ETV Bharat / state

ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಭಸ್ಮ - ಆನೇಕಲ್‌ನಲ್ಲಿ ಬೆಂಕಿ ಅವಘಡ

ನೆರೆಯ ರಾಜ್ಯ ತಮಿಳುನಾಡಿನ ಚಾಮಲ್ಪಟ್ಟಿ ಗ್ರಾಮದ ರಿಜ್ವಾನ್ ಪಾಷಾ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಗೆ ಬೆಂಕಿ ಬಿದ್ದಿದೆ.

cracker-shop
ಪಟಾಕಿ ಅಂಗಡಿ
author img

By

Published : Oct 24, 2020, 4:59 AM IST

ಆನೇಕಲ್: ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸುಟ್ಟು ಭಸ್ಮವಾಗಿದೆ.

ನೆರೆಯ ರಾಜ್ಯ ತಮಿಳುನಾಡಿನ ಚಾಮಲ್ಪಟ್ಟಿ ಗ್ರಾಮದ ರಿಜ್ವಾನ್ ಪಾಷಾ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಗೆ ಬೆಂಕಿ ಬಿದ್ದಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಕೊಳ್ಳಲು ತಮಿಳುನಾಡಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಾರಿ ಸಂಖ್ಯೆಯಲ್ಲಿ ಹೆಚ್ಚಿನ ಜನ ಬರುತ್ತಾರೆ. ಹೀಗಾಗಿ ಹಬ್ಬ ಹತ್ತಿರವಾಗುತ್ತಿರುವ ಹಿನ್ನೆಲೆ ಗೋದಾಮಿನಲ್ಲಿ ಲಕ್ಷಾಂತರ ರೂಪಾಯಿ ಪಟಾಕಿಯನ್ನ ತಂದು ಶೇಖರಣೆ ಮಾಡಲಾಗಿತ್ತು.

ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ

ಇಂದು ಬೆಳಗ್ಗೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯದ ಪಟಾಕಿ‌ ಸಂಪೂರ್ಣವಾಗಿ‌ ಸುಟ್ಟು ಭಸ್ಮವಾಗಿದೆ. ಕೂಡಲೇ ಅಲ್ಲಿನ ಸ್ಥಳೀಯರು ನೀರನ್ನು ತಂದು ಹಾರಿಸಲು ಪ್ರಯತ್ನಿಸಿದರು ಸಹ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.