ETV Bharat / state

DJ Halli and KJ Halli Case.. ಕಿಡಿಗೇಡಿಗಳಿಗೆ ಆಶ್ರಯ ಕೊಡುತ್ತೀರೋ ಅಥವಾ ಶಿಕ್ಷೆ ಕೊಡುತ್ತೀರೋ ಸ್ಪಷ್ಟಪಡಿಸಿ: ಸಿಎಂಗೆ ಬೊಮ್ಮಾಯಿ ಆಗ್ರಹ

ಸತ್ಯಾಂಶವನ್ನು ನೋಡಿ ಕಾನೂನಾತ್ಮಕ ಅವಕಾಶ ಇದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಆರೋಪಿಗಳ ಕೇಸ್‌ ವಾಪಸ್‌ ತೆಗೆದುಕೊಳ್ಳುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

Former CM Basavaraja Bommai
Former CM Basavaraja Bommai
author img

By

Published : Jul 26, 2023, 3:01 PM IST

Updated : Jul 26, 2023, 4:31 PM IST

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧದ ಕೇಸ್ ವಾಪಸ್ ಪಡೆಯುವುದಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೂ ಕೇಸ್ ವಾಪಸ್​ಗೆ ಕೆಲ ಸಂಘಟನೆಗಳು ಮನವಿ ಮಾಡಿವೆ. ಇಂತಹ ಕೇಸ್​ಗಳ ಕಿಡಿಗೇಡಿಗಳಿಗೆ ಆಶ್ರಯ ಕೊಡುತ್ತೀರೋ ಅಥವಾ ಶಿಕ್ಷೆ ಕೊಡುತ್ತೀರೋ ಎನ್ನುವುದುನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಬೇಕು. ಒಂದು ವೇಳೆ ವಾಪಸ್ ಪಡೆದಿದ್ದೇ ಆದಲ್ಲಿ ಕಾನೂನಾತ್ಮಕವಾಗಿ ಬಿಜೆಪಿ ಹೋರಾಟ ನಡೆಸಲಿದ್ದು, ಜನರ ಬಳಿಗೂ ವಿಷಯ ತೆಗೆದುಕೊಂಡು ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ನಡೆಸಿದ್ದ ಇಂತಹ ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು. ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಅಂದು ನಾವು ಕಟ್ಟಿನಿಟ್ಟಿನ ಕ್ರಮ ಕೈಗೊಂಡ ಕಾರಣ ಗಲಭೆ ನಿಂತಿತು. ಇಲ್ಲದಿದ್ದಲ್ಲಿ ಪರಿಸ್ಥಿತಿ ಬೇರೆಯ ರೀತಿಯೇ ಆಗುತ್ತಿತ್ತು. ಹೊರಗಿನ ದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ಗೃಹ ಸಚಿವರಿಗೆ ಮಾತ್ರವಲ್ಲ, ಸಿಎಂಗೂ ಕೆಲ ಸಂಘಟನೆಗಳೂ ಡಿಜೆ ಹಳ್ಳಿ ಕೆಜಿ ಹಳ್ಳಿ, ಶಿವಮೊಗ್ಗ ಗಲಭೆ ಸೇರಿ ಎಲ್ಲಾ ಕೇಸ್ ವಾಪಸ್​ಗೆ ಮನವಿ ಕೊಟ್ಟಿವೆ. ಇಂತಹ ಕೇಸ್​ಗಳ ಕಿಡಿಗೇಡಿಗಳಿಗೆ ಆಶ್ರಯ ಕೊಡುತ್ತೀರೋ ಅಥವಾ ಶಿಕ್ಷೆ ಕೊಡುತ್ತೀರೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈಗ ಗಲಭೆಕೋರರನ್ನು ಸಂಪೂರ್ಣವಾಗಿ ರಕ್ಷಣೆ ಮಾಡಲು ಮುಂದಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರ ಪ್ರಕರಣ ಆಗಿದೆ. ಪೊಲೀಸ್ ಠಾಣೆ ಸುಟ್ಡಿದ್ದಾರೆ, ಶಾಸಕನ ಮನೆ ಸುಟ್ಟಿದ್ದಾರೆ. ಇಂಥ ಕೇಸ್​ಗಳನ್ನು ವಾಪಸ್ ಪಡೆಯಲು ಹೋಗುತ್ತಿರುವುದು ಸರಿಯಲ್ಲ. ಇವರೆಲ್ಲ ರಾಜ್ಯದ ವಿರುದ್ಧ ಗಲಭೆ ಎದ್ದವರು. ಇದನ್ನು ಇಷ್ಟಕ್ಕೆ ಸುಮ್ಮನೆ ಬಿಡಲ್ಲ. ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಹಾಗೂ ಜನರ ಬಿಳಿ ತೆಗೆದುಕೊಂಡು ಹೋಗುತ್ತೇವೆ ಎಂದರು.

ಸರ್ಕಾರ ಆಡಳಿತದಲ್ಲೂ ಸರಿಯಿಲ್ಲ. ಕಾನೂನು ಸುವ್ಯವಸ್ಥೆಯಲ್ಲೂ ಸರಿಯಿಲ್ಲ. ಬಾಲಗ್ರಹ ಪೀಡಿತ ಸರ್ಕಾರ ಎಂದಿದ್ದೆ, ಇವರದ್ದು ಕೇವಲ ಬಾಲಗ್ರಹ ಪೀಡಿತ ಮಾತ್ರವಲ್ಲ ಸಂಪೂರ್ಣ ಎಡವಟ್ಟು ಸರ್ಕಾರ ಎಂದು ಬೊಮ್ಮಾಯಿ ಇದೇ ವೇಳೆ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಟೀಕಿಸಿದರು.

ಇದನ್ನೂ ಓದಿ: G.Parameshwar: ಸತ್ಯಾಂಶ ನೋಡಿ ಕಾನೂನಾತ್ಮಕ ಅವಕಾಶಗಳಿದ್ದರೆ ಕೇಸ್‌ ವಾಪಸ್: ಜಿ.ಪರಮೇಶ್ವರ್‌

Last Updated : Jul 26, 2023, 4:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.