ETV Bharat / state

ಓದುಗರಿಗೆ ದೇಶದಲ್ಲೇ ಮೊದಲ ಡಿಜಿಟಲ್ ಗ್ರಂಥಾಲಯ ಆ್ಯಪ್ ಬಿಡುಗಡೆ.. - ಸಚಿವ ಸುರೇಶ್ ಕುಮಾರ್

ನಮ್ಮ ದೇಶದಲ್ಲಿಯೇ ಮೊಟ್ಟಮೊದಲ ಯೋಜನೆ ಇದಾಗಿದೆ. ಡಿಜಿಟಲೀಕರಣಗೊಳಿಸಲು ಮತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಿಕೆಗೆ ಪ್ರವೇಶ ಒದಗಿಸಲು ರಾಜ್ಯಮಟ್ಟದ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಈ ಯೋಜನೆ ಅಡಿಯಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಹಾಗೂ 216 ತಾಲೂಕು ಗ್ರಂಥಾಲಯಗಳು, ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳನ್ನು ಒಳಗೊಂಡಿದೆ.

First Digital Library App launched in the country for readers
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್
author img

By

Published : Feb 26, 2020, 6:13 PM IST

ಬೆಂಗಳೂರು: ಡಿಜಿಟಲ್ ಗ್ರಂಥಾಲಯ, ಡಿಜಿಟಲ್ ಆ್ಯಪ್ ಹಾಗೂ ಪುಸ್ತಕ ಪ್ರದರ್ಶನದ‌ ಕಾರ್ಯಕ್ರಮ‌ಕ್ಕೆ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ ನೀಡಿದರು.

ಹಂಪಿ ನಗರದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಸೇರಿ ಇತರರು ಭಾಗಿಯಾಗಿದ್ರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್

ಇದೇ ವೇಳೆ ಮಾತಾನಾಡಿದ ಸಚಿವ ಸುರೇಶ್ ಕುಮಾರ್, ಇಂದು ನಾವು ಡಿಜಿಟಲ್ ಗ್ರಂಥಾಲಯ ಆರಂಭಿಸಿದ್ದೇವೆ. ಗ್ರಂಥಾಲಯವನ್ನೇ ಓದುಗರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಮ್ಮದು. ಓದುಗರು ಸಲೀಸಾಗಿ ಅಗತ್ಯ ಬುಕ್​ಗಳನ್ನು ಓದಲು ಇದು ಸಹಾಯಕ. ‌ಅಂದ ಹಾಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯಗಳೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆ ಕೈಗೆತ್ತಿಕೊಂಡಿದೆ.

ನಮ್ಮ ದೇಶದಲ್ಲಿಯೇ ಮೊಟ್ಟಮೊದಲ ಯೋಜನೆ ಇದಾಗಿದೆ. ಡಿಜಿಟಲೀಕರಣಗೊಳಿಸಲು ಮತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಿಕೆಗೆ ಪ್ರವೇಶ ಒದಗಿಸಲು ರಾಜ್ಯಮಟ್ಟದ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಈ ಯೋಜನೆ ಅಡಿಯಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು ಹಾಗೂ 216 ತಾಲೂಕು ಗ್ರಂಥಾಲಯಗಳು, ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳನ್ನು ಒಳಗೊಂಡಿದೆ.

ಈ ಯೋಜನೆಯಡಿಯಲ್ಲಿ ಡಿಜಿಟಲ್ ಲೈಬ್ರರಿ ಸಾಫ್ಟ್‌ವೇರ್ ಮತ್ತು ಇ-ಸಂಪನ್ಮೂಲಗಳನ್ನು ಹಾಗೂ ಎಲ್ಲಾ 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಆಲ್-ಇನ್-ಒನ್ ಡೆಸ್ಕ್‌ಟಾಪ್ (2 ಸಂಖ್ಯೆಗಳು), ಟ್ಯಾಬ್ಲೆಟ್ (4 ಸಂಖ್ಯೆಗಳು), ಯುಪಿಎಸ್ (1 ಸಂಖ್ಯೆ) ಮತ್ತು ವೈಫೈ ರೂಟರ್ (1 ಸಂಖ್ಯೆ) ನಂತಹ ಹಾರ್ಡ್‌ವೇರ್ ಜೊತೆಗೆ ಕ್ಲೌಡ್ ಹೋಸ್ಟ್ ಮಾಡಲಾಗಿದೆ.

ಶಿಕ್ಷಣ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಲ್ಲಿನ ವಿಷಯಗಳನ್ನು ಒಳಗೊಂಡ ಇತ್ತೀಚಿನ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗಿದೆ. ಒಟ್ಟು 10,0013 ಪುಸ್ತಕಗಳು ಆನ್‌ಲೈನ್ ಸಿಗಲಿವೆ. ‌‌ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಠಗಳನ್ನು ಒದಗಿಸುತ್ತಿದೆ. ರಾಜ್ಯ ಮತ್ತು ಸಿಬಿಎಸ್ಇ ಮಂಡಳಿಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಡಿಜಿಟಲ್ ರೂಪದಲ್ಲಿ ಮಾಹಿತಿಯು ಸಹ ಒಳಗೊಂಡಿದೆ.

ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ ಕೌಶಲ್ಯ ಮತ್ತು ಸಾಹಿತ್ಯ ಒಳಗೊಂಡಂತೆ ಶಾಲೆ, ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 5000ಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ನಿರ್ದಿಷ್ಟವಾಗಿ ರಾಜ್ಯ ಮತ್ತು ಸಿಬಿಎಸ್‌ಇ ಶಾಲಾ ಮಕ್ಕಳಿಗೆ ಪಠ್ಯಕ್ರಮದ ಪ್ರಕಾರ ಇ-ಪುಸ್ತಕಗಳು ಮತ್ತು ವಿಡಿಯೋಗಳನ್ನು ಒದಗಿಸಲಾಗಿದೆ. 1 ರಿಂದ 12ನೇ ತರಗತಿಯವರೆಗೆ ಸಂಪೂರ್ಣ ವಿಷಯಗಳನ್ನು ಒಳಗೊಂಡಿದೆ. ಕನ್ನಡದಲ್ಲಿ ಸುಮಾರು 4200ಕ್ಕೂ ಹೆಚ್ಚು ಇ-ಪುಸ್ತಕಗಳಿವೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600ಕ್ಕೂ ಹೆಚ್ಚು ವಿಡಿಯೋಗಳಿವೆ.

ಈ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ವೆಬ್ ಆಧಾರಿತ ಮತ್ತು ಆ್ಯಪ್ ಆಧಾರಿತವಾಗಿದೆ. ವೆಬ್‌ನಲ್ಲಿ ಲಭ್ಯವಿರುವ ಎಲ್ಲ ಸಾಮಗ್ರಿಗಳು ಆ್ಯಪ್‌ನಲ್ಲಿಯೂ ಲಭ್ಯವಾಗುತ್ತವೆ ಮತ್ತು ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ನ ಡೌನ್‌ಲೋಡ್ ಮಾಡುವ ಮೂಲಕ ಅದನ್ನು ಬಳಸಬಹುದು. ಆ್ಯಪ್ ಸ್ಟೋರ್‌ನಲ್ಲಿ "e-Sarvajanika Granthalaya" ಎಂಬ ಆಪ್ ಲಭ್ಯವಿದೆ. ಯೋಜನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.