ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆ ಹಾಡಹಾಗಲೇ ರೌಡಿಶೀಟರ್ ಹರೀಶ್ನನ್ನು ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ರಕ್ಷಿತ್, ನೆಲ್ಸನ್, ಅವಿನಾಶ್, ಸುಭಾಷ್ ಮತ್ತು ಇಂದ್ರಜಿತ್ ಬಂಧಿತ ಅರೋಪಿಗಳು. ಬಸವೇಶ್ವರ ನಗರ ನಿವಾಸಿ ಹರೀಶ್ ಕೊಲೆಯಾಗಿದ್ದ ರೌಡಿಶೀಟರ್. ಈ ಹಿಂದೆ 2017 ರಲ್ಲಿ ರಕ್ಷಿತ್ ಎಂಬಾತನ ಮೇಲೆ ಹರೀಶ್ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಹರೀಶ್ನನ್ನು ಬಾಣಸವಾಡಿ ಠಾಣೆಗೆ ಬರುವಂತೆ ಸೂಚಿಸಲಾಗಿತ್ತು. ಬಾಣಸವಾಡಿ ಪೊಲೀಸ್ ಠಾಣೆಗೆ ಆಗಮಿಸಿ ಹೊರಗೆ ಬಂದ ಹರೀಶ್, ಬಳಿಕ ತಾನೇ ರಕ್ಷಿತ್ಗೆ ಫೋನ್ ಮಾಡಿ ಅವಾಜ್ ಹಾಕಿದ್ದಾನಂತೆ. ಇದರಿಂದ ಕೋಪಗೊಂಡ ರಕ್ಷಿತ್, ಗ್ಯಾಂಗ್ ಕಟ್ಟಿಕೊಂಡು ಬಂದು ಹರೀಶ್ಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಪೊಲೀಸ್ ಠಾಣೆಯಿಂದ ಹೊರ ಬರುವ ವಿಚಾರ ತಿಳಿದು, ಹರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದನು.