ETV Bharat / state

ಸಸ್ಯಕಾಶಿ ಲಾಲ್​ಬಾಗ್ ಶುದ್ಧ ಗಾಳಿ, ಆಹ್ಲಾದಕರ ವಾತಾವರಣದ ಜತೆ... ಈ ಸೇವೆಯೂ ಲಭ್ಯ!

author img

By

Published : Dec 2, 2019, 3:22 PM IST

ಆರೋಗ್ಯ ದೃಷ್ಟಿಯಿಂದ ತೋಟಗಾರಿಕಾ ಇಲಾಖೆ ಲಾಲ್​ಬಾಗ್ ಉದ್ಯಾನದೊಳಗೆ ಲಾಲ್​ಬಾಗ್ ಆಸ್ಪತ್ರೆಯನ್ನು ಶುರು ಮಾಡಿದೆ.‌ ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಕೇವಲ ಪ್ರಾಣಿ ದಾಳಿಗೆ ಒಳಗಾಗುವ ಜನರಿಗೆ ಮಾತ್ರ ತುರ್ತು ಚಿಕಿತ್ಸೆ ನೀಡಲಾಗುತ್ತೆ.

Bengaluru lalbagh hospital , ಲಾಲ್​ಬಾಗ್​ ಉದ್ಯಾನವನದಲ್ಲಿ ಲಾಲ್​ಬಾಗ್ ಆಸ್ಪತ್ರೆ
ಸಸ್ಯಕಾಶಿ ಲಾಲ್​ಬಾಗ್​ ಉದ್ಯಾನವನದಲ್ಲೀಗ,,, ಚಿಕಿತ್ಸಾ ಯೋಗ..

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಸಸ್ಯಕಾಶಿ ಲಾಲ್​ಬಾಗ್ ಸ್ವಚ್ಚ ಗಾಳಿ, ಹಚ್ಚ ಹಸಿರಿನ ಪರಿಸರ, ಕಿವಿಗೆ ಹಿತವೆನಿಸೋ ಪಕ್ಷಿಗಳ ಚಿಲಿಪಿಲಿಗಳನ್ನೊಳಗೊಂಡ ಸುಂದರ ತಾಣ. ಪ್ರವಾಸಿಗರ ಈ ನೆಚ್ಚಿನ ತಾಣದಲ್ಲಿ ಪ್ರಥಮ ಚಿಕಿತ್ಸೆ ನೀಡೋ ಆಸ್ಪತ್ರೆಯನ್ನ ತೆರೆಯಲಾಗಿದ್ದು, ಅದನ್ನ ಲಾಲ್​ಬಾಗ್ ಆಸ್ಪತ್ರೆ ಎಂದೇ ಹೆಸರಿಸಲಾಗಿದೆ.

ಹೌದು, ಆರೋಗ್ಯ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಉದ್ಯಾನದೊಳಗೆ ಲಾಲ್​ಬಾಗ್ ಆಸ್ಪತ್ರೆ ಶುರು ಮಾಡಿದೆ.‌ ಈ ಮುಂಚೆ ಡಿಡಿ ಕಚೇರಿಯಲ್ಲೇ ಮಿನಿ ಕ್ಲಿನಿಕ್ ಆರಂಭವಾಗಿತ್ತು. ಆದರೆ, ಆಸ್ಪತ್ರೆಯ ವೈದ್ಯರು ಸರಿಯಾಗಿ ಹಾಜರಾಗದ ಕಾರಣ ಅದನ್ನ ಮುಚ್ಚಲಾಗಿತ್ತು.

