ETV Bharat / state

ವರುಣನ ಅಬ್ಬರದ ನಡುವೆಯೂ ಲಾಲ್ ಬಾಗ್ ನತ್ತ ಹರಿದು ಬರುತ್ತಿದೆ ಜನಸಾಗರ

ಕೋವಿಡ್ ಲಾಕ್​ಡೌನ್ ನಂತರ ಮೊದಲ ಬಾರಿ ನಡೆಯುತ್ತಿರುವ ಲಾಲ್​ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವೀಕೆಂಡ್ ದಿನವಾದ ಭಾನುವಾರ ಜನಸಾಗರವೇ ಸಸ್ಯಕಾಶಿಯತ್ತ ಹರಿದುಬಂದಿದ್ದು, ಪುನೀತ್ ಸ್ಪೇಷಲ್​​ ಫ್ಲವರ್ ಶೋ ಸೌಂದರ್ಯವನ್ನು ಕಣ್ತುಂಬಿಕೊಂಡರು.

Flower show in Lalbagh
ಲಾಲ್ ಬಾಗ್
author img

By

Published : Aug 7, 2022, 4:39 PM IST

ಬೆಂಗಳೂರು: ಸುರಿವ ಮಳೆಯ ನಡುವೆಯೂ ಸಸ್ಯಕಾಶಿ ಲಾಲ್​ಬಾಗ್​ಗೆ ಜನರ ದಂಡು ಆಗಮಿಸುತ್ತಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನವನ್ನು ಕುಟುಂಬ ಸಮೇತರಾಗಿ ಬಂದು ಜನ ವೀಕ್ಷಣೆ ಮಾಡುತ್ತಿದ್ದಾರೆ. ಮಕ್ಕಳಿಗೆ 25 ರೂ. ವಯಸ್ಕರಿಗೆ 75 ರೂ. ಟಿಕೆಟ್ ದರ ನಿಗದಿ ಮಾಡಿದ್ದು, ಮಳೆಯನ್ನು ಲೆಕ್ಕಿಸದೆ ಕೊಡೆಗಳನ್ನು ಹಿಡಿದು ಜನರು ಸಸ್ಯಕಾಶಿ ಪ್ರವೇಶ ಮಾಡುತ್ತಿದ್ದಾರೆ.

ಗಾಜಿನ ಮನೆಯ ಸುತ್ತಲೂ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಭಾವಚಿತ್ರಗಳು ಗಮನ ಸೆಳೆಯುತ್ತಿವೆ. ಅಲ್ಲಲ್ಲಿ ಎಲ್ಇಡಿ ಪರದೆಗಳನ್ನು ಅಳವಡಿಸಿ ರಾಜ್, ಪುನೀತ್ ಅಭಿಯನದ ದೃಶ್ಯಗಳ ಪ್ರದರ್ಶನ ಮಾಡಲಾಗುತ್ತಿದೆ. ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಗಳು ಜನರನ್ನು ಸೆಳೆಯುತ್ತಿವೆ. ಜನರು ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಲಾಲ್​ ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ

ಈ ಬಾರಿಯ ಸ್ಪೆಷಲ್​ ಅಂದ್ರೆ ರಾಜ್ ಕುಮಾರ್ ಅವರ ಗಾಜನೂರು ಮನೆ, ಸಂಪೂರ್ಣವಾಗಿ ಹೂವುಗಳಿಂದಲೇ ಮನೆಯ ಪ್ರತಿಕೃತಿ ನಿರ್ಮಿಸಲಾಗಿದೆ. ಹೂವಿನ ಲೋಕದಲ್ಲಿ ರಾಜ್ ಮನೆ ಅರಳಿದಂತೆ ಭಾಸವಾಗುತ್ತಿದೆ. ರಾಜ್, ಪುನೀತ್ ಅಭಿಮಾನಿಗಳಿಗೆ ಇದು ವಿಶೇಷ ಆಕರ್ಷಣೆಯಾಗಿದೆ.

ಮಕ್ಕಳ ಸೆಳೆಯುತ್ತಿರುವ ಪುನೀತ್: ಈ ಬಾರಿಯ ಫ್ಲವರ್ ಶೋಗೆ ಪುನೀತ್ ಹೆಚ್ಚಿನ ಮೆರಗು ನೀಡಿದ್ದಾರೆ. ಪುನೀತ್ ಸ್ಪೇಷಲ್​​ ಹಿನ್ನೆಲೆ ಫಲಪುಷ್ಪ ಪ್ರದರ್ಶನ ಮಕ್ಕಳನ್ನು ಸೆಳೆಯುತ್ತಿದೆ. ಕುಟುಂಬ ಸಮೇತರಾಗಿ ಬರುತ್ತಿರುವ ಜನ ಹೂ ಲೋಕದ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ಮೂರು ದಿನಗಳಿಂದ 6 ಲಕ್ಷಕ್ಕೂ ಹೆಚ್ಚಿನ ಜನ ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇಂದು ಕನಿಷ್ಠ 2.5 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶಿ ಪ್ರವಾಸಿಗರ ಭೇಟಿ: ವಿದೇಶಿ ಪ್ರವಾಸಿಗರನ್ನೂ ಲಾಲ್ ಬಾಗ್ ಕೈಬೀಸಿ ಕರೆಯುತ್ತಿದೆ. ಬೆಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಫ್ಲವರ್ ಶೋ ವೀಕ್ಷಣೆಗೆ ಬರುತ್ತಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ. ವಿದೇಶಿ ಪ್ರವಾಸಿಗರಿಗೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಸಹಕಾರ ನೀಡುತ್ತಿದ್ದು, ಫ್ಲವರ್ ಶೋ ಕುರಿತು ವಿವರಣೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಲಾಲ್‍ಬಾಗ್​ ಫ್ಲವರ್ ಶೋ: ಆಕರ್ಷಕ ಹೂಗಳಲ್ಲಿ ಮೈದಳೆದ ಪುನೀತ್​- ರಾಜ್​ಕುಮಾರ್- ಫೋಟೋಗಳು

ಭಾನುವಾರವಾದ ಕಾರಣ ಇಂದು ಲಾಲ್ ಬಾಗ್ ನತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಲಾಲ್ ಬಾಗ್ ಸುತ್ತಮುತ್ತ ಇಡೀ ದಿನ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ನಿರ್ವಹಣೆಗೆ ಹರಸಾಹಸ ಪಡುತ್ತಿದ್ದಾರೆ. ಲಾಲ್ ಬಾಗ್​ನ ನಾಲ್ಕೂ ದ್ವಾರಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಾಂತಿನಗರ ಟಿಟಿಎಂಸಿ, ಲಾಲ್​ಬಾಗ್​ನ ಹಾಪ್ ಕಾಮ್ಸ್ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.