ETV Bharat / state

ಯೋಗೇಶ್ವರ್ ಚಡ್ಡಿ ಹಾಕುವ ಮುನ್ನ, ನನಗೂ ಚನ್ನಪಟ್ಟಣಕ್ಕೂ ನಂಟಿದೆ.. ಅವನಿಗೆ ಹುಚ್ಚು ಹಿಡಿದಿದೆ.. ಹೆಚ್‌​ಡಿಕೆ ತಿರುಗೇಟು

ನನ್ನ ಬಗ್ಗೆ ಏಕವಚನ ದಲ್ಲಿ ಮಾತನಾಡುತ್ತಾನೋ?. ಅವನ ಬಗ್ಗೆ ಮಾತನಾಡಲು ನನಗೆ ಹಲವು ಸಬ್ಜೆಕ್ಟ್ ಇದೆ. ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಚನ್ನಪಟ್ಟಣದಲ್ಲೇ ಸಭೆ ಮಾಡೋಣ. ನಾನು ಬರಲು ರೆಡಿ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು..

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Mar 14, 2022, 4:40 PM IST

ಬೆಂಗಳೂರು : ಅವನು ರಾಜಕಾರಣದಲ್ಲಿ ಚಡ್ಡಿ ಹಾಕಿದ್ದಾನೋ ಗೊತ್ತಿಲ್ಲ. ಅದಕ್ಕೂ ಮುಂಚೆ ಚನ್ನಪಟ್ಟಣ ಕ್ಷೇತ್ರದ ಜೊತೆ ನನಗೆ ಸಂಬಂಧ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ಎಂಎಲ್‌ಸಿ ಸಿ ಪಿ ಯೋಗೇಶ್ವರ್​​ಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸುತ್ತಾ, ಸಿಎಂ ಆಗಿದ್ದ ವೇಳೆ ಸರ್ಕಾರಿ ಬಂಗಲೆ ಇಲ್ಲದಿದ್ದ ಕಾರಣ ತಾಜ್ ವೆಸ್ಟ್ ಎಂಡ್​​ಗೆ ಹೋಗಿದ್ದು ನಿಜ. ಕೆಲವು ದಿನ ರೆಸ್ಟ್‌ಗಾಗಿ ಹೋಗುತ್ತಿದ್ದೆ.

ಅದು ಎಲ್ಲರಿಗೂ ಗೊತ್ತು. ಸಿ.ಪಿ.ಯೋಗೇಶ್ವರದ್ದು ಕೀಳು ಅಭಿರುಚಿಯ ಮಾತುಗಳು. ಇವನು ಗುಡಿಸಲಲ್ಲಿ ವಾಸವಾಗಿದ್ದನಾ?.. ಇವನೂ ಖಾಸಗಿ ಹೋಟೆಲ್‌ವೊಂದರಲ್ಲಿ ಇದ್ದನಲ್ಲಾ?. ಇವನ ಹಿನ್ನೆಲೆ ಏನು?. ನನ್ನ ಹತ್ತಿರ ಆಟ ಆಡುತ್ತಾನಾ? ಎಂದು ಕಿಡಿಕಾರಿದರು.

ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್​​​ಡಿಕೆ ತಿರುಗೇಟು ನೀಡಿರುವುದು..

ನಾನು ತೆರೆದ ಪುಸ್ತಕ : ವೈವಾಹಿಕ‌ ಜೀವನದ ಕುರಿತ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾನು ತೆರೆದ ಪುಸ್ತಕ. ವಿಧಾನಸಭೆಯಲ್ಲಿ ಸಿಎಂ ಆಗಿ ಸದನದಲ್ಲಿ ಎಡ್ಮಿಟ್ ಮಾಡಿದ್ದೇನೆ. ಹೌದು. ಒಂದು ಬಾರಿ ದಾರಿ ತಪ್ಪಿದ್ದೇನೆ ಅಂತಾ ಹೇಳಿದ್ದೇನೆ. ನಾನು ಕದ್ದು ಮುಚ್ಚಿ ಏನೂ ಮಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಾಗಿದೆ.

ಅವನಿಗೆ ಹುಚ್ಚು ಹಿಡಿದಿದೆ. ಚನ್ನಪಟ್ಟಣದಲ್ಲಿ ಅವನದ್ದು ಮುಗಿದು ಹೋದ‌ ಅಧ್ಯಾಯ. ದಿನಾ ಜನ‌ ಕರಕೊಂಡು ಹೋಗಿ, ಅಷ್ಟು ಜನ ಸೇರಿದರು ಅಂತಾ ಮಾಧ್ಯಮದ ಮುಂದೆ ಹೇಳಿಕೆ ಕೊಡುತ್ತಾನೆ ಎಂದು ವಾಗ್ದಾಳಿ ನಡೆಸಿದರು.

