ETV Bharat / state

ಫುಡ್ ಫ್ಯಾಕ್ಟರಿ ಸಿಬ್ಬಂದಿ ಕಿಡ್ನಾಪ್ ಕೇಸ್: ಮಹಾಲಕ್ಷ್ಮಿ ಲೇ ಔಟ್​ ಪೊಲೀಸರಿಂದ ಆರು ಜನರ ಬಂಧನ

ಫುಡ್​ ಫ್ಯಾಕ್ಟರಿ ಸಿಬ್ಬಂದಿ ಅಪಹರಿಸಿದ್ದ ಆರು ಜನರನ್ನು ಮಹಾಲಕ್ಷ್ಮಿ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಆರು ಜನರ ಬಂಧನ
ಆರು ಜನರ ಬಂಧನ
author img

By

Published : Aug 26, 2021, 3:03 PM IST

ಬೆಂಗಳೂರು: ಫುಡ್​ ಫ್ಯಾಕ್ಟರಿಯ ಸಿಬ್ಬಂದಿಯನ್ನು ಅಪಹರಿಸಿ ಮಾಲೀಕರಿಗೆ ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿ ಖಾಸಗಿ ಚಾನಲ್​ನ ವರದಿಗಾರ ಹಾಗೂ ರೌಡಿಶೀಟರ್ ಸೇರಿದಂತೆ ಆರು ಮಂದಿಯನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಚಾನೆಲ್ ವರದಿಗಾರ, ಕುಖ್ಯಾತ ರೌಡಿಶೀಟರ್ ಕುಳ್ಳಿ ರಮೇಶ್, ಸಹಚರರಾದ ದುರ್ಗೇಶ್, ಹರೀಶ್, ಅರವಿಂದ್ ಹಾಗೂ ವಿವೇಕ್ ಎಂಬುವರನ್ನು ಬಂಧಿಸಲಾಗಿದೆ. ಕುರುಬರಹಳ್ಳಿಯಲ್ಲಿ‌‌ ನಿತೇಶ್ ಎಂಬುವರಿಗೆ ಸೇರಿದ ಆಹಾರ ಸಾಮಗ್ರಿ ವಿತರಿಸುವ ಸಾಯಿ ಫುಡ್ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಶ್ರೀನಿವಾಸ್ ಕೆಲಸ ಮಾಡುತ್ತಿದ್ದರು.

ನಾಲ್ಕು ತಿಂಗಳ ಹಿಂದೆ ಖಾಸಗಿ ಚಾನೆಲ್ ವರದಿಗಾರ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕ್ಯಾಮೆರಾದ ಜೊತೆ ಏಕಾಏಕಿ ಫ್ಯಾಕ್ಟರಿಗೆ ನುಗ್ಗಿದ್ದ ಈ ವೇಳೆ, ನಿಮ್ಮ‌ ಫ್ಯಾಕ್ಟರಿಯಲ್ಲಿ ದಿನಾಂಕ ಮುಗಿದ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದೀರಾ. ಇದು ಕಾನೂನು ಬಾಹಿರ ಎಂದು ಹೇಳಿ ವಿಡಿಯೋ ಚಿತ್ರೀಕರಣ ಮಾಡಿದ್ದ. ಇದಾದ ಕೆಲ ದಿನಗಳ ಬಳಿಕ ಕರೆ ಮಾಡಿ ಗಡುವು ಮೀರಿದ ವಸ್ತುಗಳ‌ ಮಾರಾಟ ಕುರಿತಂತೆ ನಮ್ಮ ಬಳಿ ವಿಡಿಯೋ ಇದೆ.‌

ಹಣ ನೀಡದಿದ್ದರೆ ಸುದ್ದಿ ವಾಹಿನಿಗಳಿಗೆ ನೀಡುವುದಾಗಿ ಬೆದರಿಸಿದ್ದ. ಕಳೆದ ಜು. 17 ರಂದು ಆಹಾರ ಸಾಮಗ್ರಿ ಸರಬರಾಜು ಮಾಡುವ ವೇಳೆ ಆರೋಪಿಗಳು ಫ್ಯಾಕ್ಟರಿ ಕಾರು ಅಡ್ಡಗಟ್ಟಿ ವಾಹನ ಜೊತೆ ಸಿಬ್ಬಂದಿ ಅಪಹರಿಸಿದ್ದರು ಎನ್ನಲಾಗಿದೆ. ಸಿಬ್ಬಂದಿ ಮೂಲಕ ಮ್ಯಾನೇಜರ್​ಗೆ ಕರೆ ಮಾಡಿಸಿ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.‌

ಈ ಸಂಬಂಧ ಮಾಲೀಕ, ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ, ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ಕಾಂತರಾಜ್ ನೇತೃತ್ವದ ತಂಡ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಿರುವುದಾಗಿ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಇದನ್ನೂ ಓದಿ: ಅಪಶಕುನ ಎಂದು ಪತಿ, ಅತ್ತೆ - ಮಾವ ಕಿಚಾಯಿಸಿದ ಆರೋಪ: ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

ಬಂಧಿತ ಆರೋಪಿಗಳಲ್ಲಿ ಕುಳ್ಳಿ ರಮೇಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು‌, ಈತನ ವಿರುದ್ಧ 20 ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿವೆ. ಈತನಿಗೆ ಪರಿಚಿತನಾಗಿದ್ದ ಯುಟ್ಯೂಬ್ ಚಾನೆಲ್ ವರದಿಗಾರನ ಜತೆ ಸೇರಿಕೊಂಡು ಉದ್ಯಮಿ ಹಾಗೂ ವ್ಯಾಪಾರಸ್ಥರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದರು. ಮರ್ಯಾದೆಗೆ ಹೆದರಿ ಯಾರು ದೂರು ನೀಡುತ್ತಿರಲಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.