ಬೆಂಗಳೂರು: ಮೃತ ವ್ಯಕ್ತಿ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸಂಚು ರೂಪಿಸಿದ ಆರೋಪದಡಿ ಖಾಸಗಿ ಕಂಪನಿ ಮಾಲೀಕರು ಹಾಗೂ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದ 85 ವರ್ಷದ ಫಾರೂಕ್ ಸುಲೆಮಾನ್ ಎಂಬುವರು ನೀಡಿದ ದೂರಿನ ಮೇರೆಗೆ ಕೆ.ಕೆ. ಮೊಟ್ವಾನಿ ಕಂಪನಿ ಹಾಗೂ ಪುತ್ರ ದೀಪಕ್ ಕೆ. ಮೊಟ್ಬಾನಿ ವಿರುದ್ಧ ವಂಚನೆ, ಒಳಸಂಚು ಅರೋಪದಡಿ ಎಫ್ಐಆರ್ ದಾಖಲಾಗಿದೆ.
ನಗರದ ಪ್ರತಿಷ್ಠಿತ ಪ್ರದೇಶವಾಗಿರುವ ಬಿಗ್ರೇಡ್ ರೋಡ್ ನಲ್ಲಿರುವ 36500 ಚದರ್ ಅಡಿ ಜಾಗವಿರುವ ವಾಣಿಜ್ಯ ಸಂಕೀರ್ಣ ಜಾಗವನ್ನು ತಮ್ಮದೆಂದು ಸುಳ್ಳು ದಾಖಲಾತಿ ಸೃಷ್ಟಿಸಿ ದೊಮ್ಮಲೂರಿನಲ್ಲಿರುವ ರಿಜಿಸ್ಟಾರ್ ಕಚೇರಿಯಲ್ಲಿ ಫಾರೂಕ್ ಸುಲೆಮಾನ್ ಅವರ ಕುಟುಂಬ ಒಡೆತನದಲ್ಲಿರುವ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ. ದೂರುದಾರ ತಂದೆ ಸುಲೇಮಾನ್ ಹಜಿ ಇಬ್ರಾಹಿಂ ಅವರ ಹೆಸರಿನಲ್ಲಿದ್ದ ಜಾಗವನ್ನ ಉತ್ತರಾಧಿಕಾರಿಯಾಗಿದ್ದ ಫಾರೂಕ್ ಸುಲೇಮಾನ್ 1987 ರಂದು ಮೊಟ್ವಾನಿ ಅವರೊಂದಿಗೆ ಕಟ್ಟಡ ನಿರ್ಮಾಣದ ಒಪ್ಪಂದ ಮಾಡಿಕೊಂಡಿದ್ದರು.
ಇದನ್ನೂ ಓದಿ:ಬಿಬಿಎಂಪಿ ಇತಿಹಾಸದಲ್ಲೇ 2,500 ಕೋಟಿ ಮೊತ್ತದ ಅತೀ ದೊಡ್ಡ TDR ಹಗರಣ : ಸಿಬಿಐಗೆ ವಹಿಸಲು ಎನ್.ಆರ್. ರಮೇಶ್ ಆಗ್ರಹ
ನಕಲಿ ದಾಖಲಾತಿ ಸೃಷ್ಟಿಸಿ ಗಿಫ್ಟ್ ಡೀಡ್ ರಚಿಸಿಕೊಂಡಿರುವ ಆರೋಪ: 2012ರಲ್ಲಿ ಜಿಪಿಎ ನೀಡಲಾಗಿದ್ದು ಮಾರಾಟಕ್ಕೆ ಅಸಲಿ ಮಾಲೀಕರು ಅನುಮತಿ ನೀಡಿರಲಿಲ್ಲ. ಮಾಲ್ ನಿರ್ಮಾಣದ ದೂರುದಾರರಿಗೆ ಪ್ರಮಾಣಪತ್ರ ಕೊಡಲಾಗಿತ್ತು. ಕೆಲ ವರ್ಷಗಳ ಬಾಡಿಗೆ ನೀಡಿ ಅನಂತರ ಮಾಲ್‌ನ ಮೂಲಸೌಕರ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಮಧ್ಯ ಪ್ರವೇಶಿಸಿದ ದೂರುದಾರರ ಕುಟುಂಬ ಪರಿಶೀಲಿಸಿದಾಗ ಪ್ರಕರಣದ ಆರೋಪಿಯು ನಕಲಿ ದಾಖಲಾತಿ ಸೃಷ್ಟಿಸಿ ಗಿಫ್ಟ್ ಡೀಡ್ ರಚಿಸಿಕೊಂಡಿರುವುದು ಕಂಡುಬಂದಿದೆ. ಫವರ್ ಅಫ್ ಆರ್ಟಾನಿ ಅಧಿಕಾರ ನೀಡದಿದ್ದರೂ ಸುಳ್ಳು ದಾಖಲೆ ರಚಿಸಿ ದೂರುದಾರರಿಗೆ ತಿಳಿಸದೆ ಮೋಸ ಮಾಡುವ ಉದ್ದೇಶದಿಂದ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರೋಪಿತರು ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಇದನ್ನೂ ಓದಿ:ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿಸುತ್ತಿದ್ದವನ ಬಂಧನ
ಈ ಬಗ್ಗೆ ದೂರುದಾರರ ಪರ ವಕೀಲೆ ಶಿಲ್ಪಾ ರಾಣಿ ಅವರು ಮಾತನಾಡಿ, ಫಾರೂಕ್ ಸುಲೆಮಾನ್ ಎಂಬುವವರು 1912ರಲ್ಲಿ ಸ್ಥಳವನ್ನು ಖರೀದಿಸಿದ್ದರು. 2012 ರಲ್ಲಿ ನಿರ್ಮಾಣ ಸಂಸ್ಥೆಗೆ ಸ್ಥಳವನ್ನು ಜಿಪಿಎಗೆ ಕೊಟ್ಟರು. ಅವರು ಜಿಪಿಎ ಮೇಲೆ ಕನ್ವೇಷನಲ್ ಡೀಡ್ ಮಾಡಿಕೊಂಡು ಕೆ.ಕೆ. ಮೊಟ್ವಾನಿ ಮತ್ತು ದೀಪಕ್ ಕೆ.ಮೊಟ್ಬಾನಿಯವರ ನಿರ್ಮಾಣ ಕಂಪನಿ ಅವರ ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ದೂರುದಾರ ನಿರ್ಮಾಣಕ್ಕೆ ಎಂದು ನೀಡಿದ್ದ ಸ್ಥಳವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಸ್ಥಳ ಎಂ ಜಿ ರೋಡ್ನಲ್ಲಿದ್ದು ಸುಮಾರು 100ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಕ್ರಿಪ್ಟೋ ಕರೆನ್ಸಿ ಅವ್ಯವಹಾರ ಪ್ರಕರಣ-ಆರೋಪಿ ಸೆರೆ