ETV Bharat / state

ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ: ಗ್ಯಾರಂಟಿ ಮೇಲೆನೇ ಎಲ್ಲರ ಚಿತ್ತ..

ಕರುನಾಡ ಮುಖ್ಯಮಂತ್ರಿಯಾಗಿ 2ನೇ ಬಾರಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಇಂದು ಪಾದಾರ್ಪಣೆ ಮಾಡಲಿದ್ದಾರೆ. ನಂತರ ಮೊದಲ ಸಂಪುಟ ಸಭೆ ನಡೆಯಲಿದೆ.

First cabinet meeting
ಮೊದಲ ಸಂಪುಟ ಸಭೆ
author img

By

Published : May 20, 2023, 7:07 AM IST

Updated : May 20, 2023, 7:59 AM IST

ಬೆಂಗಳೂರು: ಪಟ್ಟಾಭಿಷೇಕದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿಸಿಎಂ ಡಿಕೆಶಿ ಹಾಗೂ ನೂತನ ಮಂತ್ರಿಗಳ ಸಮ್ಮುಖದಲ್ಲಿ ಇಂದು ವಿಧಾನಸೌಧದಲ್ಲಿ ಮೊದಲ ಸಂಪುಟ ಸಭೆ ನಡೆಯಲಿದೆ. ರಾಜ್ಯದ ಜನರ ಚಿತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದ ಮೊದಲ ಸಂಪುಟ ಸಭೆಯತ್ತ ನೆಟ್ಟಿದೆ. ಸಂಪುಟ ಸಭೆಯಲ್ಲಿ ಎಲ್ಲಾ ಐದೂ ಗ್ಯಾರಂಟಿಗಳಿಗೆ ಅನುಮೋದನೆ ನೀಡಲಿದೆಯಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಇದರ ಜೊತೆಗೆ ಸುಮಾರು 8 ಮಂತ್ರಿಗಳೂ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆ ಮೂಲಕ ಇಂದಿನಿಂದ ಕಾಂಗ್ರೆಸ್ ರಾಜ್ಯಭಾರ ಆರಂಭವಾಗಲಿದೆ. ಕಾಂಗ್ರೆಸ್ ರಾಜ್ಯಭಾರ ವಹಿಸಿಕೊಂಡ ಬಳಿಕ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಯಲಿದೆ.

ರಾಜ್ಯದ ಜನರ ದೃಷ್ಟಿ ಕೇವಲ ಸಿದ್ದರಾಮಯ್ಯ ನೇತೃತ್ವದ ಈ ಮೊದಲ ಸಂಪುಟ ಸಭೆ ಮೇಲೆಯೇ ಇದ್ದು, ಚುನಾವಣೆಯಲ್ಲಿ ತಾವು ಘೋಷಿಸಿರುವ ಐದು ಗ್ಯಾರಂಟಿಗಳಿಗೆ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆಯಾ ಎಂಬ ಕುತೂಹಲ ಎಲ್ಲರಲ್ಲಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ತಮ್ಮ ಮೊದಲ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಅದರಂತೆ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ₹ 2,000 ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ ₹ 3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ₹ 1,500 ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ ಹಾಗೂ ಬಿಪಿಎಲ್ ಕಾರ್ಡ್​ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆಯ ಒಟ್ಟು ಐದು ಗ್ಯಾರಂಟಿಗಳಿಗೆ ಸಮ್ಮತಿ ನೀಡಿ ನುಡಿದಂತೆ ನಡೆಯುತ್ತೇವೆ ಎಂದು ಈಗಾಗಲೇ ನಿಯೋಜಿತ ಡಿಸಿಎಂ ಡಿಕೆಶಿ ತಿಳಿಸಿದ್ದಾರೆ.

ಗ್ಯಾರಂಟಿಗಳಿಗೆ ಷರತ್ತಿನ ಭೀತಿ: ಸಂಪುಟ ಸಭೆಯಲ್ಲಿ ಐದೂ ಗ್ಯಾರಂಟಿಗಳಿಗೆ ಅಸ್ತು ನೀಡಲಾಗುತ್ತಾ ಅಥವಾ ಉಚಿತ ವಿದ್ಯುತ್ ಗ್ಯಾರಂಟಿ, ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಮಾತ್ರ ಅನುಮೋದನೆ ನೀಡಲಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಉಳಿದ ಗ್ಯಾರಂಟಿಗಳನ್ನು ಸಂಬಂಧಿತ ಇಲಾಖೆಗಳಿಂದ ಸ್ಪಷ್ಟ ರೂಪುರೇಷೆಯನ್ನು ಪಡೆದ ಬಳಿಕ ಜಾರಿಗೊಳಿಸುವ ಸಾಧ್ಯತೆನೂ ಇದೆ.

ಈ ಮಧ್ಯೆ ಈ ಐದೂ ಗ್ಯಾರಂಟಿಗಳಿಗೆ ಷರತ್ತು ಅನ್ವಯಿಸುವ ಭೀತಿ ರಾಜ್ಯದ ಜನರಲ್ಲಿ ಕಾಡುತ್ತಿದೆ. ಹಾಗಾಗಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಷರತ್ತಿನೊಂದಿಗೆ ಗ್ಯಾರಂಟಿಗಳಿಗೆ ಅನುಮೋದನೆ ನೀಡುತ್ತ ಎಂಬುದು ಎಲ್ಲರಿಗಿರುವ ಅನುಮಾನವಾಗಿದೆ. ಈಗಾಗಾಲೇ ಕೆಲ ಕಾಂಗ್ರೆಸ್ ನಾಯಕರು ಷರತ್ತು ವಿಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಗ್ಯಾರಂಟಿಗಳು ಎಲ್ಲರಿಗೂ ಅನ್ವಯವಾಗುತ್ತಾ ಅಥವಾ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಅನ್ವಯವಾಗುತ್ತಾ ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇಂದು ನಡೆಯಲಿರುವ ಸಂಪುಟ ತೀರ್ಮಾನ ಈ ಎಲ್ಲಾ ಅನುಮಾನ, ಆತಂಕ, ಪ್ರಶ್ನೆಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಸಿಎಂ ಪದಗ್ರಹಣ: ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ

Last Updated : May 20, 2023, 7:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.