ಬೆಂಗಳೂರು : ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪರ ವಕೀಲ ದೂರು ನೀಡಿದ ಮೇರೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೋಲೀಸರು ದಂಡ ಸಂಹಿತೆಯ 506 (ಜೀವ ಬೆದರಿಕೆ), 354(A) ಕೆಲಸ ಕೊಡಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ, 376ಸಿ, ಅತ್ಯಾಚಾರ ಕೇಸ್ನಡಿ 504, 417 ಹಾಗೂ 67A ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಕೇಸ್ ದಾಖಲಾಗಿದ್ದ ಯುವತಿಯ ವಿಚಾರಣೆ ಅಗತ್ಯವಾಗಿರಲಿದೆ. ಅತ್ಯಾಚಾರ ಮಾಡಿದ್ದಾರೆ ಎಂಬ ಕುರಿತು ಖುದ್ದು ಯುವತಿಯ ಹೇಳಿಕೆ ಮುಖ್ಯವಾಗಿದ್ದು, ವಿಚಾರಣೆಗೆ ಹಾಜರಾಗಬೇಕಿದೆ. ಯುವತಿ ಹೇಳಿಕೆ ನೀಡಿದ ಬಳಿಕ ಅತ್ಯಾಚಾರ ನಡೆದ ಸ್ಥಳ, ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿ ಬಂಧನವಾಗಲಿದೆ.
6ನೇ ಬಾರಿ ಯುವತಿಗೆ ನೋಟಿಸ್ : ವಿಚಾರಣೆಗೆ ಹಾಜರಾಗುವಂತೆ ಸತತ 5 ಬಾರಿ ನೋಟಿಸ್ ಜಾರಿ ಮಾಡಿದ್ದ ಎಸ್ಐಟಿ ಇದೀಗ 6ನೇ ಬಾರಿ ವಕೀಲರ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಅಧಿಕೃತವಾಗಿ ಖುದ್ದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದಾಗ ಮಾತ್ರವೇ ಆರೋಪಿತರ ಬಂಧಿಸುವ ಪ್ರಕ್ರಿಯೆ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಅನುಚೇತ್, ಎಫ್ಐಆರ್ ದಾಖಲಾಗಿದೆ. ಯುವತಿ ಖುದ್ದು ಹಾಜರಾಗಿ ನಡೆದ ಘಟನೆಗಳ ಬಗ್ಗೆ ಹೇಳಿಕೆ ನೀಡಬೇಕು. ಕೃತ್ಯ ನಡೆದ ಸ್ಥಳದ ಮಹಜರು, ಘಟನೆ ಯಾವಾಗ ನಡೆಯಿತು. ವೈದ್ಯಕೀಯ ಪರೀಕ್ಷೆ ನಡೆದ ಬಳಿಕವಷ್ಟೇ ರಮೇಶ್ ಜಾರಕಿಹೊಳಿಯನ್ನು ಎಸ್ಐಟಿ ಬಂಧಿಸಲಿದೆ ಎಂದಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ.. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಪರ ದೂರು ನೀಡಿದ ವಕೀಲ ಜಗದೀಶ್ ಹೀಗಂತಾರೆ..