ಸದ್ಯ ಲಾಲ್​ಬಾಗ್ ನಲ್ಲೇ ಒಂದು ಆಸ್ಪತ್ರೆ ಅಗತ್ಯ ಎಂಬ ಕಾರಣಕ್ಕೆ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಉಪ ನಿರ್ದೇಶಕರ ಗಾರ್ಡನ್ ಕಚೇರಿಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಲಾಲ್​ಬಾಗ್ ನಲ್ಲಿ ಶ್ವಾನಗಳು, ಹಾವುಗಳು, ಜೇನುನೊಣಗಳು ವಾಸವಾಗಿದ್ದು, ಅದೆಷ್ಟು ಬಾರಿ ಅನಾಹುತ ಪ್ರಸಂಗಗಳು ನಡೆದಿವೆ. ಅಷ್ಟೇ ಅಲ್ಲದೆ ಸಸ್ಯಕಾಶಿಯಲ್ಲಿ ಫ್ಲವರ್ ಶೋ ಸೇರಿದಂತೆ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಜನಸಂಖ್ಯೆ ಹೆಚ್ಚಾದಾಗ ಕೆಲ ಅನಾಹುತಗಳು ನಡೆಯೋದು ಮಾಮೂಲಿ. ಇಂತ ಸಂದರ್ಭಗಳಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇರಲಿಲ್ಲ.

ಸದ್ಯ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲಿದ್ದು, ಇದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇಲಾಖೆಯವರೇ ಒಬ್ಬ ನರ್ಸ್ ನೇಮಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಕೇವಲ ಪ್ರಾಣಿ ದಾಳಿಗೆ ಒಳಗಾಗುವ ಜನರಿಗೆ ಮಾತ್ರ ತುರ್ತು ಚಿಕಿತ್ಸೆ ನೀಡಲಾಗುತ್ತೆ. ಈಗಾಗಲೇ 54 ಪ್ರಥಮ ಚಿಕಿತ್ಸಾ ಬಾಕ್ಸ್​ಗಳನ್ನ ಅಳವಡಿಸಲಾಗಿದೆ

Intro:ಸಸ್ಯಕಾಶಿಯಲ್ಲಿ ಹೊಸ ಲಾಲ್ ಬಾಗ್ ಆಸ್ಪತ್ರೆ; ಇನ್ಮುಂದೆ ಪ್ರಥಮ ಚಿಕಿತ್ಸೆ ಲಭ್ಯ..

ಬೆಂಗಳೂರು: ಉದ್ಯಾನನಗರೀ ಬೆಂಗಳೂರಿನಲ್ಲಿ
ಕೆಲವು ತಾಣಗಳು ಯಾವಾಗಲೂ ಖುಷಿ ಕೊಡುತ್ತೆ.. ಅವುಗಳಲ್ಲಿ ಸಸ್ಯಕಾಶಿ ಲಾಲ್ ಬಾಗ್ ಕೂಡ ಒಂದು.. ಸ್ವಚ್ಚ ಗಾಳಿ, ಹಚ್ಚ ಹಸಿರು, ಕಿವಿಗೆ ಹಿತವೆನಿಸೋ ಪಕ್ಷಿಗಳ ಚಿಲಿಪಿಲಿ, ಕರ್ಕಶ ಶಬ್ದಗಳೇ ಇಲ್ಲದ ನೆಮ್ಮದಿಯ ತಾಣವಾದು. ಹೀಗಾಗಿ, ದಿನಕ್ಕೆ ನೂರಾರು ಜನರು ಲಾಲ್ ಬಾಗ್ ಗೆ ಬಂದು ಹೋಗುತ್ತಾರೆ..

ಸದ್ಯ, ಪ್ರವಾಸಿಗರ ನೆಚ್ಚಿನ ಈ ಜಾಗದಲ್ಲಿ ಆರೋಗ್ಯದ ದೃಷ್ಟಿಯಿಂದ ತೋಟಗಾರಿಕಾ ಇಲಾಖೆ ಸ್ವತಃ ಲಾಲ್ ಬಾಗ್ ಆಸ್ಪತ್ರೆ ಶುರು ಮಾಡಿದೆ..‌ ಈ ಮುಂಚೆ ಡಿಡಿ ಕಚೇರಿಯಲ್ಲೇ ಮಿನಿ ಕ್ಲಿನಿಕ್ ಆರಂಭವಾಗಿತ್ತು, ಆದರೆ ಚಿಕಿತ್ಸೆಗೆ ಬೇರೆ ಆಸ್ಪತ್ರೆಯ ವೈದ್ಯರು ಸರಿ ಬರದ ಕಾರಣ ಅದನ್ನ ಮುಚ್ಚಲಾಯಿತು..

