ಬೆಂಗಳೂರು: ಮಾಗಡಿ ರಸ್ತೆ ಹೊಸಹಳ್ಳಿ ಗೊಲ್ಲರಪಾಳ್ಯದಲ್ಲಿ ಅನುಮತಿ ಇಲ್ಲದೇ ತರಗತಿ ನಡೆಸುತ್ತಿದ್ದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಮೇಲೆ ಎಫ್ಐಆರ್ ದಾಖಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಲೆ ಮೇಲೆ ಎಫ್ಐಆರ್ ದಾಖಲಿಸಿ ತಾತ್ಕಾಲಿಕವಾಗಿ ಬಿಇಒ ರಮೇಶ್ ಕ್ಲೋಸ್ ಮಾಡಿದ್ದಾರೆ.
ಬೆಂಗಳೂರು ಉತ್ತರ ವಲಯದ 1ರಲ್ಲಿ ಬರುವ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ 1 ರಿಂದ 7ನೇ ತರಗತಿ ನಡೆಸಲಾಗುತಿತ್ತು. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಶಾಲೆ ಪ್ರಾರಂಭ ಮಾಡಿರುವ ಆರೋಪ ಕೇಳಿ ಬಂದಿದ್ದು, ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಯ ಸೆಕ್ರೆಟರಿ ಹಾಗೂ ಶಾಲಾ ಪ್ರಾಂಶುಪಾಲರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಲೆಯಲ್ಲಿ ಎಲೆಕ್ಟ್ರಿಕ್ ಕೆಲಸ ನಡೆಯುತ್ತಿದೆ ಎಂದು ಸಬೂಬು ಹೇಳಿ ಶಾಲೆಯಿಂದ ಪೋಷಕರಿಗೆ ತಪ್ಪು ಮಾಹಿತಿ ನೀಡಿ ಕ್ಲೋಸ್ ಮಾಡಿದ್ದಾರೆ. ಆನ್ಲೈನ್ ಕ್ಲಾಸ್ ಮಾಡುವುದಾಗಿ ಮೆಸೇಜ್ ಕಳುಹಿಸಿರುವ ಶಾಲಾ ಆಡಳಿತ ಮಂಡಳಿ ಮಾತನ್ನ ಪೋಷಕರು ನಂಬಿದ್ದಾರೆ. ಇನ್ನು ಶಾಲೆ ಬಳಿ ಬಂದಾಗಲೇ ಪೋಷಕರಿಗೆ ಅಸಲಿ ಸತ್ಯ ಗೊತ್ತಾಗಿದ್ದು, ಲಕ್ಷ ಲಕ್ಷ ಹಣ ಪಡೆದು ಪೋಷಕರಿಗೆ ವಂಚನೆ ಮಾಡಿದ ಶಾಲಾ ಆಡಳಿತ ಮಂಡಳಿ ಮೇಲೆ ಅನುಮಾನ ಮೂಡಿದೆ.
ಓದಿ: ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಕೌಶಲ್ಯಭರಿತ ಕರ್ನಾಟಕ ನನ್ನ ಕನಸು: ಬೊಮ್ಮಾಯಿ