ಹಾಕಿ ಕೇಸ್ ರದ್ದು ಮಾಡಬೇಕು ಎಂದು ಸ್ಪೀಕರ್ ನಡೆಯನ್ನು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ‘ಒನ್ ನೇಷನ್ ಒನ್ ಎಲೆಕ್ಷನ್’ ಬಗ್ಗೆ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಇದರ ಮಾತುಕತೆ ನಡೆಯುತ್ತಿದೆ. ಅದರ ಅವಶ್ಯಕತೆ ಏನಿದೆ ಈಗ.? ಬರೀ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾತ್ರ ಅಲ್ಲ, ಹಲವಾರು ಚುನಾವಣೆಗಳಿವೆ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯ. ಪ್ರಚಾರಕ್ಕಾಗಿ ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದಾರಷ್ಟೇ ಎಂದರು.

ಸ್ಪೀಕರ್ ಸಂವಿಧಾನದ ರೀತಿಯ ನಿಯಮಾವಳಿ ರೀತಿಯಲ್ಲಿ ನಡೆದುಕೊಳ್ಳದೇ, ಪಕ್ಷದವರಂತೆ ಚರ್ಚಿಸುತ್ತಿದ್ದಾರೆ ಇದು ಆರ್​​​ಎಸ್​​​ಎಸ್ ಹಿಡನ್ ಅಜೆಂಡಾ. ಒನ್ ನೇಷನ್, ಒನ್ ಪಾರ್ಟಿ, ಒನ್ ಲೀಡರ್ ಎಂಬಂತೆ ವರ್ತಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.

ಇದನ್ನೂ ಓದಿ: ಸಂಗಮೇಶ್ ಅಮಾನತು ರದ್ದುಗೊಳಿಸಿ, ಇಲ್ಲದಿದ್ದರೆ ನಮ್ಮೆನ್ನೆಲ್ಲಾ ಅಮಾನತು ಮಾಡಿ : ಸಿದ್ದರಾಮಯ್ಯ ಪಟ್ಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.