ETV Bharat / state

ಬೆಂಗಳೂರಲ್ಲಿ‌ ಅಭ್ಯರ್ಥಿ ಭಾವಚಿತ್ರವಿರುವ ದಿನಸಿ ಕಿಟ್​​ ವಶಕ್ಕೆ

author img

By

Published : Mar 18, 2023, 10:25 PM IST

ಬೆಂಗಳೂರಿನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ದಿನಸಿ ಕಿಟ್​​ಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

food-kits-seized-by-police-in-bengaluru
ಬೆಂಗಳೂರಲ್ಲಿ‌ ಅಭ್ಯರ್ಥಿ ಭಾವಚಿತ್ರವಿರುವ ದಿನಸಿ ಕಿಟ್​​ ವಶಕ್ಕೆ

ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವೊಂದರ ಸ್ವತಂತ್ರ್ಯ ಅಭ್ಯರ್ಥಿಯ ಭಾವಚಿತ್ರ ಹೊಂದಿದ್ದ ದಿನಸಿ ವಸ್ತುಗಳ‌ ಬ್ಯಾಗ್​ಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಭಾವಚಿತ್ರ ಮುದ್ರಿಸಿರುವ ದಿನಸಿ ಕಿಟ್ ಇದಾಗಿದೆ ಎಂದು ತಿಳಿದುಬಂದಿದೆ.

ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ನೀಡಲೆಂದು ಸಿದ್ಧಪಡಿಸಿದ್ದ ಕಿಟ್​ಗಳನ್ನು ಯಶವಂತಪುರದ ಆರ್​ ಎಂ ಸಿ ಯಾರ್ಡ್ ಮಾರ್ಕೆಟ್​ನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಬಿಬಿಎಂಪಿಯ ಮಾರಪ್ಪನ ಪಾಳ್ಯ ವಾರ್ಡಿನ ಅಸಿಸ್ಟೆಂಟ್ ಇಂಜಿನಿಯರ್​​ಗೆ ಬಂದ ಮಾಹಿತಿಯ ಅನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಪರಿಶೀಲನೆ ವೇಳೆ ಸುಮಾರು 415 ಗೋದಿ ಹಿಟ್ಟಿನ ಚೀಲಗಳು, 1,350 ಮೈದಾ ಹಿಟ್ಟಿನ ಚೀಲಗಳು, 200 ಕಡಲೆ ಹಿಟ್ಟಿನ ಚೀಲ, 700 ರವೆ ಚೀಲ, 1,010 ಬಾಕ್ಸ್ ಬೆಲ್ಲ, 32 ಬಾಕ್ಸ್ ಹಪ್ಪಳ, 1,950 ಉಪ್ಪಿನ ಚೀಲಗಳು ಪತ್ತೆಯಾಗಿದೆ. ಎಲ್ಲವನ್ನೂ ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿದ್ಯುತ್ ಸಂಪರ್ಕ ನವೀಕರಣಗೊಳಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.