ETV Bharat / state

ನಾವು ಹಾಗೆ ಹೇಳೇ ಇಲ್ಲ... ಬೇರೆ ವಿಶ್ಲೇಷಣೆ ಬೇಡ: ಹೆಚ್​ಡಿಕೆ ತಿರುಗೇಟು

ಬಿಜೆಪಿಗೆ ನಾವು ಬೆಂಬಲ ಕೊಡುವುದಾಗಿ ಹೇಳಿಲ್ಲ. ವಾಸ್ತವಾಂಶದ ಬಗ್ಗೆ ಹೇಳಿದ್ದೇವಷ್ಟೇ. ಬೇರೆ ರೀತಿಯ ವಿಶ್ಲೇಷಣೆಗಳು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಯಾವ ಪಕ್ಷದೊಂದಿಗೂ ನನಗೆ ವ್ಯಾಮೋಹ ಇಲ್ಲ : ಮಾಜಿ ಸಿಎಂ ಹೆಚ್​ಡಿಕೆ ತಿರುಗೇಟು
author img

By

Published : Nov 14, 2019, 6:55 PM IST

ಬೆಂಗಳೂರು: ಬಿಜೆಪಿ ಜೊತೆಗೂ ವ್ಯಾಮೋಹ ಇಲ್ಲ. ಕಾಂಗ್ರೆಸ್ ಜೊತೆಗೂ ವ್ಯಾಮೋಹ ಇಲ್ಲ. ಕರ್ನಾಟಕದ ಜನರ ಮೇಲೆ ನನ್ನ ವ್ಯಾಮೋಹ ಇದೆ. ಆ ಎರಡೂ ಪಕ್ಷದವರಿಗೆ ಅಗತ್ಯಬಿದ್ದಾಗ ನನ್ನ ಮೇಲೆ ವ್ಯಾಮೋಹ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಜೊತೆ ಸರಂಡರ್ ಆಗಿಲ್ಲ. ಯಾವುದೇ ಪಕ್ಷದ ಜೊತೆ ಸರಂಡರ್ ಆಗುವ ಪ್ರಶ್ನೆಯಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡಿದ್ದಾರೆ ಎಂದರು.

10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿದ್ದೇವೆ. ಮೂವರು ನಮ್ಮ ಶಾಸಕರು ಈಗ ಅನರ್ಹರಾಗಿದ್ದಾರೆ. ಅವರ 3 ಕ್ಷೇತ್ರಗಳನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಇನ್ನೂ ನಾಲ್ಕೈದು ಸ್ಥಾನ ಗೆಲ್ಲುವ ಯೋಜನೆ ಮಾಡುತ್ತಿದ್ದೇವೆ. ನಾವು ಈ ಸರ್ಕಾರದ ಬಗ್ಗೆ ಟೀಕೆ ಮಾಡದಿದ್ದರೂ, ನೆರೆಹಾವಳಿಗೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಡಿಸಿಎಂ ಗೋವಿಂದ ಕಾರಜೋಳ ಅವರು ನನಗೆ ಸವಾಲು ಹಾಕಿದ್ದಾರೆ. ಯಾವುದೇ ಸರ್ಕಾರ ಇರಲಿ, ರಾತ್ರೋರಾತ್ರಿ ಪರಿಹಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಕ್ಕೆ ಸಮಯ ಕೊಡುತ್ತೇನೆ ಎಂದು ಹೇಳಿದ್ದೆ. ನಾನು ಎಲ್ಲಿಯೂ ಕೂಡಾ ಬಿಜೆಪಿಗೆ ಬೆಂಬಲ ಕೊಡುವುದಾಗಿ ಹೇಳಿಲ್ಲ. ನಿನ್ನೆ ದೇವೇಗೌಡರು ವಾಸ್ತವಂಶದ ಬಗ್ಗೆ ಹೇಳಿದ್ದಾರೆ. 