ETV Bharat / state

ಕೊರೊನಾ ಇದ್ದರೂ ಕಳ್ಳಾಟ: ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಎಫ್ಐಆರ್

ಪಾದರಾಯನಪುರದ ಕಾರ್ಪೊರೇಟರ್​​ಗೆ ಕೊರೊನಾ ಸೋಂಕು ದೃಢಪಟ್ಟಿತ್ತು ಆದರೆ, ಆತ ಚಿಕಿತ್ಸೆ ಪಡೆಯಲು ಹಾಗೂ ಕ್ವಾರಂಟೈನ್​ ಆಗಲು ನಿರಾಕರಿಸಿ ಮನೆಯಲ್ಲಿಯೇ ಉಳಿದಿದ್ದರು. ಈ ಹಿನ್ನೆಲೆ ಸಾಂಕ್ರಾಮಿಕ ರೋಗವನ್ನು ಹರಡುವ ಭೀತಿ ಉಂಟು ಮಾಡಿದ್ದರಿಂದ ಬಿಬಿಎಂಪಿ ದೂರು ನೀಡಿತ್ತು. ಈ ದೂರಿನ ಅನ್ವಯ ಇಮ್ರಾನ್​ ಪಾಷಾ ವಿರುದ್ಧ ಎಫ್​ಐಆರ್​​ ದಾಖಲಾಗಿದೆ.

FIR registered against Padarayanapura corporator in JJ Nagar police station
ಕೊರೊನಾವಿದ್ದರೂ ಕಳ್ಳಾಟ: ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ ದಾಖಲು
author img

By

Published : May 30, 2020, 11:50 PM IST

ಬೆಂಗಳೂರು: ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ‌ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಪೊರೇಟರ್ ಮನೆ ಬಂದು ಕ್ವಾರಂಟೈನ್ ಒಳಗಾಗುವಂತೆ ಹೇಳಿದರೂ ಮನೆಯಲ್ಲಿ ಇರುವುದಾಗಿ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಇಮ್ರಾನ್ ಪಾಷಾ ಮನೆಯಿಂದ ಹೊರಬಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರ್ಲಕ್ಷ್ಯದಿಂದ ಸಾಂಕ್ರಾಮಿಕ ರೋಗವನ್ನು ಇತರರಿಗೂ ಹರಡುವುದು ಗೊತ್ತಿದ್ದರೂ, ಮನೆಯಲ್ಲೇ ಉಳಿದುಕೊಳ್ಳುವುದಾಗಿ ಹೇಳಿದ್ದ ಇಮ್ರಾನ್ ಪಾಷಾ ವಿರುದ್ಧ ಬಿಬಿಎಂಪಿ ಆರೋಗ್ಯಧಿಕಾರಿಗಳು ಇಂದು ಜೆ.ಜೆ.ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.