ETV Bharat / state

Power tariff: ವಿದ್ಯುತ್ ತೆರಿಗೆಯನ್ನು ಶೇ 3ಕ್ಕಿಳಿಸಲು ಸರ್ಕಾರಕ್ಕೆ ಎಫ್​ಕೆಸಿಸಿಐ ಮನವಿ - ಗೃಹಜ್ಯೋತಿ ಹೊರೆ

ವಿದ್ಯುತ್ ತೆರಿಗೆಯನ್ನು ಶೇ 9 ರಿಂದ 3ಕ್ಕೆ ಇಳಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ತಿಳಿಸಿದ್ದಾರೆ.

ಎಫ್​ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ
ಎಫ್​ಕೆಸಿಸಿಐ ಅಧ್ಯಕ್ಷ ಬಿ ವಿ ಗೋಪಾಲರೆಡ್ಡಿ
author img

By

Published : Jun 23, 2023, 4:33 PM IST

ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆ ಹೇಳಿಕೆಡ್ಡಿ

ಬೆಂಗಳೂರು: ಕೆಇಆರ್‌ಸಿ ತನ್ನ ಸುಂಕದ ಆದೇಶದಲ್ಲಿ ಉದ್ಯಮ ವಲಯಕ್ಕೆ ವಿದ್ಯುತ್ ದರ ಹೆಚ್ಚಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಹೆಚ್‌ಟಿ ಕೈಗಾರಿಕೆಗಳ ಮೇಲೆ ವಿಧಿಸುವ ಶೇ. 9ರಷ್ಟು ವಿದ್ಯುತ್ ತೆರಿಗೆಯನ್ನು ಶೇ.3 ರಷ್ಟು ಇಳಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ವೇಳೆ, ಇಂಧನ ಶುಲ್ಕದಲ್ಲಿ (Fuel Escalation charges) ರಿಯಾಯಿತಿ ನೀಡಲು ಹಾಗೂ ಇತರೆ ರಾಜ್ಯಗಳಲ್ಲಿ ಎಂಎಸ್ಂ.ಇ ನೀತಿ ಹಾಗೂ ಕಾಯ್ದೆ ಇರುವಂತೆ ರಾಜ್ಯದಲ್ಲಿಯೂ ಕಾಯ್ದೆ ರಚನೆ ಮಾಡುವಂತೆ ಒತ್ತಾಯಿಸಿದರು.

ನಿಯೋಗದ ಮನವಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಾಯ್ಯ, ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ತಿಳಿಸಿದ್ದಾರೆ. ಅಲ್ಲದೇ, ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆಇಆರ್‌ಸಿ ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದಿದ್ದಾರೆ. ನಿಯೋಗ ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ , ಕಾಸಿಯಾ, ಎಫ್‌ಕೆಸಿಸಿಐ ಅವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಫ್‌ಕೆಸಿಸಿಐ ಪದಾಧಿಕಾರಿಗಳಾದ ರಮೇಶ್ ಚಂದ್ರ ಲಾಹೋಟಿ, ಎಂ.ಜಿ. ಬಾಲಕೃಷ್ಣ , ಡಾ.ಪ್ರಸಾದ್, ಬಿ.ಟಿ. ಮನೋಹರ್ ಉಪಸ್ಥಿತರಿದ್ದರು.

ಸಿಎಂ ಭೇಟಿ ಬಳಿಕ ಎಫ್​ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ಮಾತನಾಡಿ, "ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೇವೆ. ಇಂಧನ ಸಚಿವರೂ ಇದ್ದರು. ಇಂಧನ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊರೆ ಆಗ್ತಿದೆ. ವಿದ್ಯುತ್ ದರ ಏರಿಕೆಯಿಂದ ಡಬಲ್ ಬಿಲ್ ಬಂದಿದೆ. ಕೈಗಾರಿಕೆಗಳಿಗೆ ಬಹಳ ಹೊಡೆತ ಬಿದ್ದಿದೆ. ವಿದ್ಯುತ್ ಟ್ಯಾಕ್ಸ್ ಅನ್ನು 9% ದಿಂದ 3%ಗೆ ಇಳಿಸಲು ಮನವಿ ಮಾಡಿದ್ದೇವೆ" ಎಂದರು.