7 ಸ್ಥಾನಗಳನ್ನು ಗೆಲ್ಲದಿದ್ದರೆ ಯಡಿಯೂರಪ್ಪನವರಿಗೆ ಕಷ್ಟ ಆಗುತ್ತದೆ. ಕನಿಷ್ಠ 7 ಸ್ಥಾನ ಗೆದ್ದರೆ ಯಡಿಯೂರಪ್ಪ ಮುಂದುವರಿಯುತ್ತಾರೆ. ಇಲ್ಲವಾದರೆ ಸರ್ಕಾರ ಉಳಿಯುವುದಿಲ್ಲ ಎಂದಿದ್ದಾರೆಯೇ ಹೊರತು ನಾವು ಬೆಂಬಲ ಕೊಡುತ್ತೇವೆ ಎಂದು ದೇವೇಗೌಡರು ಹೇಳಿಲ್ಲ. ಬೇರೆ ರೀತಿಯ ವಿಶ್ಲೇಷಣೆಗಳು ಬೇಡ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಅಖಾಡಕ್ಕೆ ನಾಳೆಯಿಂದ ಇಳಿಯುತ್ತೇವೆ. ನಾನು ಸುಮ್ಮನೆ ಬಂದಿಲ್ಲ. ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಮ್ಮದು ಸಣ್ಣ ಪಕ್ಷ ಇರಬಹುದು. ಆದರೆ ನಮ್ಮ ಪಕ್ಷವನ್ನು ಬುಡಸಮೇತ ಕೀಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎದುರಾಳಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ನಿನ್ನೆಯ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮೂರು ಪಕ್ಷದವರು ಹೇಳಿಕೆಗಳನ್ನು ನೀಡಿದ್ದಾರೆ. ಹಾಲಿ ಸಿಎಂ ಮತ್ತು ವಿಪಕ್ಷ ನಾಯಕರು ಸೇಫ್ ಅಂತಾ. ಸಂಖ್ಯಾ ಬಲದ ಆಧಾರದ ಮೇಲೆ ನಿನ್ನೆ ದೇವೇಗೌಡರು ಹೇಳಿದ್ದಾರೆ. ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಬದಲಾಗಲಿ: ರಾಜ್ಯದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ನಮ್ಮನ್ನು ತೆಗೆದುಹಾಕಲು ಆಗಲ್ಲ. ಸಿದ್ದರಾಮಯ್ಯ ಅವರು ಅಹಂಕಾರ ಮತ್ತು ಬಾಡಿ ಲಾಂಗ್ವೇಜ್ ಬದಲಾಯಿಸಿಕೊಳ್ಳಬೇಕು. ಶ್ರೀರಾಮುಲು, ಯಡಿಯೂರಪ್ಪ ಬೇರೆ ಪಕ್ಷ ಮಾಡಿದ್ದರು. ಹೀಗಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಮ್ಮನ್ನು ಮುಗಿಸಲು ಹೋಗಿ ಅವರ ಮೇಲೆಯೇ ಕಲ್ಲು ಬಂಡೆ ಎಳೆದುಕೊಂಡರು. ಬಿಜೆಪಿ 105 ಸ್ಥಾನ ಬರಲು ಕೂಡ ನೀವೇ ಕಾರಣ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಗುಡುಗಿದರು.

ಅಗ್ನಿ ಪರೀಕ್ಷೆ: ಮೂರೂ ಪಕ್ಷಗಳಿಗೂ ಅಗ್ನಿ ಪರೀಕ್ಷೆ. ಉಪಚುನಾವಣೆಯ ಫಲಿತಾಂಶದ ನಂತರ ಪುನಃ ಮತ್ತೊಂದು ರೀತಿಯ ಪ್ರಕ್ರಿಯೆ ನಡೆಯುತ್ತದೆ ಎಂದು ಭವಿಷ್ಯ ನುಡಿದ ಹೆಚ್​ಡಿಕೆ, ಬಿಜೆಪಿಯವರು ಮತ ಪಡೆಯಲು ಅಕ್ರಮವಾಗಿ ಹಣ ತಲುಪಿಸೋ ಕೆಲಸ ಮಾಡ್ತಿದ್ದಾರೆ ಎಂದು ದೂರಿದರು. ಜೊತೆಗೆ ಸಿದ್ದರಾಮಯ್ಯ ಅವರು 12 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದಿದ್ದಾರೆ. ಉಪ ಚುನಾವಣೆ ಫಲಿತಾಂಶ ಇದಕ್ಕೆ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ತಿಳಿಸಿದರು.

Intro:ಬೆಂಗಳೂರು : ಬಿಜೆಪಿ ಜೊತೆಗೂ ವ್ಯಾಮೋಹ ಇಲ್ಲ. ಕಾಂಗ್ರೆಸ್ ಜೊತೇಗೂ ವ್ಯಾಮೋಹ ಇಲ್ಲ. ಕರ್ನಾಟಕದ ಜನರ ಮೇಲೆ ನನ್ನ ವ್ಯಾಮೋಹ ಇದೆ. ಆ ಎರಡೂ ಪಕ್ಷದವರಿಗೆ ಅಗತ್ಯ ಬಿದ್ದಾಗ ನನ್ನ ಮೇಲೆ ವ್ಯಾಮೋಹ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. Body:ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಜೊತೆ ಸರಂಡರ್ ಆಗಿಲ್ಲ. ಯಾವುದೇ ಪಕ್ಷದ ಜೊತೆ ಸರಂಡರ್ ಆಗುವ ಪ್ರಶ್ನೆಯಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡಿದ್ದಾರೆ ಎಂದು ಗರಂ ಆದರು.
ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪ್ರಕಟ ಮಾಡಿದ್ದೇವೆ. ಮೂವರು ನಮ್ಮ ಶಾಸಕರು ಈಗ ಅನರ್ಹರಾಗಿದ್ದಾರೆ. ಅವರ ಮೂರು ಕ್ಷೇತ್ರಗಳನ್ನು ಒಳಗೊಂಡಂತೆ. ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಇನ್ನೂ ನಾಲ್ಕೈದು ಸ್ಥಾನ ಗೆಲ್ಲುವ ಯೋಜನೆ ಮಾಡುತ್ತಿದ್ದೇವೆ. ನಾವು ಈ ಸರ್ಕಾರದ ಬಗ್ಗೆ ಟೀಕೆ ಮಾಡದಿದ್ದರೂ. ನೆರೆಹಾವಳಿಗೆ ತುತ್ತಾದ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಡಿಸಿಎಂ ಗೋವಿಂದ ಕಾರಜೋಳ ಅವರು ನನಗೆ ಸವಾಲು ಹಾಕಿದ್ದಾರೆ. ಯಾವುದೇ ಸರ್ಕಾರ ಇರಲಿ, ರಾತ್ರೋರಾತ್ರಿ ಪರಿಹಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಕ್ಕೆ ಸಮಯ ಕೊಡುತ್ತೇನೆ ಎಂದು ಹೇಳಿದ್ದೆ. ನಾನು ಎಲ್ಲಿಯೂ ಕೂಡಾ ಬಿಜೆಪಿಗೆ ಬೆಂಬಲ ಕೋಡುವುದಾಗಿ ಹೇಳಿಲ್ಲ. ನಿನ್ನೆ ದೇವೇಗೌಡರು ವಾಸ್ತವಂಶದ ಬಗ್ಗೆ ಹೇಳಿದ್ದಾರೆ. 7 ಸ್ಥಾನಗಳನ್ನು ಗೆಲ್ಲದಿದ್ದರೆ ಯಡಿಯೂರಪ್ಪನವರಿಗೆ ಕಷ್ಟ ಆಗುತ್ತದೆ. ಕನಿಷ್ಠ 7 ಸ್ಥಾನ ಗೆದ್ದರೆ ಯಡಿಯೂರಪ್ಪ ಮುಂದುವರಿಯುತ್ತಾರೆ. ಇಲ್ಲವಾದರೆ ಸರ್ಕಾರ ಉಳಿಯುವುದಿಲ್ಲ ಎಂದಿದ್ದಾರೆಯೇ ಹೊರತು ನಾವು ಬೆಂಬಲ ಕೊಡುತ್ತೇವೆ ಎಂದು ದೇವೇಗೌಡರು ಹೇಳಿಲ್ಲ. ಬೇರೆ ರೀತಿಯ ವಿಶ್ಲೇಷಣೆಗಳು ಬೇಡ ಎಂದು ಹೇಳಿದರು.
ನಾವು ಯಾವುದೇ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾರ ಜೊತೆಗೂ ಹೊಂದಾಣಿಕೆಯೂ ಇಲ್ಲ. ಹೊಸಕೋಟೆ ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲೂ ನಾವು ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು.
ಚುನಾವಣಾ ಅಖಾಡಕ್ಕೆ ನಾಳೆಯಿಂದ ಇಳಿಯುತ್ತೇವೆ. ನಾನು ಸುಮ್ಮನೆ ಬಂದಿಲ್ಲ. ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಮ್ಮದು ಸಣ್ಣ ಪಕ್ಷ ಇರಬಹುದು. ಆದರೆ ನಮ್ಮ ಪಕ್ಷವನ್ನು ಬುಡಸಮೇತ ಕೀಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎದುರಾಳಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ನಿನ್ನೆಯ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮೂರು ಪಕ್ಷದವರು ಹೇಳಿಕೆಗಳನ್ನು ನೀಡಿದ್ದಾರೆ.
ಹಾಲಿ ಸಿಎಂ ಮತ್ತು ವಿಪಕ್ಷ ನಾಯಕರು ಸೇಫ್ ಅಂತಾ. ನಿನ್ನೆ ನಮ್ಮ ಪಕ್ಷದ ವರಿಷ್ಠರು ಹೇಳಿದ್ರು. ಸಂಖ್ಯಾ ಬಲದ ಆಧಾರದ ಮೇಲೆ ದೇವೇಗೌಡರು ಹೇಳಿದ್ದಾರೆ. ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಯಾವುದೇ ಸರ್ಕಾರ ಇದ್ದರೂ ಇಂತಹ ಪರಿಸ್ಥಿತಿಯಲ್ಲಿ ಕೂಡಲೇ ಎಲ್ಲವನ್ನೂ ಸರಿ ಮಾಡುವುದಕ್ಕೆ ಸಾಧ್ಯವಿಲ್ಲ. ಸರ್ಕಾರಕ್ಕೆ ಕೆಲವು ಸಮಯ ಕೊಡಬೇಕಿದೆ ಎಂದು ಹೇಳಿದ್ದೆ. ಆದರೆ ಬಿಜೆಪಿ ಪರವಾಗಿ ನಾನು ಮಾತನಾಡಿರಲಿಲ್ಲ. ಯಡಿಯೂರಪ್ಪನವರು ನೆರೆ ವಿಚಾರದಲ್ಲಿ ಸಂಪೂರ್ಣ ವಿಫಲ ಆಗಿದ್ದಕ್ಕೆ
ನೈತಿಕವಾಗಿ ರಾಜಿನಾಮೆಕೋಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಆಗ್ರಹ ಮಾಡಿದರು. ಆದರೆ, ನಾನು ನೆರೆ ವಿಚಾರದಲ್ಲಿ ರಾಜಕೀಯ ಮಾಡೊಕೆ ಹೊಗಲಿಲ್ಲ. ನಿನ್ನೆ ದೇವೇಗೌಡರು ವಾಸ್ತವಂಶದ ಬಗ್ಗೆ ಹೇಳಿದ್ದಾರೆ. ಏಳು ಸ್ಥಾನ ಗಳನ್ನು ಗೆಲ್ಲದಿದ್ದರೆ ಯಡಿಯೂರಪ್ಪನವರಿಗೆ ಕಷ್ಟ ಆಗುತ್ತದೆ ಎಂದಿದ್ದಾರೆ. ನಾನು ಎಲ್ಲಿಯೂ ಕೂಡಾ ಬಿಜೆಪಿಗೆ ಬೆಂಬಲ ಕೋಡುವುದಾಗಿ ಹೇಳಿಲ್ಲ ಎಂದು ಹೇಳಿದರು.
ನಾನು ಅಧಿಕಾರದಲ್ಲಿದ್ದಾಗ 19 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ನೀಡಿದ್ದೇನೆ.
ಅವರ ಅವರ ಸ್ವಾರ್ಥಕ್ಕಾಗಿ ಬಿಜೆಪಿ ಗೆ ಹೊಗಿದ್ದಾರೆ. ಈಗ ಕುಮಾರಸ್ವಾಮಿ ಸರಿಯಿಲ್ಲ ಅಂತಾ ಟೀಕೆ ಮಾಡ್ತಾರೆ. ಬರಲಿ ಚುನಾವಣೆ ಪ್ರಚಾರಕ್ಕೆ ನಮ್ಮ ಕೊಡುಗೆ ಏನು ಎಂಬುವುದನ್ನು ಅಲ್ಲಿ ಹೇಳುತ್ತೇನೆ.
ನಮ್ಮದು ಚಿಕ್ಕ ಪ್ರಾದೇಶಿಕ ಪಕ್ಷ ಇರಬಹುದು. ಆದರೆ ನಾವು ಸುಮ್ಮನೆ ಕುಳಿತುಕೊಳ್ಳಲ್ಲ.
ನಮ್ಮ ಶಕ್ತಿ ಏನು ಎಂಬುವುದನ್ನು ತೋರಿಸುತ್ತೇವೆ ಎಂದು ಗುಡುಗಿದರು.
ಕೆ.ಆರ್.ಪೇಟೆ ಕ್ಷೇತ್ರದ ಪುಣ್ಯಾತ್ಮ(ನಾರಾಯಣಗೌಡ) ಅಯ್ಯೋ ಯಡಿಯೂರಪ್ಪ ಅಂತಾರೆ. ಕೆ.ಆರ್.ಪೇಟೆಗೆ ನಾನೇನು ಕೊಟ್ಟಿದ್ದೇನೆ ಅಂತ ತೆಗೀರಿ. ಯಶವಂತಪುರದ ಎಸ್.ಟಿ. ಸೋಮಶೇಖರ್ ಕೂಡ ಹಾಗೆ ಹೇಳಿದ್ದಾರೆ, ಆದರೆ ಈಗ ಗುತ್ತಿಗೆದಾರರನ್ನು ಕರೆಸುತ್ತೇನೆ. ಎಷ್ಟು ವಸೂಲಿ ಮಾಡಿದ್ದಾರೆ ಗೊತ್ತಾಗುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಬದಲಾಗಲಿ : ರಾಜ್ಯದಲ್ಲಿ ನಮ್ಮ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ನಮ್ಮನ್ನು ತೆಗೆದುಹಾಕಲು ಆಗಲ್ಲ. ಸಿದ್ದರಾಮಯ್ಯ ಅವರು ಅಹಂಕಾರ ಮತ್ತು ಬಾಡಿ ಲಾಂಗ್ವೇಜ್ ಬದಲಾಯಿಸಿಕೊಳ್ಳಬೇಕು. ಶ್ರೀರಾಮುಲು, ಯಡಿಯೂರಪ್ಪ ಬೇರೆ ಪಕ್ಷ ಮಾಡಿದ್ದರು. ಹೀಗಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ನಮ್ಮನ್ನು ಮುಗಿಸಲು ಹೋಗಿ ಅವರ ಮೇಲೆಯೇ ಕಲ್ಲು ಬಂಡೆ ಎಳೆದುಕೊಂಡರು. ಬಿಜೆಪಿ 105 ಸ್ಥಾನ ಬರಲು ಕೂಡ ನೀವೇ ಕಾರಣ ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಗುಡುಗಿದರು.
ಅಗ್ನಿ ಪರೀಕ್ಷೆ : ಮೂರೂ ಪಕ್ಷಗಳಿಗೂ ಅಗ್ನಿ ಪರೀಕ್ಷೆ. ಉಪಚುನಾವಣೆಯ ಫಲಿತಾಂಶದ ನಂತರ ಪುನಃ ಮತ್ತೊಂದು ರೀತಿಯ ಪ್ರಕ್ರಿಯೆ ನಡೆಯುತ್ತದೆ ಎಂದು ಭವಿಷ್ಯ ನುಡಿದ ಹೆಚ್ ಡಿಕೆ, ಬಿಜೆಪಿಯವರು ಮತ ಪಡೆಯಲು ಅಕ್ರಮವಾಗಿ ಹಣ ತಲುಪಿಸೋ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರು 12 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದಿದ್ದಾರೆ. ಉಪ ಚುನಾವಣೆ ಫಲಿತಾಂಶ ಇದಕ್ಕೆ ಉತ್ತರ ನೀಡಲಿದೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.