ETV Bharat / state

ಈ ವಾರದೊಳಗೆ ಕೇಂದ್ರದಿಂದ ನೆರೆ‌ ಪರಿಹಾರ ಬಿಡುಗಡೆ: ಬಸವರಾಜ್ ಬೊಮ್ಮಾಯಿ - ಔರಾದ್ಕರ್ ವರದಿ ಶೀಘ್ರ ಜಾರಿ

ವಿಕಾಸಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳಿವೆ. ಈ ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವರಾಜ್ ಬೊಮ್ಮಾಯಿ
author img

By

Published : Oct 4, 2019, 3:41 PM IST

ಬೆಂಗಳೂರು: ಬಹುತೇಕ ಈ ವಾರದೊಳಗೆ ನೆರೆ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳು ಇರಬಹುದು. ಅದು ನನಗೆ ಗೊತ್ತಿಲ್ಲ. ಆ ಸಂಬಂಧ ಸ್ಪಷ್ಟೀಕರಣ ಕೇಳುವುದು ಸಹಜ. ಕೇಂದ್ರದಲ್ಲಿ ಉನ್ನತ‌ ಮಟ್ಟದ ಸಭೆ ನಡೆಯಲಿದ್ದು, ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರದಿಂದ ನೆರೆ‌ ಪರಿಹಾರ ಬಿಡುಗಡೆಯಾಗಲಿದೆ

ನೆರೆ ಪರಿಹಾರದಲ್ಲಿ ಬೇರೆ ಬೇರೆ ಹಂತಗಳಿವೆ. ನೆರೆ ಪರಿಹಾರ ಸಂಬಂಧ ಗ್ರೌಂಡ್​​ನಲ್ಲಿ ಕೆಲಸ ನಿಲ್ಲಿಸಿಲ್ಲ. ನಾವು ಹಣ‌ ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದ ಹಣ ಬಂದರೆ ಪರಿಹಾರ ಕಾಮಗಾರಿ ಚುರುಕು ಪಡೆಯುತ್ತದೆ ಎಂದು ತಿಳಿಸಿದರು.

ಕಳೆದ ಬಾರಿಯೂ ನೆರೆ ಪರಿಹಾರ ಕೇಳಿದ ಒಂದೂವರೆ ತಿಂಗಳ ಬಳಿಕ‌ ಪರಿಹಾರ ಘೋಷಣೆಯಾಗಿತ್ತು. ಡಿಸಿ ಅಕೌಂಟ್​​ನಲ್ಲಿ ದುಡ್ಡು ಇದೆ, ಕೆಲಸಗಳು ನಿಂತಿಲ್ಲ. ಯಾವ ನೆರೆ ಪರಿಹಾರ ಕೆಲಸ ಮಾಡಬೇಕು ಅದೆಲ್ಲ ನಡೆಯುತ್ತಿದೆ ಎಂದು ತಿಳಿಸಿದರು.

ಔರಾದ್ಕರ್ ವರದಿ ಶೀಘ್ರ ಜಾರಿ:

ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಅಕ್ಟೋಬರ್ 6 ರಂದು ಸಿಎಂ ಜತೆ ಸಭೆ ನಡೆಸುತ್ತೇವೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ವರದಿ ಜಾರಿಗೆ ಸಿಎಂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ.‌ ಅತೀ ಶೀಘ್ರದಲ್ಲೇ ವರದಿ ಜಾರಿಯಾಗಲಿದೆ. ಸಿಎಂ ಸಭೆ ಬಳಿಕ ಮತ್ತೊಮ್ಮೆ ವರದಿಯನ್ನು ‌ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಬಳಿಕ ಗೃಹ ಇಲಾಖೆ ಈ ಸಂಬಂಧ ಅಂತಿಮ‌ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_02_BOMMAI_BYTE_SCRIPT_7201951

ಈ ವಾರದೊಳಗೆ ಕೇಂದ್ರದಿಂದ ನೆರೆ‌ ಪರಿಹಾರ ಬಿಡುಗಡೆಯಾಗಲಿದೆ: ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಬಹುತೇಕ ಈ ವಾರದೊಳಗೆ ನೆರೆ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನೆರೆಪರಿಹಾರ ಹಣಕ್ಕೆ ಕೆಲ ಪ್ರಕ್ರಿಯೆಗಳು ಇವೆ. ನಮ್ಮ ಲೆಕ್ಕಕ್ಕೂ, ಅವರ ಲೆಕ್ಕಕ್ಕೂ ವ್ಯತ್ಯಾಸಗಳು ಇರಬಹುದು, ಅದು ನನಗೆ ಗೊತ್ತಿಲ್ಲ. ಆ ಸಂಬಂಧ ಸ್ಪಷ್ಟೀಕರಣ ಕೇಳುವುವುದು ಸಹಜ. ಕೇಂದ್ರದಲ್ಲಿ ಉನ್ನತ‌ ಮಟ್ಟದ ಸಭೆ ನಡೆಯಲಿದ್ದು, ವಾರದೊಳಗೆ ಬಹುತೇಕ ಪರಿಹಾರ ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಪರಿಹಾರದಲ್ಲಿ ಬೇರೆ ಬೇರೆ ಹಂತಗಳಿವೆ. ನೆರೆ ಪರಿಹಾರ ಸಂಬಂಧ ಗ್ರೌಂಡ್ ನಲ್ಲಿ ಕೆಲಸ ನಿಲ್ಲಿಸಿಲ್ಲ. ನಾವು ಹಣ‌ ಬಿಡುಗಡೆ ಮಾಡಿದ್ದೇವೆ. ಕೇಂದ್ರದಿಂದ ಹಣ ಬಂದರೆ ಪರಿಹಾರ ಕಾಮಗಾರಿ ಚುರುಕು ಪಡೆಯುತ್ತದೆ ಎಂದು ತಿಳಿಸಿದರು.

ಕಳೆದ ಬಾರಿಯೂ ನೆರೆ ಪರಿಹಾರ ಕೇಳಿದ ಒಂದೂವರೆ ತಿಂಗಳ ಬಳಿಕ‌ ಪರಿಹಾರ ಘೋಷಣೆಯಾಗಿತ್ತು. ಡಿಸಿ ಅಕೌಂಟ್ ನಲ್ಲಿ ದುಡ್ಡು ಇದೆ, ಕೆಲಸಗಳು ನಿಂತಿಲ್ಲ. ಯಾವ ನೆರೆ ಪರಿಹಾರ ಕೆಲಸ ಮಾಡಬೇಕು ಅದೆಲ್ಲ ನಡೆಯುತ್ತಿದೆ ಎಂದು ತಿಳಿಸಿದರು.

ಔರಾದ್ಕರ್ ವರದಿ ಶೀಘ್ರ ಜಾರಿ:

ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಅಕ್ಟೋಬರ್ 6 ರಂದು ಸಿಎಂ ಜತೆ ಸಭೆ ನಡೆಸುತ್ತೇವೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ವರದಿ ಜಾರಿಗೆ ಸಿಎಂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ.‌ ಅತಿ ಶೀಘ್ರದಲ್ಲೇ ವರದಿ ಜಾರಿಯಾಗಲಿದೆ. ಸಿಎಂ ಸಭೆ ಬಳಿಕ ಮತ್ತೊಮ್ಮೆ ವರದಿಯನ್ನು ‌ಆರ್ಥಿಕ ಇಲಾಖೆಗೆ ಕಳುಹಿಸಲಾಗುವುದು. ಬಳಿಕ ಗೃಹ ಇಲಾಖೆ ಈ ಸಂಬಂಧ ಅಂತಿಮ‌ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.