ಬೆಂಗಳೂರು : ನಿರ್ಗಮಿತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಐಎಸ್ಡಿ ಠಾಣೆಯಲ್ಲಿ ಇದೇ ಮೊದಲ ಬಾರಿಗೆ ಪ್ರಕರಣವೊಂದು ದಾಖಲಾಗಿದೆ. ಈ ವಿಚಾರವನ್ನು ಟ್ವೀಟ್ ಮೂಲಕ ಅವರು ಹಂಚಿಕೊಂಡಿದ್ದಾರೆ.
ಆಂತರಿಕ ವಿಭಾಗದ ಠಾಣೆ ಶುರುವಾಗಿ ಏಳು ವರ್ಷವಾದರೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇದೀಗ, ಮಾದಕ ವಸ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ.
-
Internal Security Division was made a police station in 2013 but never activated. On 5 August, the first case under Narcotics Act registered and arrests made. @BSBommai and @DgpKarnataka have appreciated. It has state wide jurisdiction n augment specialized agencies.
— Bhaskar Rao IPS (@deepolice12) August 11, 2020 " class="align-text-top noRightClick twitterSection" data="
">Internal Security Division was made a police station in 2013 but never activated. On 5 August, the first case under Narcotics Act registered and arrests made. @BSBommai and @DgpKarnataka have appreciated. It has state wide jurisdiction n augment specialized agencies.
— Bhaskar Rao IPS (@deepolice12) August 11, 2020Internal Security Division was made a police station in 2013 but never activated. On 5 August, the first case under Narcotics Act registered and arrests made. @BSBommai and @DgpKarnataka have appreciated. It has state wide jurisdiction n augment specialized agencies.
— Bhaskar Rao IPS (@deepolice12) August 11, 2020
ಆಂತರಿಕ ಭದ್ರತಾ ವಿಭಾಗ ಒಂದು ವಿಶೇಷ ದಳವಾಗಿದ್ದು, ಸಮಾಜ ಘಾತುಕ ಶಕ್ತಿಗಳ ಪಾಲಿಗೆ ದುಃಸ್ವಪ್ನವಾಗಿ ಕಾರ್ಯನಿರ್ವಹಣೆ ಮಾಡುವ ತಾಕತ್ತು ಇದಕ್ಕೆ ಇದೆ. ಸದ್ಯ, ಭಾಸ್ಕರ್ ರಾವ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದು, ಭದ್ರತೆಗೆ ಒತ್ತು ನೀಡುವ ಭರವಸೆ ನೀಡಿದ್ದಾರೆ.