ETV Bharat / state

ಯಾರಿಗೆಲ್ಲ ಸಿಗಲಿದೆ ಗೊತ್ತಾ ಉಚಿತ ಕಾನೂನು ಸೇವೆ: ಈ ನೆರವು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?... ಇಲ್ಲಿದೆ ಮಾಹಿತಿ!

ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿ ಇಂದಿಗೆ 28 ವರ್ಷಗಳು ಕಳೆದಿವೆ. ವಿವಿಧೆಡೆ ಇಂದು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತದೆ.

Legal Services Authority
ಕಾನೂನು ಸೇವಾ ಪ್ರಾಧಿಕಾರ ರಚನೆಯಾಗಿ 28 ವರ್ಷ: ಸಾವಿರಾರು ಜನರಿಗೆ ನೆರವು
author img

By ETV Bharat Karnataka Team

Published : Nov 9, 2023, 1:27 PM IST

Updated : Nov 10, 2023, 6:30 AM IST

ಬೆಂಗಳೂರು: ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಭಾರತ. ಸಂವಿಧಾನದಲ್ಲಿ ಹೇಳಿರುವಂತೆ ಯಾವೊಬ್ಬ ಪ್ರಜೆಯೂ ನ್ಯಾಯದಾನದಿಂದ ವಂಚಿತನಾಗಬಾರದು ಅಥವಾ ತಾರತಮ್ಯಕ್ಕೆ ಒಳಗಾಗದೆ ಸಮಾನ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ 1996 ನವೆಂಬರ್ 9 ರಂದು ಕಾನೂನು ಸೇವೆಗಳ ಪ್ರಾಧಿಕಾರ ರಚನೆ ಮಾಡಲಾಯಿತು.

ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ 1987ರ ಅಡಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿ 28 ವರ್ಷ ಕಳೆದಿದ್ದು, ಇದರಿಂದ ರಾಜ್ಯಾದ್ಯಂತ ಸಾವಿರಾರು ಬಡ, ಅವಿದ್ಯಾವಂತರಿಗೆ ಕಾನೂನು ನೆರವು ಲಭ್ಯವಾಗಿದೆ. ಇನ್ನೇನು ತನಗೆ ಕಾನೂನು ಹೋರಾಟ ನಡೆಸುವ ಶಕ್ತಿಯೇ ಇಲ್ಲ. ನಮಗೆ ನ್ಯಾಯ ಸಿಗುವುದು ಕಷ್ಟ ಎಂಬ ಆತಂಕದಲ್ಲಿದ್ದ ಜನತೆಗೆ ಈ ಪ್ರಾಧಿಕಾರ ಅಗತ್ಯ ನೆರವು ನೀಡುತ್ತಿದೆ. ಸಾವಿರಾರು ಜನರಿಗೆ ಕಾನೂನಿನ ಮೂಲಕ ಪರಿಹಾರ ಒದಗಿಸಲಾಗಿದೆ.

ಈ ಕಾಯ್ದೆಯ 1987ರ ಸೆಕ್ಷನ್ 12ರ ಮೂಲಕ ಸೂಚಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ವ್ಯಕ್ತಿಯು ಉಚಿತ ಕಾನೂನು ಸೇವೆ ಪಡೆಯಬಹುದು. ಈ ಅಧಿನಿಯಮದ ಅಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ ಪ್ರಾಧಿಕಾರಗಳನ್ನು ರಚಿಸಲಾಗಿದೆ. ಈ ಪ್ರಾಧಿಕಾರಗಳು ಆಯಾ ಮಟ್ಟದಲ್ಲಿ ಜನರ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿವೆ.

