ದೇವನಹಳ್ಳಿ: ವಿದೇಶಿ ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಮಾದಕ ವಸ್ತು ಸಾಗಣೆ ಮಾಡುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಅಂದಾಜು 8.31 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಗುಪ್ತಾಂಗದಲ್ಲಿ ಮಹಿಳೆ ಇಟ್ಟುಕೊಂಡಿದ್ದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ದೇಹದೊಳಗೆ ಇಷ್ಟೊಂದು ಮೌಲ್ಯದ ಮಾದಕ ದ್ರವ್ಯ ಸಿಕ್ಕಿದೆ. ಇಥಿಯೋಪಿಯ ಏರ್ ಲೈನ್ಸ್ ಇಟಿ690 ಮೂಲಕ ಅಡಿಸ್ ಅಬಾಬಾ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಮಾಡಿದ 'ಗುಟೇಮಾಲಾ' ದೇಶದ ಮಹಿಳೆಯನ್ನು ಬಂಧಿಸಲಾಗಿದೆ.
ತನ್ನ ಗುಪ್ತಾಂಗದಲ್ಲಿ 150 ಕೊಕೇನ್ ಮಾತ್ರೆಗಳನ್ನು ಟ್ಯೂಬ್ ರೀತಿಯಲ್ಲಿ ಇರಿಸಿಕೊಂಡಿದ್ದಳು. ಮಾತ್ರೆ ಮಾದರಿಯಲ್ಲಿ ಪತ್ತೆಯಾದ ಕೊಕೇನ್ ಅನ್ನು ಎರಡು ದಿನದಿಂದ ಇಟ್ಟು ಕೊಂಡಿದ್ದಳು ಎನ್ನಲಾಗಿದೆ. ಸುಮಾರು 1 ಕೆಜಿ ತೂಕದ ಕೊಕೇನ್ ಪತ್ತೆಯಾಗಿದೆ. ಎನ್ಡಿಪಿಎಸ್ ಕಾಯ್ದೆ ಅಡಿ ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಲಾಗಿದೆ.