ETV Bharat / state

ಯಾವುದೇ ಹೋರಾಟಕ್ಕೆ ಗೋಕಾಕ್ ಚಳವಳಿ ಮಾರ್ಗದರ್ಶನ ಆಗಬೇಕು: ಹೆಚ್.ಡಿ.ದೇವೇಗೌಡ

author img

By

Published : Jun 18, 2022, 11:05 PM IST

ಪರಿಷ್ಕೃತ ಪಠ್ಯ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಯಾವುದೇ ಹೋರಾಟಕ್ಕೆ ಗೋಕಾಕ್ ಚಳವಳಿ ನಮಗೆ ಮಾರ್ಗದರ್ಶನ ಆಗಬೇಕು ಎಂದು ಹೇಳಿದ್ದಾರೆ.

ಯಾವುದೇ ಹೋರಾಟಕ್ಕೆ ಗೋಕಾಕ್ ಚಳವಳಿ ಮಾರ್ಗದರ್ಶನ, ಶಕ್ತಿ ಮೀರಿ ಬೆಂಬಲ ಕೊಡುತ್ತೇನೆ: ಹೆಚ್.ಡಿ.ದೇವೇಗೌಡ

ಬೆಂಗಳೂರು: ಯಾವುದೇ ಹೋರಾಟಕ್ಕೆ ಗೋಕಾಕ್ ಚಳವಳಿ ನಮಗೆ ಮಾರ್ಗದರ್ಶನ ಆಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರೆ ನೀಡಿದರು. ಪರಿಷ್ಕೃತ ಪಠ್ಯ ವಿರುದ್ಧದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಕಾರ್ಯಕ್ರಮ‌ ಹಾಕಿದರೆ ಅದನ್ನು ಹೇಗೆ ಅಂತ್ಯ ಗೊಳಿಸಬೇಕು?. ಅದನ್ನು ಹೇಗೆ ಸಾಧಿಸಬೇಕು ಅನ್ನೋದರ ಬಗ್ಗೆ ಗೋಕಾಕ್ ಚಳವಳಿ ನಮಗೆ ಮಾರ್ಗದರ್ಶನ. ಆವಾಗ ರಾಜಕುಮಾರ್ ಇದ್ದರು. ಇಡೀ ರಾಜ್ಯದ ಜನತೆ ಅದರಲ್ಲಿ ಪಾಲ್ಗೊಂಡಿದ್ದರು. ಅದೊಂದು ದೊಡ್ಡ ಹೋರಾಟ. ನಾನು ಶಕ್ತಿ ಮೀರಿ ಏನು ಬೆಂಬಲ ಕೊಡಬಹುದೋ ಅದನ್ನು ಕೊಡುತ್ತೇನೆ ಎಂದು ತಿಳಿಸಿದರು.

ಬಸವ ಕೃಪಾ ಪಾಲನೆ ಮಾಡಿ: ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ನಾನು ಜೆಡಿಎಸ್ ನವನಲ್ಲ, ಸಾಬ್ರಲ್ಲ. ನಾನು ಕುವೆಂಪು ಅಭಿಮಾನಿ, ಅದಕ್ಕೆ ಬಂದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿಗೆ ಕೇಶವ ಕೃಪಾದಲ್ಲಿ ಜಾಸ್ತಿ ದಿವಸ ಇರೋದಕ್ಕೆ ಆಗುವುದಿಲ್ಲ. ನೀವು ಬಸವ ಕೃಪಾದವರು. ಬಸವ ಕೃಪಾವನ್ನು ಪಾಲನೆ ಮಾಡಿ. ವೋಟಿಗೆ ರಾಜಕಾರಣ ಮಾಡಬೇಡಿ. ಶಿವಕುಮಾರ್ ಹೊಸ ಪಠ್ಯಪುಸ್ತಕ ಹರಿದು ಹಾಕಿ ಹೊಸ ಸರ್ಕಾರ ಬರುತ್ತೆ ಎಂದು ಹೇಳಿದರು. ಹೌದು, ಮುಂದೆ ಈ ನಾಡನ್ನು ಆಳುವವರು ಕೆಂಪೇಗೌಡರ ವಂಶಸ್ಥರು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ, ಜ್ಞಾನ ಪ್ರಕಾಶ್ ಸ್ವಾಮೀಜಿ, ಶಾಸಕರಾದ ಸೌಮ್ಯ ರೆಡ್ಡಿ, ರಾಮಲಿಂಗ ರೆಡ್ಡಿ, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳು, ಹೋರಾಟಗಾರರು ಉಪಸ್ಥಿತರಿದ್ದರು.

ಓದಿ: ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​ ಕುಟುಂಬಸ್ಥರ ಭೇಟಿ ಮಾಡಲಿದ್ದಾರೆ ಪ್ರಧಾನಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.