ಯಾರಿಗೆ ಈ ಸೇವೆ ಲಭ್ಯ: ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದವರು, ಮಹಿಳೆಯರು ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ, ಕೈಗಾರಿಕಾ ವಿನಾಶ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತುತ್ತಾದದವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ಮಾನಸಿಕ ಅಥವಾ ಬೇರೆ ಯಾವುದೇ ನ್ಯೂನ್ಯತೆ ಹೊಂದಿರುವವರು, ಜೀತಕ್ಕೊಳಗಾದವರು ಮತ್ತು ವಾರ್ಷಿಕ 1 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಎಲ್ಲಾ ವರ್ಗದ ಜಾತಿಯ ಜನರು ಈ ಪ್ರಾಧಿಕಾರದಡಿಯಲ್ಲಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಾಧಿಕಾರದಿಂದ ಉಚಿತ ಸೇವೆಗಳು: ಉಚಿತ ಕಾನೂನು ಸೇವೆ, ಉಚಿತ ಕಾನೂನು ಸಲಹೆ, ರಾಜಿ ಸಂಧಾನ ಹಾಗೂ ಜನತಾ ನ್ಯಾಯಾಲಯ ಶಿಬಿರಗಳನ್ನು ಆಯೋಜಿಸುವುದು. ಕಾನೂನು ಅರಿವು ಮೂಡಿಸುವ ಸಲುವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸೇವೆಗಳನ್ನು ಜನತೆ ಪಡೆದುಕೊಳ್ಳಬಹುದಾಗಿದೆ.

ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ ವ್ಯವಸ್ಥೆ, ಪರ್ಯಾಯ ವ್ಯಾಜ್ಯ ಪರಿಹಾರದ ವ್ಯವಸ್ಥೆ, ವ್ಯಾಜ್ಯ ಪೂರ್ವ ಸಮಸ್ಯೆಗಳ ಪರಿಹಾರ, ಕಾನೂನು ಸಾಕ್ಷರತೆ ನೀಡುವುದು ಈ ಪ್ರಾಧಿಕಾರದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ: ಉಚಿತ ಕಾನೂನು ನೆರವು ಪಡೆಯಲು ಬಯಸಿದರೆ, ಹತ್ತಿರದ ನ್ಯಾಯಾಲಯದ ಆವರಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಬಂಧಪಟ್ಟ ರಾಜ್ಯ ಕಾನೂನು ಸೇವೆಗಳ ಸಮಿತಿ, ಹೈಕೋರ್ಟ್ ಆವರಣದಲ್ಲಿರುವ ಹೈಕೋರ್ಟ್ ಕಾನೂನು ಸೇವಾ ಸಮಿತಿ, ಸವೋಚ್ಚ ನ್ಯಾಯಾಲಯದ ಪ್ರಕರಣಗಳಿಗಾಗಿ ಸುಪ್ರೀಂಕೋರ್ಟ್ ಕಾನೂನು ಸೇವೆಗಳ ಸಮಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಾದ ಬಳಿಕ ದೂರು ಪರಿಶೀಲಿಸಿ ಪ್ರಾಧಿಕಾರ ವಕೀಲರನ್ನು ನೇಮಕ ಮಾಡಲಿದೆ.

ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಪ್ರತಿ ತಾಲೂಕಿನಲ್ಲಿ ಹಾಗೂ ಪ್ರತಿ ನ್ಯಾಯಾಲಯದಲ್ಲಿ ಕಾನೂನು ಘಟಕಗಳನ್ನು ಪ್ರಾರಂಭಿಸಲಾಗಿದೆ. ಈ ಘಟಕಗಳಲ್ಲಿ ಡ್ರಾಫ್ಟಿಂಗ್, ಟೈಪಿಂಗ್ ಕ್ಲರ್ಕ್ ಮತ್ತು ಪ್ಯಾನಲ್ ವಕೀಲರ ಶುಲ್ಕದಂತಹ ವೆಚ್ಚಗಳನ್ನು ಕಾನೂನು ಸೇವಾ ಸಂಸ್ಥೆಗಳು ಭರಿಸಿ, ಸೇವೆಯನ್ನು ಒದಗಿಸುತ್ತವೆ.

ಕಾನೂನು ಅರಿವು ಕಾರ್ಯಕ್ರಮ: ರಾಜ್ಯ ಮಟ್ಟದಲ್ಲಿ ಒಟ್ಟು 1,444 ಕಾನೂನು ಸೇವೆಗಳ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದ್ದು, 2,782 ಪ್ಯಾನಲ್ ವಕೀಲರು, 95 ಕಾನೂನು ನೆರವು ರಕ್ಷಣಾ ಸಲಹೆಗಾರರು ಮತ್ತು 4,848 ಅರೆಕಾಲಿಕ ಸ್ವಯಂ ಸೇವಕರು ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಮಿತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಸೂಚನೆಯಂತೆ ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ: ಬಿ ಎಸ್​ ಯಡಿಯೂರಪ್ಪ

Last Updated : Nov 10, 2023, 6:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.