ಬೆಂಗಳೂರು: ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಅವರು ಜನರನ್ನು ರಸ್ತೆಯಲ್ಲಿ ಕೂರಿಸಿ ಆಹಾರ ಹಂಚಿದ್ದಾರೆ. ಇದನ್ನ ಡ್ರೋನ್ ಮುಖಾಂತರ ಚಿತ್ರೀಕರಿಸಿ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸಿದ್ದಾರೆ.
ಕೊರೊನಾ ಸೋಂಕು ಇದ್ದರೂ ಹಲವೆಡೆ ಸೋಷಿಯಲ್ ಡಿಸ್ಟೆನ್ಸ್ ಮರೆಯುವ ಜನರು ಇದನ್ನ ನೋಡಿಯಾದರು ಬುದ್ದಿ ಕಲಿಯಿರಿ ಎಂದು ಸಾರ್ವಜನಿಕರ ಬಳಿ ಮನವಿ ಮಾಡಿದ್ದಾರೆ. ಸದ್ಯ ಇಂತಹ ಪ್ರಯೋಗ ನಡೆಸಿ ಜನರಲ್ಲಿ ಅರಿವು ಮೂಡಿಸರುವ ಪೊಲೀಸ್ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.