ಬೆಂಗಳೂರು: ಅಲೆಮಾರಿಗಳ ಸೋಗಿನಲ್ಲಿ ನೆಲ್ಲೂರಿನಿಂದ ಮಾದಕ ವಸ್ತು ಹ್ಯಾಶಿಶ್ ಆಯಿಲ್ ಸಪ್ಲೈ ಮಾಡುತ್ತಿದ್ದ ಅಂತರ ರಾಜ್ಯ ಖತರ್ ನಾಕ್ ಖದೀಮರನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಮಾಸ್ಟರ್ ಮೈಂಡ್ ಬೆಂಗಳೂರಿನ ಪ್ರತಿಷ್ಠಿತ ಪಬ್ಗಳಲ್ಲಿ ಡಿಜೆಯಾಗಿ ಕೆಲಸ ಮಾಡುತ್ತಿದ್ದ ಜೂಡ್ ಹ್ಯಾರಿಸ್, ಶ್ರೀನಿವಾಸ್, ವಂತಲಾ ಪ್ರಹ್ಲಾದ್, ಮಲ್ಲೇಶ್ವರಿ, ಸತ್ಯವತಿ ಎಂಬುವವರನ್ನು ಬಂಧಿತ ಆರೋಪಿಗಳು.
ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕು ಹಾಗೂ ಸೆಂಥಿಪಲ್ಲಿ ಅರಣ್ಯಕ್ಕೆ ಅಧಿಕಾರಿಗಳ ಕಣ್ಣು ತಪ್ಪಿಸಿ ನುಗ್ಗುತ್ತಿದ್ದರು. ಕಾಡಿನಲ್ಲಿ 30 ಕಿಲೋ ಮೀಟರ್ ಸಂಚರಿಸಿ ಗಾಂಜಾ ಬೆಳೆದು ಹ್ಯಾಶಿಶ್ ಆಯಿಲ್ ತಯಾರಿಸುತ್ತಿದ್ದರು. ಕೊಚ್ಚಿನ್, ಚೆನ್ನೈ, ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮಾರಾಟ ಜಾಲ ಹೊಂದಿದ್ದರು. ಆರೋಪಿಗಳು ದಂಧೆಯ ಯಾವುದೇ ಸಾಕ್ಷ್ಯ ಸಿಗಬಾರದೆಂದು ಮೊಬೈಲ್ ಫೋನ್, ಗುರುತಿನ ಚೀಟಿ ಬಳಸುತ್ತಿರಲಿಲ್ಲ.
ಇದನ್ನೂ ಓದಿ: ತೀರ್ಥಹಳ್ಳಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಆರಗ ಜ್ಞಾನೇಂದ್ರ
ಈ ಗ್ಯಾಂಗ್ ಬೆನ್ನು ಬಿದ್ದಿದ್ದ ಸಿಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ಡಿಜೆ ಜೂಡ್ ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದವರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ 4 ಕೋಟಿ ಮೌಲ್ಯದ 5 ಕೆ.ಜಿ ಹ್ಯಾಶಿಶ್ ಆಯಿಲ್, 6 ಕೆ.ಜಿ ಗಾಂಜಾ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.