ETV Bharat / state

ವೀಸಾ ಅವಧಿ ಮುಗಿದರೂ ವಾಪಸ್​ ಆಗದ ವಿದೇಶಿ ವಿದ್ಯಾರ್ಥಿಗಳು: ಅಪರಾಧ ಕೃತ್ಯದಲ್ಲಿ ಭಾಗಿಯಾದವರೆಷ್ಟು ಗೊತ್ತಾ..? - ಹಲವು ಅಪರಾಧ ಪ್ರಕರಣಗಳಲ್ಲಿ ವಿದೇಶಿಗರು ಭಾಗಿ

ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಹಲವು ಅಪರಾಧ ಪ್ರಕರಣಗಳಲ್ಲಿ ವಿದೇಶಿಗರು ಭಾಗಿಯಾಗಿರುವುದು ಹೆಚ್ಚಾಗಿ ಬೆಳಕಿಗೆ ಬರುತ್ತವೆ.

Foreign students not returning even after visa expiry
ವೀಸಾ ಅವಧಿ ಮುಗಿದರೂ ವಾಪಸ್ಸಾಗ ವಿದೇಶಿ ವಿದ್ಯಾರ್ಥಿಗಳು
author img

By

Published : Feb 11, 2023, 8:23 PM IST

ಬೆಂಗಳೂರು: ವ್ಯಾಸಂಗಕ್ಕೋಸ್ಕರ ವಿದೇಶದಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು ವೀಸಾ ಅವಧಿ ಮುಗಿದರೂ ವಾಪಸ್​ ಆಗದೇ ತಲೆ ಮರೆಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಅಪರಾಧ ಚಟುವಟಿಕೆಯಲ್ಲಿಯೂ ತೊಡಗಿಕೊಳ್ಳುತ್ತಿದ್ದಾರೆ. ಸದ್ಯ ಕಳೆದ ಮೂರು ವರ್ಷದಲ್ಲಿ ಈ ರೀತಿ 452 ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು, ಅದರಲ್ಲಿ 57 ವಿದೇಶಿಗರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಗೃಹ ಇಲಾಖೆಯಿಂದ ಲಭ್ಯವಾಗಿದೆ.

ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ವೀಸಾದಲ್ಲಿ ವಿದೇಶದಿಂದ ಬಂದು ರಾಜ್ಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 4,778 ಆಗಿದ್ದು, ಇವರಲ್ಲಿ ಬೆಂಗಳೂರು ನಗರಕ್ಕೆ 1690 ವಿದ್ಯಾರ್ಥಿಗಳು ಬಂದಿದ್ದರೆ, ಮೈಸೂರಿಗೆ 1279 ವಿದ್ಯಾರ್ಥಿಗಳು ಬಂದಿದ್ದಾರೆ. ಉಳಿದವರು ಇತರ ಜಿಲ್ಲೆಗಳಲ್ಲಿ ವಾಸವಿದ್ದಾರೆ. ವೀಸಾ ಅವಧಿ ಮುಗಿದ ನಂತರವೂ ಅನಧಿಕೃತವಾಗಿ 452 ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ವೀಸಾದಲ್ಲಿ ರಾಜ್ಯಕ್ಕೆ ಬಂದಿರುವ ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರ ವಿರುದ್ಧ 45 ಕೇಸ್​ಗಳು ದಾಖಲಾಗಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಹತ್ತು ಹಲವು ರಾಷ್ಟ್ರಗಳಿಂದ ಭಾರತಕ್ಕೆ ವಿದ್ಯಾರ್ಥಿ ವೀಸಾ ಪಡೆದು ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಕರ್ನಾಟಕಕ್ಕೂ ಸಾಕಷ್ಟು ವಿದ್ಯಾರ್ಥಿಗಳು ಬಂದು ವಿವಿಧ ಜಿಲ್ಲೆಗಳಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ದಾಖಲಾಗುತ್ತಿದ್ದಾರೆ. ಆದರೆ, ಈ ರೀತಿ ದಾಖಲಾದ ವಿದ್ಯಾರ್ಥಿಗಳಲ್ಲಿ ಕೆಲವರು ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ವಾಪಸ್​ ಆಗದೇ ಅಕ್ರಮವಾಗಿ ಇಲ್ಲಿಯೇ ನೆಲೆಯೂರುತ್ತಾರೆ. ತಲೆಮರೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ಅಪರಾಧ ಚಟುವಟಿಕೆಯಲ್ಲಿಯೂ ಭಾಗಿಯಾಗುತ್ತಿದ್ದಾರೆ. ಲಿಬಿಯಾ, ಉಗಾಂಡ, ಸೂಡಾನ್, ಯೆಮನ್, ನೈಜೀರಿಯಾ, ಸೌದಿ ಅರೇಬಿಯಾ, ಕಥಾರ್, ತಾಂಜೇನಿಯಾ, ಕಾಂಗೊ, ಐವರಿ ಕೋಸ್ಟ್, ಬಾಂಗ್ಲಾದೇಶ, ಇರಾನ್, ಘಾನಾ, ಆಫ್ರಿಕಾ, ಕೀನ್ಯಾ, ಇರಾಕ್ ದೇಶಗಳಿಗೆ ಸೇರಿದ ವಿದ್ಯಾರ್ಥಿಗಳು ಅಪರಾಧ ಕೃತ್ಯದಲ್ಲಿ ಭಾಗವಹಿಸಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಅಂಕಿ ಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ 35, ಮಂಗಳೂರು ನಗರದಲ್ಲಿ 1, ಹುಬ್ಬಳ್ಳಿ ಧಾರವಾಡದಲ್ಲಿ 7, ಮೈಸೂರು ನಗರದಲ್ಲಿ 2 ಕೇಸ್ ದಾಖಲಾಗಿವೆ. ಒಟ್ಟು 45 ಪ್ರಕರಣಗಳು ದಾಖಲಾಗಿದ್ದು, 57 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ಆಗಿದೆ. ಫಾರಿನರ್ಸ್ ಆ್ಯಕ್ಟ್, ಎನ್.ಡಿ.ಪಿ.ಎಸ್ ಕಾಯ್ದೆ ಮತ್ತು ವಿವಿಧ ಕಾಯ್ದೆಗಳ ಅನ್ವಯ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಮಾಹಿತಿಯನ್ನು ಪತ್ತೆ ಮಾಡಲು ಠಾಣೆಗಳಿಂದ ನುರಿತ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಿ ಕ್ರಮಕ್ಕೆ ಸೂಚಿಸಲಾಗಿದೆ. ಅಕ್ರಮವಾಗಿ ವಾಸಿಸುತ್ತಿರುವವ ವಿವರವನ್ನು ಆಯಾ ದೇಶಗಳಿಗೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿ, ವಿದೇಶಿ ಪ್ರಜೆಗಳ ಮೇಲೆ ದಾಖಲಾದ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಸಂಬಂಧಪಟ್ಟ ಇಲಾಖೆಯಿಂದ ನಿರ್ಗಮನ ಪರವಾನಗಿ ಪಡೆಯುವವರೆಗೂ ಡಿಟೆಂಷನ್ ಸೆಂಟರ್​ನಲ್ಲಿ ಇರಿಸಿ ಪ್ರಕರಣ ಇತ್ಯರ್ಥವಾದ ನಂತರ ಗಡಿಪಾರು ನಿಯಮ ಪಾಲಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ವಾಸಿಸಲು ಸಹಕಾರ ನೀಡುವವರ ಮತ್ತು ಶೈಕ್ಷಣಿಕ ಸಂಸ್ಥೆಗಳ ವಿರುದ್ಧವೂ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ಆದರೆ, ಈವರೆಗೂ ಯಾವುದೇ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾದ ಉದಾಹರಣೆ ಇಲ್ಲ, ವಿದ್ಯಾರ್ಥಿ ವೀಸಾ ಮೇಲೆ ಬಂದು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಕರಣ ಕುರಿತು ಶಿಕ್ಷಣ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಿಲ್ಲ, ಯಾವ ಸಂಸ್ಥೆಯ ಮೇಲೆಯೂ ಕ್ರಿಮಿನಲ್ ಕೇಸ್ ದಾಖಲಿಸಿಲ್ಲ. ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಪಡಿಸಿಲ್ಲ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿರುವ ಶೇ 40 ರಷ್ಟು ಭಾರತೀಯರ ಉದ್ಯೋಗ ನಷ್ಟ: ವರ್ಕಿಂಗ್ ವೀಸಾ ಉಳಿಸಿಕೊಳ್ಳಲು ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.