ಬೆಂಗಳೂರು: ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಮಹಾಲಕ್ಷ್ಮಿ ಲೇಔಟ್ನಲ್ಲಿ ಮನೆ ಮನೆಗೆ ತೆರಳಿ ಹಣ ಹಂಚಿದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉಪಚುನಾವಣೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಹೀಗಾಗಿ ಮತದಾರರನ್ನ ಸೆಳೆಯಲು ಪಕ್ಷದ ಕೆಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬೆಂಬಲಿಗರು ಹಣ ಹಂಚಿಕೆ ಮಾಡಿದ್ದಾರೆಂದು ಚುನಾವಣಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಸದ್ಯ ನಾಗೇಂದ್ರ ಹಾಗೂ ಗಂಗಾಧರ ಎಂಬ ಇಬ್ಬರನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
![money](https://etvbharatimages.akamaized.net/etvbharat/prod-images/5266394_money.jpg)
ದೂರಿನಲ್ಲಿ ಏನಿದೆ: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಮುನೇಶ್ವರ ಬ್ಲಾಕ್ನಲ್ಲಿ ಗಂಗಾಧರ್ ಹಾಗೂ ನಾಗೇಂದ್ರ ಇಬ್ಬರು ಜೆಡಿಎಸ್ ವತಿಯಿಂದ ಹಣ ಹಂಚಿರುವ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದಾಗ ಒಬ್ಬರು ಮತದಾರರಿಗೆ 500ರೂಪಾಯಿಯಂತೆ ಹಣ ನಿಡ್ತಿದ್ರು. ಹಾಗೆ ಆರೋಪಿಗಳ ಕೈಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆ ಇತ್ತು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರು ದಾಖಲಾಗಿದೆ.
ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ಆರೋಪಿಗಳ ಬಳಿ ಇದ್ದ 30ಸಾವಿರ ಹಣ ಪಡೆದು ತನೀಖೆ ಮುಂದುವರೆಸಿದ್ದಾರೆ. ನಿಜಾವಾಗ್ಲು ಆರೋಪಿಗಳು ಜೆಡಿಎಸ್ ಪಕ್ಷದವರಾ ಅಥವಾ ಪಕ್ಷದ ಹೆಸರು ಹಾಳು ಮಾಡಲು ಕೆಲವರು ಈ ರೀತಿ ಮಾಡಿದ್ರಾ ಅನ್ನೋದು ತನಿಖೆ ನಂತರ ತಿಳಿಯಲಿದೆ.