ETV Bharat / state

ಕೈಗಾರಿಕಾ ಟೌನ್​​ಷಿಪ್​​ಗಳ ಘೋಷಣೆಗೆ ಎಫ್​​​ಕೆಸಿಸಿಐ ಅಧ್ಯಕ್ಷ ಜನಾರ್ಧನ ಆಗ್ರಹ - ರಫ್ತು ಮಾಡುವವರು ಖಾತರಿ ಪತ್ರ

ಎಫ್​​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಟೌನ್​ಷಿಪ್ ನಿರ್ಮಾಣ ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ರು. ಪ್ರಸ್ತುತ ಪೀಣ್ಯ, ಹಾರೋಹಳ್ಳಿ ಹಾಗೂ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ಟೌನ್​​ಷಿಪ್ ನಿರ್ಮಿಸುವ ಅಗತ್ಯವಿದೆ ಎಂದರು.

ಎಫ್​​​ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ
author img

By

Published : Oct 3, 2019, 6:39 PM IST

ಬೆಂಗಳೂರು: ಕೈಗಾರಿಕಾ ಟೌನ್​​ಷಿಪ್​​ ನಿರ್ಮಿಸುವಂತೆ ಎಫ್​​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೈಗಾರಿಕಾ ಟೌನ್​​ಷಿಪ್ (Industrial township)ಗೆ ಆಗ್ರಹಿಸಿದ್ರು. 25 ವರ್ಷ ಕಳೆದರೂ ಸಹ ರಾಜ್ಯ ಸರ್ಕಾರ ಕೇವಲ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್​​ಷಿಪ್ ಹೊರತುಪಡಿಸಿ ಬೇರೆ ಇನ್ಯಾವ ಟೌನ್​​ಷಿಪ್​​ಘೋಷಣೆ ಮಾಡಿಲ್ಲ.

ಬಂದ ಎಲ್ಲಾ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಟೌನ್​​ಷಿಪ್ ನಿರ್ಮಾಣದ ನಂತರ ಗ್ರಾಮ ಪಂಚಾಯಿತಿಗೆ ಶೇ. 60 ಸಂಗ್ರಹಿಸಿದ ತೆರಿಗೆಯನ್ನು ಕೊಡುತ್ತೇವೆ. ನಾವು ಉಳಿದ 40 ಭಾಗವನ್ನು ಉಪಯೋಗಿಸಿಕೊಂಡು ಟೌನ್​​ಷಿಪ್ ನಿರ್ವಹಣೆ ಮಾಡುತ್ತೇವೆ. ಪ್ರಸ್ತುತ ಪೀಣ್ಯ, ಹಾರೋಹಳ್ಳಿ ಹಾಗೂ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ಟೌನ್​​ಷಿಪ್ ಅಗತ್ಯವಿದೆ. ಇಲ್ಲದಿದ್ದರೆ ಕೈಗಾರಿಕಾ ವಲಯ ಅಭಿವೃದ್ಧಿ ಆಗುವುದಿಲ್ಲ ಎಂದು ಸರ್ಕಾರಗಳ ನಡೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು.

ಎಫ್​​​ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ

ಬ್ಯಾಂಕ್​ಗಳ ವಿಲೀನದ ನಂತರ ಬ್ಯಾಕಿಂಗ್ ಸೇವೆಗಳು ಕ್ಷೀಣ:

ಅನೇಕ ಬ್ಯಾಂಕ್​ಗಳು ವಿಲೀನವಾಗುತ್ತಿವೆ. ಇದರಿಂದ ಬ್ಯಾಂಕ್ ಶಾಖೆಗಳು ಹಾಗೂ ಸಿಬ್ಬಂದಿ ಕಡಿಮೆಯಾಗುತ್ತಿದ್ದು, ಬ್ಯಾಂಕ್ ನೀಡುವ ಸೇವೆಯ ಗುಣಮಟ್ಟ ಕ್ಷೀಣಿಸುತ್ತಿದೆ. ರಫ್ತು ಮಾಡುವವರು ಖಾತರಿ ಪತ್ರ (letter of credit) ಪಡೆಯಲು 15 ದಿನಗಳು ಬೇಕಾಗುತ್ತದೆ. ಠೇವಣಿ ಮಾಡುವುದಕ್ಕೆ 2 ಗಂಟೆಗಳು ಬೇಕು. ಹೀಗೆಯೇ ಆದರೆ ಬಹಳ ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 90 ದಿನಕ್ಕೆ ಎನ್​ಪಿಎ ಮಾಡುತ್ತಿದ್ದಾರೆ. ಇದನ್ನು ಬದಲಿಸಿ 180 ದಿನದವರೆಗೆ ಕಾಲಾವಕಾಶ ನೀಡಬೇಕು. ಈ ಕುರಿತು ನಾನು ಕೇಂದ್ರ ಮಂತ್ರಿ ನಿತೀನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.

Intro:Body:ಕೈಗಾರಿಕಾ ಟೌನ್ ಷಿಪ್ ಗಳ ಘೋಷಣೆಗೆ ಆಗ್ರಹ; ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟ ಎಫ್ ಕೆ ಸಿ ಸಿ ಐ

ಬೆಂಗಳೂರು: ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ ಆರ್ ಜನಾರ್ಧನ ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೈಗಾರಿಕಾ ವಲಯದ ಹಲವು ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯಸರ್ಕಾರಕ್ಕೆ ಮಾಡಿದರು.