ಆದರೆ, ಲಾಲ್ ಬಾಗ್ ನಲ್ಲೇ ಒಂದು ಆಸ್ಪತ್ರೆ ಅಗತ್ಯ ಎಂಬ ಕಾರಣಕ್ಕೆ ಸುಮಾರು 4 ಲಕ್ಷ ವೆಚ್ಚದಲ್ಲಿ ಉಪನಿರ್ದೇಶಕರ ಗಾರ್ಡನ್ ಕಚೇರಿಯಲ್ಲಿ ನಿರ್ಮಾಣ ಮಾಡಲಾಗಿದೆ..
ಲಾಲ್ ಬಾಗ್ ನಲ್ಲಿ ಹೆಚ್ಚು ಶ್ವಾನಗಳು, ಹಾವುಗಳು, ಜೇನುನೊಣಗಳ ವಾಸ ತಾಣವಾಗಿದೆ.. ಅದೆಷ್ಟು ಬಾರಿ ಶ್ವಾನಗಳು ಮಕ್ಕಳ ಮೇಲೆ ಅಟ್ಯಾಕ್ ಮಾಡಿರೋ ಪ್ರಸಂಗಗಳು ನಡೆದಿವೆ.. ಸಸ್ಯಕಾಶಿಯಲ್ಲಿ ಫ್ಲವರ್ ಶೋ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮ ನಡೆದಾಗ ಜನಸಂಖ್ಯೆ ಹೆಚ್ಚಿದಾಗ ಕೆಲ ಅನಾಹುತಗಳು ನಡೆಯೋದು ಮಾಮೂಲಿ.. ಈ ಸಂದರ್ಭದಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲು, ಸರಿಯಾ್ ವ್ಯವಸ್ಥೆ ಇರಲಿಲ್ಲ..

ಜೇನುನೊಣಗಳು ದಾಳಿ ನಡೆದ ಘಟನೆಯ ನಂತರ, ನಿತ್ಯ ವೊಂದು ಆ್ಯಂಬುಲೆನ್ಸ್ ಲಾಲ್ ಬಾಗ್ ಒಳಗೆ ಇರುತ್ತಿತ್ತು.. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಿದ್ದು ಬೆಳಗ್ಗೆ 7- ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿದೆ.. ಜೊತೆಗೆ ಇಲಾಖೆಯವರೇ ಒಬ್ಬ ನರ್ಸ್ ಅನ್ನ ಕೆಲಸಕ್ಕೆ‌ ಸೇರಿಸಿಕೊಂಡಿದ್ದಾರೆ. ಕೇವಲ ಪ್ರಾಣಿ ದಾಳಿಗೆ ಒಳಗಾಗುವ ಜನರಿಗೆ ಮಾತ್ರ ತುರ್ತು ಚಿಕಿತ್ಸೆ ನೀಡಲಾಗುತ್ತೆ. ಇನ್ನು ಹೀಗಾಗಲೇ 54 ಫಸ್ಟ್ ಹೆಡ್ ಬಾಕ್ಸ್ ಗಳು
ಇದ್ದು, ನಾನಾ ಕಡೆ ಅಳವಡಿಸಲಾಗಿದೆ..

ಒಟ್ಟಾರೆ ಸಾರ್ವಜನಿಕ ರ ಹಿತದೃಷ್ಟಿಯಿಂದ ಲಾಲ್ ಬಾಗ್ ನಲ್ಲಿ ಆಗುವ ಅನಾಹುತಕ್ಕೆ ಪ್ರಥಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇಲಾಖೆಯ ಈ ಪ್ರಯತ್ನ‌ ನಿಜಕ್ಕೂ ಶ್ಲಾಘನೀಯ...

KN_BNG_1_LALBAG_HOSPITAL_SCRIPT_7201801

Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.