ನಾನೇನು ಚನ್ನಪಟ್ಟಣ ಬಿಟ್ಟು ಓಡಿ ಹೋಗಲ್ಲ. ನಾನು ಕೆಲಸ‌ ಮಾಡಿದ್ದೇನೋ?. ಇವನು 25 ವರ್ಷ ಏನು ಮಾಡಿದ್ದಾನೋ ಗೊತ್ತಾಗುತ್ತದೆ. ಆ ಬಸ್ ನಿಲ್ದಾಣದ ಕರ್ಮಕಾಂಡ ನನ್ನದಾ?. ಚನ್ನಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ 32 ಕೋಟಿ ರೂ. ಅಂದಾಜು ಮಾಡಿ, ಪ್ರಾಧಿಕಾರದಿಂದ ದುಡ್ಡು ಕೊಡಬೇಕು ಅಂತಾ ತೀರ್ಮಾನ ತೆಗೆದುಕೊಂಡಿದ್ದರು.

ಅವನು ಯಾವನೋ ಗುಂಡಿ ತೆಗೆಸಿದ ಗುತ್ತಿಗೆದಾರ ನಾಲ್ಕು ಕೋಟಿ ಬಿಲ್ ಮಾಡಿದ್ದಾನೆ. ಈ ಕರ್ಮಕಾಂಡಕ್ಕೆ ನಾನು ದುಡ್ಡು ಕೊಡಿಸಬೇಕಾ?. ಅಂಬೇಂಡ್ಕರ್ ಭವನ 14 ವರ್ಷ ಶಾಸಕನಾಗಿ, ಮಂತ್ರಿಯಾಗಿದ್ದಾನೆ. ಅಲ್ಲಿ ನೀರು ನಿಂತಿದೆ. ಅದನ್ನು ನಾನು ಕ್ಲೀನ್ ಮಾಡಿಸಬೇಕು. ಅದು ಅವನು ಮಾಡಿದ ಕೆಲಸ ಎಂದು ಕಿಡಿಕಾರಿದರು.

ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕಲ್ಲಾ? : ನಾನು ಸಿಎಂ ಆಗಿದ್ದು ಚನ್ನಪಟ್ಟಣಕ್ಕಲ್ಲಾ. ನಾನು ಸಿಎಂ ಆಗಿದ್ದು ಇಡೀ ರಾಜ್ಯಕ್ಕೆ. ನಾನೇನು ಕಣ್ಣೀರು ಹಾಕಿಲ್ಲ. ರಾಜ್ಯದ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನ ‌ಮೇಲಿತ್ತು. ಆ ಜವಾಬ್ದಾರಿ ಮಧ್ಯೆ ಚನ್ನಪಟ್ಟಣಕ್ಕೆ ಏನು ಮಾಡಬೇಕು ಅದನ್ನು ನಾನು ಮಾಡಿದ್ದೇನೆ. ಇವನಲ್ಲ ನನಗೆ ಸರ್ಟಿಫಿಕೇಟ್ ಕೊಡೋದು.

ನನ್ನನ್ನು ಆಯ್ಕೆ ಮಾಡಿದ ಜನ ಸರ್ಟಿಫಿಕೇಟ್ ಕೊಡಬೇಕು. ಮೆಗಾ ಸಿಟಿ ಅಂತಾ ಸಾವಿರಾರು ಜನರನ್ನು ಬೀದಿಪಾಲು ಮಾಡಿದ್ದಾನೆ‌. ಇವನು ಯಾವುದೋ ಸಿನಿಮಾ ಮಾಡಲಿಕ್ಕೆ ಅಂತಾ ಕಂಡವರ ದುಡ್ಡು ಹೊಡೆದು, ಆಟ ಆಡಿಕೊಂಡು ಬಂದವನು ಇವನು ಎಂದು ವಾಗ್ದಾಳಿ ನಡೆಸಿದರು.

ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೋ?. ಅವನ ಬಗ್ಗೆ ಮಾತನಾಡಲು ನನಗೆ ಹಲವು ಸಬ್ಜೆಕ್ಟ್ ಇದೆ. ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಚನ್ನಪಟ್ಟಣದಲ್ಲೇ ಸಭೆ ಮಾಡೋಣ. ನಾನು ಬರಲು ರೆಡಿ ಇದ್ದೇನೆ. ಅವನು ದಾಖಲೆ ಬೇಕಾದರು ತೆಗೆದುಕೊಂಡು ಬರಲಿ. ಇವನಿಂದ ನಾನು ಕಲಿಬೇಕಾ?. ಅಲ್ಲಿ ಏನೂ ನಡೆಯಲ್ಲ.

ಯಾವ ಟಾರ್ಗೆಟ್ ಯಾವುದೂ ನಡೆಯಲ್ಲ. ನಾನು ಇದನ್ನೆಲ್ಲಾ ನೋಡಿದ್ದೇನೆ. ಇವನು ಆವಾಗ ಚಡ್ಡಿ ಹಾಕಿದ್ದಾನೋ ಗೊತ್ತಿಲ್ಲ ರಾಜಕಾರಣದಲ್ಲಿ. ನನಗೂ ಮತ್ತು ಚನ್ನಪಟ್ಟಣಕ್ಕೂ ಸಂಬಂಧ ಬಹಳಷ್ಟಿದೆ. ದೇವೇಗೌಡರ ಕುಟುಂಬಕ್ಕೂ ಹಾಗೂ ಚನ್ನಪಟ್ಟಣ ಕುಟುಂಬಕ್ಕೂ ಬಹಳ ಸಂಬಂಧ ಇದೆ. ಅದು ಯಾವುದು ಚರ್ಚೆ ಮಾಡ್ತಾನೆ ನಾನು ಬರಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.