ಕೈಗಾರಿಕಾ ಟೌನ್ ಷಿಪ್ (Industrial township)ಗೆ ಆಗ್ರಹಿಸಿದ ಸಿ ಆರ್ ಜನಾರ್ಧನ 1993ರಲ್ಲಿ ಭಾರತ ಸರ್ಕಾರ 74ನೆ ಸಂವಿಧಾನ ತಿದ್ದುಪಡಿಯಿಂದ ಕೈಗಾರಿಕಾ ಟೌನ್ ಷಿಪ್ ಗಳ ಘೋಷಣೆ ಸುಲಭವಾಗಿದೆ. 25 ವರ್ಷ ಕಳೆದರೂ ಸಹ ರಾಜ್ಯ ಸರ್ಕಾರ ಕೇವಲ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಟೌನ್ ಷಿಪ್ ಹೊರತು ಪಡಿಸಿ ಬೇರೆ ಇನ್ಯಾವ ಟೌನ್ ಷಿಪ್ ನನ್ನು ಘೋಷಣೆ ಮಾಡಿಲ್ಲ. ಬಂದ ಎಲ್ಲಾ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಟೌನ್ ಷಿಪ್ ನಿರ್ಮಾಣದ ನಂತರ ಗ್ರಾಮ ಪಂಚಾಯಿತಿಗೆ ಶೇ.60 ಸಂಗ್ರಹಿಸಿದ ತೆರಿಗೆಯನ್ನು ಕೊಡುತ್ತೇವೆ ನಾವು ಉಳಿದ 40 ಬಾಗವನ್ನು ಉಪಯೋಗಿಸಿಕೊಂಡು ಟೌನ್ ಷಿಪ್ ನಿರ್ವಹಣೆ ಮಾಡುತ್ತೇವೆ. ಪ್ರಸ್ತುತವಾಗಿ ಪೀಣ್ಯ, ಹಾರೋಹಳ್ಳಿ ಹಾಗೂ ಇನ್ನಿತರ ಕೈಗಾರಿಕಾ ಪ್ರದೇಶಗಳಿಗೆ ಟೌನ್ ಷಿಪ್ ಅಗತ್ಯವಿದೆ, ಇಲ್ಲದಿದ್ದರೆ ಕೈಗಾರಿಕೆ ವಲಯ ಅಭಿವೃದ್ಧಿ ಆಗುವುದಿಲ್ಲ ಎಂದು ಸರ್ಕಾರಗಳ ನಡೆಗೆ ತಮ್ಮ ಅಸಮಾಧಾನ ಹೊರಹಾಕಿದರು.

ಬ್ಯಾಂಕ್ ಗಳ ವಿಲೀನದ ನಂತರ ಬ್ಯಾಕಿಂಗ್ ಸೇವೆಗಳು ಕ್ಷೀಣ:

ಅನೇಕ ಬ್ಯಾಂಕ್ಗಳು ವಿಲೀನವಾಗುತ್ತಿದೆ, ಇದರಿಂದ ಬ್ಯಾಂಕ್ ಶಾಖೆಗಳು ಹಾಗೂ ಸಿಬ್ಬಂದಿ ಕಡಿಮೆಯಾಗುತ್ತಿದ್ದು ಬ್ಯಾಂಕ್ ನೀಡುವ ಸೇವೆಯ ಗುಣಮಟ್ಟ ಕ್ಷೇಣಿಸುತ್ತಿದೆ. ರಫ್ತು ಮಾಡುವವರು ಖಾತರಿ ಪತ್ರ (letter of credit) ಪಡೆಯಲು 15 ದಿನಗಳು ಬೇಕಾಗುತ್ತದೆ, ಠೇವಣಿ ಮಾಡುವುದಕ್ಕೆ 2 ಗಂಟೆಗಳು ಬೇಕು ಹೇಗ್ ಆದರೆ ಬಹಳ ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 90 ದಿನಕ್ಕೆ ಎನ್ ಪಿ ಎ ಮಾಡುತ್ತಿದ್ದಾರೆ ಇದನ್ನು ಬದಲಿಸಿ 180 ದಿನದವರೆಗೆ ಕಾಲಾವಕಾಶ ನೀಡಬೇಕು, ಇದನ್ನು ನಾನು ಕೇಂದ್ರ ಮಂತ್ರಿ ನಿತಿನ್ ಗಡ್ಕರಿಗೆ ಮಾಡಿದ್ದೇನೆ ಎಂದು ಜನಾರ್ಧನ ತಿಳಿಸಿದರು.

ಅಲ್ಲದೆ ಎಫ್ ಕೆ ಸಿ ಸಿ ಐ ಒಟ್ಟು 35 ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮುಂದಿಟ್ಟಿದೆ ಹಾಗೂ ಬೇಡಿಕೆಗಳ ಪೂರೈಕೆಯಿಂದ ದೇಶದಲ್ಲಿ ಆಗುತ್ತಿರುವ ಆರ್ಥಿಕ ಹಿಂಜರಿತದ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ ಆರ್ ಜನಾರ್ಧನ ವಿಶ್ವಾಸ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.