ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಈಶಾನ್ಯ ವಿಭಾಗದ ಪೊಲೀಸರು 14 ವಿದೇಶಿಯರನ್ನು ವಶಕ್ಕೆ ಪಡೆದಿದ್ದಾರೆ. ಈಶಾನ್ಯ ವಿಭಾಗದ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ನೈಜೀರಿಯಾ, ತಾಂಜಾನಿಯಾ, ಕೀನ್ಯಾ, ಉಗಾಂಡ ಮೂಲದ ಒಟ್ಟು 9 ಪುರುಷರು ಹಾಗೂ ಐವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಉನ್ನತ ಶಿಕ್ಷಣ, ಉದ್ಯಮದ ಕಾರಣದಡಿ ವೀಸಾ ಪಡೆದು ಬಂದು ಅವಧಿ ಮುಗಿದ ಬಳಿಕವೂ ನೆಲೆ ನಿಂತಿದ್ದರು. ಸದ್ಯ ಆರೋಪಿಗಳನ್ನು ವಿದೇಶಿಗರ ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಈಶಾನ್ಯ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಅಕ್ರಮವಾಗಿ ಭಾರತ ಪ್ರವೇಶಿಸಿದ 14 ವಿದೇಶಿ ಪ್ರಜೆಗಳ ಬಂಧನ