ಬೆಂಗಳೂರು: ಪ್ರಥಮ ಪಿಯುಸಿಯ 2020-21ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಅವಧಿಯನ್ನು ಫೆಬ್ರವರಿ 6ರವರೆಗೆ ವಿಸ್ತರಸಲಾಗಿತ್ತು. ಇದೀಗ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವಿ ಮೇರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.
ಪಿಯು ತರಗತಿಗಳು ತಡವಾಗಿ ಆರಂಭವಾದ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿಗೆ ಅನುಕೂಲವಾಗಲು ಫೆಬ್ರವರಿ 13ರವರೆಗೆ ಅವಧಿ ವಿಸ್ತರಿಸಲಾಗಿದೆ.

ದಾಖಲಾತಿ ಶುಲ್ಕವನ್ನು ಖಜಾನೆಗೆ ಕಾರ್ಯನಿರತ ಮಾರನೇ ದಿನದಂದು ಕಡ್ಡಾಯವಾಗಿ ಪಾವತಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.