"ಕೆಲವೊಂದು ನಿಯಮಗಳನ್ನು ಸಡಿಲ‌ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಅಧಿಕಾರಿಗಳು ಪರಿಶೀಲನೆಗೆ ಬಂದು ಕಿರುಕುಳ ಕೊಡ್ತಾರೆ. ಅದನ್ನು ಸರಿ ಮಾಡಿಕೊಡಿ ಅಂಥಾ ಕೇಳಿದ್ದೇವೆ. ಸೋಮವಾರ ಮತ್ತೊಂದು ಸಭೆ ಕರೆದಿದ್ದಾರೆ. ಕೆಇಆರ್​ಸಿ ಬಗ್ಗೆ ಕಾಮೆಂಟ್ ಮಾಡಕ್ಕಾಗಲ್ಲ. ಮೇ ನಲ್ಲಿ ಬಂದ ಆರ್ಡರ್ ಇಂಪ್ಲಿಮೆಂಟ್ ಮಾಡಿದ್ದಾರೆ. ಹಂತಹಂತವಾಗಿ ಬಿಲ್ ಕಲೆಕ್ಟ್ ಮಾಡಿ ಅಂತಾ ಹೇಳಿದ್ದೇವೆ".

"ಎರಡು ತಿಂಗಳು ಒಟ್ಟಿಗೆ ಬಿಲ್ ಕೊಟ್ಟಿದ್ದಾರೆ. ಅದು ಹೊರೆ ಆಗಿದೆ. ಸರ್ಕಾರ ವಿದ್ಯುತ್ ದರ ಹೆಚ್ಚಿಸಿದ್ದಿದ್ರೆ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬಹುದಿತ್ತು. ಕೆಇಆರ್​ಸಿ ಸ್ವತಂತ್ರ ಸಂಸ್ಥೆ, ನಾವೇನು ಮಾಡಕ್ಕಾಗಲ್ಲ. ಟ್ಯಾಕ್ಸ್ ಇಳಿಸಿದ್ರೆ 45 ಪೈಸೆ ಕಡಿಮೆ ಆಗುತ್ತೆ. ಎಫ್​ಕೆಸಿಸಿಐ, ಕಾಸಿಯಾ ಎಲ್ಲರನ್ನೂ ಸೋಮವಾರ ಮೀಟಿಂಗ್​ಗೆ ಕರೆದಿದ್ದಾರೆ. ಅಲ್ಲಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ" ಎಂದರು.

ಕೆಇಆರ್​ಸಿ ಆದೇಶ ಪ್ರಶ್ನಿಸಿ ಮೇಲ್ಮನವಿ : "ವಿದ್ಯುತ್ ದರ ಹೆಚ್ಚಿಸಿ ಕೆಇಆರ್​ಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ‌. ಸಿಎಂ ಜೊತೆ ವಿದ್ಯುತ್ ದರ ಹೆಚ್ಚಳದ ಬಗ್ಗೆ ಮಾತುಕತೆ ನಡೆಸಿದ್ದೇವೆ. ತೆರಿಗೆಯನ್ನು 9% ದಿಂದ 1% ಗೆ ಇಳಿಕೆ ಮಾಡಲು ಮನವಿ ಮಾಡಿದ್ದೇವೆ" ಎಂದು ಕಾಸಿಯಾ ಅಧ್ಯಕ್ಷರು ತಿಳಿಸಿದರು.

ಇದನ್ನೂ ಓದಿ: ಗುತ್ತಿಗೆದಾರರ ನಿಯೋಗದಿಂದ ಸಿಎಂ ಭೇಟಿ.. ಈಗಿನ ಸಚಿವ, ಶಾಸಕರು ಕಮಿಷನ್ ಕೇಳಿದರೆ ಅದನ್ನೂ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.