ETV Bharat / state

ಬೆಂಗಳೂರು ಹಜ್ ಭವನದಲ್ಲಿನ ಬೆಂಕಿ ಅವಘಡದಿಂದ 3 ಕೋಟಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ: ಕೆಆರ್​​ಡಿಎಲ್ ಅಧಿಕಾರಿಗಳಿಂದ ಮಾಹಿತಿ

ಬೆಂಗಳೂರಿನ ಹಜ್ ಭವನದಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯಿಂದ ದೂರು ದಾಖಲಾಗಿದೆ.

Bangalore Haj Bhawan
ಬೆಂಗಳೂರಿನ ಹಜ್ ಭವನ
author img

By ETV Bharat Karnataka Team

Published : Oct 29, 2023, 8:57 PM IST

ಬೆಂಗಳೂರು: ನಗರದ ಹಜ್ ಭವನದಲ್ಲಿ ಶನಿವಾರ ಸಂಭವಿಸಿದ್ದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಕಾರ್ಯನಿರ್ವಹಣಾಧಿಕಾರಿ ಸರ್ಪರಾಜ್ ಖಾನ್ ದೂರು ನೀಡಿದ್ದಾರೆ.

ಹಜ್ ಭವನದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಇರುವ ಸಮ್ಮೇಳನದ ಸಭಾಂಗಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪೀಠೋಪಕರಣಗಳು ಹಾಗೂ ಇತರೆ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದವು. ಈ ವಿಚಾರ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿತ್ತು.

ಸಭಾಂಗಣ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದ ಕೆ ಆರ್ ಡಿ ಎಲ್ ಅಧಿಕಾರಿಗಳು ಹಜ್ ಭವನಕ್ಕೆ ಭೇಟಿ ನೀಡಿ, ಬೆಂಕಿಯಿಂದ ಸುಟ್ಟು ಹಲವು ವಸ್ತುಗಳು ಸೇರಿ ಸುಮಾರು 3 ಕೋಟಿ ರೂ. ನಷ್ಟವಾಗಿವೆ ಎಂದು ಅಂದಾಜಿಸಿದ್ದಾರೆ. ಅಲ್ಲದೇ ಸಭಾಂಗಣದ ಅಕ್ಕಪಕ್ಕದ ಗೋಡೆ, ಕಿಟಕಿ ಬಾಗಿಲುಗಳು ಈ ಅವಘಡದಿಂದ ಹಾನಿಗೀಡಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಗ್ನಿ ಅವಘಡ ಸಂಭವಿಸಿದ ಹಜ್ ಭವನಕ್ಕೆ ಭಾನುವಾರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸಲಾಗುವುದು. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಹಾನಿಗೀಡಾಗಿರುವ ಸಭಾಂಗಣ ಹಾಗೂ ಗ್ರಂಥಾಲಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂಓದಿ:ಕೋರ್ಟ್ ಆವರಣದಲ್ಲಿರುವ ಅಂಚೆ ಕಚೇರಿಯಲ್ಲೇ ಕೈಚಳಕ ತೋರಿಸಿದ ಕಳ್ಳರು.. ನಗದು ದೋಚಿ ಪರಾರಿ: ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.