ETV Bharat / state

ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ: ಸರ್ಕಾರದ ಬರ ಪರಿಹಾರಕ್ಕೆ ಬೊಮ್ಮಾಯಿ ಟೀಕೆ - ಮುಖ್ಯಮಂತ್ರಿ ಸಿದ್ದರಾಮಯ್ಯ

ಯಾವತ್ತೂ ರೈತರ ಪರ ಧ್ವನಿ ಎತ್ತುವುದಾಗಿ ಹೇಳಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸರ್ಕಾರ ರೈತರಿಗೆ ಬರ ಪರಿಹಾರದ ಹಣವನ್ನು ಕಡಿಮೆ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Former CM Basavaraja Bommai
ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Jan 6, 2024, 4:37 PM IST

ಬೆಂಗಳೂರು: "ರೈತರ ಹಿತಾಸಕ್ತಿ ಕಾಪಾಡುವುದು ಮತ್ತು ಅವರ ಹಕ್ಕನ್ನು ಕೊಡಿಸುವುದರಲ್ಲಿಯೇ ನನ್ನ ರಾಜಕೀಯ ಅಸ್ತಿತ್ವ ಇದೆ ಎಂದು ನಾನು ನಂಬಿದ್ದೇನೆ‌. ಅದಕ್ಕಾಗಿ ಸದಾ ನಾನು ರೈತರ ಪರ ಧ್ವನಿ ಎತ್ತಲು ಸಿದ್ಧನಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜಕೀಯ ಅಸ್ತಿತ್ವಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ರಾಜಕೀಯವಾಗಿ ತಿರುಗೇಟು ನೀಡಿದ್ದಾರೆ.

"ಮುಖ್ಯಮಂತ್ರಿಗಳೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ" ಎಂದು ಹೇಳಿದ್ದಾರೆ.

  • ಮುಖ್ಯಮಂತ್ರಿ @CMofKarnataka @siddaramaiah ಅವರೇ ತಾವು ಬಿಡುಗಡೆ ಮಾಡಿರುವ 105 ಕೋಟಿ ಎಷ್ಟು ಲಕ್ಷ ಜನ ರೈತರಿಗೆ ತಲುಪಲಿದೆ. ಅರೆಕಾಸಿನ ಮಜ್ಜಿಗೆಗೂ ಸಾಲುವುದಿಲ್ಲ. ಅಗಾಧ ಪ್ರಮಾಣದ ಬರ ಮತ್ತು ತಾವು ಬಿಡುಗಡೆ ಮಾಡಿರುವ ಹಣವನ್ನು ನೋಡಿದರೆ, ರೈತರಿಗೆ ಚಿಲ್ಲರೆ ಕಾಸಿನ ಭಿಕ್ಷೆ ಕೊಟ್ಟಂತೆ ಕಾಣುತ್ತದೆ.
    1/5

    — Basavaraj S Bommai (@BSBommai) January 6, 2024 " class="align-text-top noRightClick twitterSection" data=" ">

"ಎನ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣದ ಬಗ್ಗೆ ನಾವೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದರೆ, ನಿಮ್ಮನ್ನು ಆಯ್ಕೆ ಮಾಡಿ ಅಧಿಕಾರದ ಗದ್ದುಗೆಗೆ ಕೂರಿಸಿರುವ ರೈತಾಪಿ ವರ್ಗವನ್ನು ರಕ್ಷಿಸುವಂತದ್ದು ನಿಮ್ಮ ಕರ್ತವ್ಯ. ನೀವು ಕೂಡಲೇ ಸಂಪೂರ್ಣವಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.

"ಈಗಾಗಲೇ ಸಾಕಷ್ಟು ಕಾಲಹರಣ ಮಾಡಿದ್ದೀರಿ, ರಾಜ್ಯದ ಆರ್ಥಿಕ ಸ್ಥಿತಿ ಉತ್ತಮ ಇದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಯಾಕೆ ರೈತರ ಪರಿಹಾರವನ್ನು ಪೂರ್ಣ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ 18,000 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಿರುವ ರಾಜ್ಯ ಸರ್ಕಾರ 105 ಕೋಟಿ ಬಿಡುಗಡೆ ಮಾಡಿದ್ದು, ಶೇ 1ರಷ್ಟು ಪರಿಹಾರ ಸಿಕ್ಕಿಲ್ಲ ಎಂದು ರೈತಾಪಿ ವರ್ಗದವರು ಕೇಳುತ್ತಿದ್ದಾರೆ. ಮಾತಿನಲ್ಲಿ ಅಲ್ಲ ಕೃತಿಯಲ್ಲಿ ನಿಮ್ಮ ಬದ್ಧತೆ ತೋರಿಸಬೇಕು" ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.

"ಕಳೆದ ವರ್ಷ ಪ್ರವಾಹದ ಸಂದರ್ಭದಲ್ಲಿ ನಾವು ಕೇವಲ ಎರಡು ತಿಂಗಳಲ್ಲಿ ಎನ್​ಡಿಆರ್​ಎಫ್ ಮಾರ್ಗಸೂಚಿಗಿಂತ ಹೆಚ್ಚು ಒಟ್ಟು 2,031 ಕೋಟಿ ನಾವು ಬಿಡುಗಡೆ ಮಾಡಿದ್ದೇವೆ. ಹೀಗಾಗಿ ಈ ಪ್ರಶ್ನೆ ಕೇಳುವ ಹಕ್ಕು ನಮಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬರ ಅಧ್ಯಯನಕ್ಕೆ ಬಂದಿದ್ದೇನೆ, ಬೂಟಾಟಿಕೆ ಮಾಡಲು‌ ಬಂದಿಲ್ಲ: ಬಿ ವೈ ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.