ETV Bharat / state

ಪಾದರಾಯನಪುರ ಗಲಭೆ ಪ್ರಕರಣ... ಪ್ರಮುಖ ಆರೋಪಿಗಳ ವಿರುದ್ಧ ಎಫ್ಐಆರ್

ಪಾದರಾಯನಪುರ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸದ್ಯ ಆರೋಪಿಗಳನ್ನು ಸ್ಥಳ ಮಹಜರುಗೆ ಕರೆದೊಯ್ದು ಘಟನೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಡಿಸಿಪಿ ಅನುಚೇತ್ ನೇತೃತ್ವದ ತಂಡ ಪಡೆಯಲಿದೆ.

ಎಫ್ಐಆರ್
ಎಫ್ಐಆರ್
author img

By

Published : Apr 20, 2020, 1:46 PM IST

ಬೆಂಗಳೂರು: ಸೀಲ್​ಡೌನ್ ನಿಯಮ ಮೀರಿ ಪಾದರಾಯನಪುರದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ ಜೆ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಪ್ರಮುಖ ಆರೋಪಿಗಳಾದ ವಾಜಿದ್, ಇರ್ಫಾನ್​ ಖಾನ್, ಹೌಲಿ ಬಾಬ್, ಕಬಿರ್, ಜಕ್ರಿಯಾ ಅಹಮ್ಮದ್, ಫರೋಜಾ ಖಾನ್ ಎಂಬುವರ ಕುಮ್ಮಕ್ಕಿನಿಂದ ಗಲಾಟೆಯಾಗಿದ್ದು, ಪೊಲೀಸರು ಪ್ರಮುಖ ಆರೋಪಿಗಳ ಹೆಸರನ್ನ ಉಲ್ಲೇಖಿಸಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಸದ್ಯ ಆರೋಪಿಗಳನ್ನು ಸ್ಥಳ ಮಹಜರುಗೆ ಕರೆದುಕೊಂಡು ಹೋಗಿ ಘಟನೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಡಿಸಿಪಿ ಅನುಚೇತ್ ನೇತೃತ್ವದ ತಂಡ ಪಡೆಯಲಿದೆ.

fir on padarayanapura main accused
ಎಫ್ಐಆರ್

ಆರೋಪಿಗಳ ವಿರುದ್ಧ ಕಠಿಣ ಕ್ರಮ:

ಈಗಾಗಲೇ ಪೊಲೀಸರು ಐಪಿಸಿ 188, 353, ಎನ್​ಡಿಎಮ್ಎ ಕಾಯ್ದೆ 51,52, 54 ಸೆಕ್ಷನ್​ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಐಪಿಸಿ 353: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು
  • ಐಪಿಸಿ 188: (ಸರ್ಕಾರಿ ಅಧಿಕಾರಿ ಹೊರಡಿಸಿದ ಆದೇಶವನ್ನು ಉಲ್ಲಂಘಿಸುವುದು ಅಥವಾ ಅಧಿಕಾರಿಗೆ ಅಪಾಯವನ್ನುಂಟು ಮಾಡಲು ಪ್ರಯತ್ನಿಸುವುದು, 6 ತಿಂಗಳವರೆಗೂ ಶಿಕ್ಷೆ ವಿಧಿಸಬಹುದು)

NDMA ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆ 2005

  • ಎನ್​ಡಿಎಮ್ಎ ಕಾಯ್ದೆ51 : ವಿಪತ್ತು ಸಂದರ್ಭ ಕೇಂದ್ರ, ರಾಜ್ಯ ಅಥವಾ ಜಿಲ್ಲಾಡಳಿತಗಳಿಂದ ನಿಯೋಜಿತವಾದ ಅಧಿಕಾರಿಯ ಕಾರ್ಯಕ್ಕೆ ಅಡ್ಡಿಯಾಗುವುದು.
  • ಎನ್​ಡಿಎಮ್ಎ ಕಾಯ್ದೆ 52 : ವಿಪತ್ತು ನಿರ್ವಹಣೆಗೆ ವಿರುದ್ಧವಾಗಿ ಸುಳ್ಳು ಸುದ್ದಿಗಳನ್ನು ಹರಡುವುದು- ಎರಡು ವರ್ಷ ಶಿಕ್ಷೆ.
  • ಎನ್​ಡಿಎಮ್ಎ ಕಾಯ್ದೆ 54 : ವಿಪತ್ತು ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರನ್ನು ಆತಂಕ ಪಡಿಸುವುದು- ಎರಡು ವರ್ಷಶಿಕ್ಷೆ.

ಇಷ್ಟು ಸೆಕ್ಷನ್​ಗಳಡಿ ಸದ್ಯ ಕೇಸ್​ ಹಾಕಿದ್ದು ಪ್ರಮುಖ ಆರೋಪಿಗಳು ಸೇರಿ ಒಟ್ಟು 54ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.