ಬೆಂಗಳೂರು: ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿ ಬೆಂಕಿಯನ್ನು ತಹಬಂದಿಗೆ ತಂದಿದ್ದು ಸುತ್ತ ಮುತ್ತಲಿನ ಜನ ನಿಟ್ಟಿಸಿರು ಬಿಟ್ಟಿದ್ದಾರೆ. ಸುಮಾರು 400 ಬ್ಯಾರಲ್ ನಷ್ಟು ರಾಸಾಯನಿಕಗಳನ್ನು ಶೇಖರಿಸಲಾಗಿದ್ದ ಗೋದಾಮಿನ ಹತ್ತಿರವಿದ್ದ 10 ವಸತಿ ಕಟ್ಟಡ, 5 ಕಾರು, 1 ವಾಣಿಜ್ಯ ವಾಹನ ಮತ್ತು 3 ಮೋಟಾರು ಬೈಕ್ಗಳಿಗೂ ಬೆಂಕಿ ತಗುಲಿ ಹಾನಿ ಉಂಟಾಗಿದ್ದು ಸುಮಾರು 3.50 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿ ದುರಂತದಲ್ಲಿ ಅಗ್ನಿಶಾಮಕ ಇಲಾಖೆಯ 11 ಸಿಬ್ಬಂದಿ ಗಾಯಗೊಂಡಿದ್ದಾರೆ. ಜನರಿಗೂ ಸಾಕಷ್ಟು ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.