ETV Bharat / state

ಸೋಂಕಿತರಿಂದ ಲಕ್ಷಾಂತರ ರೂಪಾಯಿ ವಸೂಲಿ ಆರೋಪ: ಬೆಂಗಳೂರಿನ ಖಾಸಗಿ ಆಸ್ಪತ್ರೆ ಎಂಡಿ ವಿರುದ್ಧ ಎಫ್ಐಆರ್

author img

By

Published : Jun 8, 2021, 9:17 PM IST

ಕಗ್ಗದಾಸಪುರದ ಕಂಫರ್ಟ್ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ ಆಡಳಿತ ಮಂಡಳಿಯು ಪಾಸಿಟಿವ್ ರೋಗಿಗಳಿಂದ ಜನರಲ್‌ ಬೆಡ್​ಗೆ 10 ಸಾವಿರ, ಹೆಚ್​ಡಿಯು ಬೆಡ್​ಗೆ 12 ಸಾವಿರ, ವೆಂಟಿಲೇಟರ್ ರಹಿತ ಐಸಿಯು ಬೆಡ್​ಗೆ 15 ಹಾಗೂ ವೆಂಟಿಲೇಟರ್ ಸಹಿತ ಐಸಿಯು ಬೆಡ್​ಗೆ 25 ಸಾವಿರ ರೂ. ನಿಗದಿಪಡಿಸಿ ಹಣ ವಸೂಲಿ ಮಾಡಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಎಫ್​ಐಆರ್​ ದಾಖಲಾಗಿದೆ.

FIR
ಎಫ್ಐಆರ್

ಬೆಂಗಳೂರು: ಕೋವಿಡ್​ ಸಂಕಷ್ಟದ ಮಧ್ಯೆಯೂ ಕೆಲ ಆಸ್ಪತ್ರೆಗಳಲ್ಲಿ ರೋಗಿಗಳ ಸುಲಿಗೆ ಮುಂದುವರಿದಿದೆ. ಕೊರೊನಾ ಸೋಂಕಿತರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪದಡಿ ನಗರದ ಖಾಸಗಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕನ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸಿ.ವಿ. ರಾಮನ್ ನಗರ ಆಸ್ಪತ್ರೆಯ ವೈದ್ಯಾಧಿಕಾರಿ ಶಿವೇಗೌಡ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಜಾಕೆಲ್ವಿನ್ ಕ್ರಿಶ್ಚಿಯನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ‌. ಕಗ್ಗದಾಸಪುರದ ಕಂಫರ್ಟ್ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ ಆಡಳಿತ ಮಂಡಳಿಯು ಪಾಸಿಟಿವ್ ರೋಗಿಗಳಿಂದ ಜನರಲ್‌ ಬೆಡ್ ಗೆ 10 ಸಾವಿರ, ಹೆಚ್ ಡಿಯು ಬೆಡ್ ಗೆ 12 ಸಾವಿರ, ವೆಂಟಿಲೇಟರ್ ರಹಿತ ಐಸಿಯು ಬೆಡ್​ಗೆ 15 ಹಾಗೂ ವೆಂಟಿಲೇಟರ್ ಸಹಿತ ಐಸಿಯು ಬೆಡ್​ಗೆ 25 ಸಾವಿರ ರೂಪಾಯಿ ನಿಗದಿಪಡಿಸಿ ಹಣ ವಸೂಲಿ ಮಾಡಿತ್ತು ಎಂಬ ಆರೋಪ ಇದಾಗಿದೆ.

ಮಣಿವಣ್ಣನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ: ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ದರವನ್ನು ಸೋಂಕಿತರಿಂದ ಪಡೆದುಕೊಂಡಿತ್ತು. ಲಕ್ಷಾಂತರ ರೂ.ವಸೂಲಿ ಆರೋಪ ಕೇಳಿಬಂದ ನಗರ ಪೂರ್ವ ವಿಭಾಗದ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ವಹಿಸಿಕೊಂಡಿರುವ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ಹಾಗೂ‌ ಐಎಎಸ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ಮಾಡಿತ್ತು.

ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ವಂಚನೆ‌ ಪ್ರಕರಣ: ಆಸ್ಪತ್ರೆ ಆಡಳಿತ ಮಂಡಳಿಯವರು 81 ಮಂದಿ ರೋಗಿಗಳಿಂದ 65 ಲಕ್ಷ ರೂ. ಹೆಚ್ಚುವರಿಯಾಗಿ ಪಡೆದುಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಸೋಂಕಿತರಿಗೆ ಹಣ ವಾಪಸ್ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೇ 29ರಂದು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಜಾರಿ ಮಾಡಿದರೂ ಸೋಂಕಿತರಿಗೆ ಜಾಕ್ವೆಲಿನ್ ಹಣ ವಾಪಸ್ ನೀಡಿರಲಿಲ್ಲ‌.‌ ಆರೋಗ್ಯ ಸರಿಯಿಲ್ಲ ಎಂದು ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗ್ತಿದೆ. ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ವಂಚನೆ‌ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಓದಿ: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ರದ್ದು ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.