ETV Bharat / state

ಕೊರೊನಾ ಪಾಸಿಟಿವ್​ ಇದ್ದರೂ ಅಸಡ್ಡೆ: ಕಾರ್ಪೊರೇಟರ್ ವಿರುದ್ಧ ಎಫ್ಐಆರ್

author img

By

Published : May 31, 2020, 4:19 PM IST

Updated : May 31, 2020, 8:26 PM IST

ಕೊರೊನಾ ಸೋಂಕು ತಗುಲಿದ್ದರೂ ಕೂಡ ಮನೆಯಲ್ಲಿ ಇದ್ದು ಅಸಡ್ಡೆ ತೋರಿ, ಆರೋಗ್ಯಾಧಿಕಾರಿಗಳಿಗೆ ಸರಿಯಾಗಿ ಸಹಕಾರ ನೀಡದ ಆರೋಪದ ಮೇಲೆ ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

sad
ಕಾರ್ಪೊರೇಟರ್ ವಿರುದ್ಧ ಎಫ್ಐಆರ್

ಬೆಂಗಳೂರು: ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿ ಮನೆ ಬಳಿ ಬಂದಾಗ ಸಹಕಾರ ನೀಡದ ಆರೋಪದ ಮೇಲೆ ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾರ್ಪೋರೇಟರ್ ವಿರುದ್ಧ ಎಫ್ಐಆರ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಡಿಸಿಪಿ ರಮೇಶ್​ ಬಾನೋತ್,​ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಜನರ ಮಧ್ಯೆ ತನಗೆ ಕೊರೊನಾ ಇರುವುದನ್ನ ಲೆಕ್ಕಿಸದೇ ಕಾರ್ಪೊರೇಟರ್ ಜನರನ್ನು ಸೇರಿಸಿಕೊಂಡು ಓಡಾಡಿದ್ದಾರೆ. ಇದಕ್ಕಾಗಿ ಐಪಿಸಿ ಸೆಕ್ಷನ್ 143, 270, 271, 188, ಹಾಗೂ NDMA (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ )ಅಡಿಯಲ್ಲಿ ಜೆ.ಜೆ. ನಗರ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕಾರ್ಪೊರೇಟರ್ ನಿರ್ಲಕ್ಷ್ಯದಿಂದ ಮನೆಯಲ್ಲೇ ಇರುವುದಾಗಿ ಹೇಳಿದ್ದರು. ಕೊರೊನಾ ಸಾಂಕ್ರಾಮಿಕ ರೋಗವಾಗಿದ್ದು ಮನೆಯಲ್ಲೇ ಉಳಿದುಕೊಂಡರೆ ಇತರರಿಗೂ ಹರಡುವ ಸಾಧ್ಯತೆ ಇದೆ.

ಕೊರೊನಾ ಬಂದರೂ ಕಾರ್ಪೊರೇಟರ್​ ರೋಡ್​ ಶೋ... ನೆಟ್ಟಿಗರಿಂದ ತರಾಟೆ

ಹೀಗಾಗಿ ಪಾದರಾಯನಪುರ ಕಾರ್ಪೊರೇಟರ್ ವಿರುದ್ಧ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದೂರು ನೀಡಿದ್ದರು. ಇನ್ನು ಆಸ್ಪತ್ರೆಗೆ ತೆರಳುವಾಗ ಬೆಂಬಲಿಗರನ್ನು ಸೇರಿಸಿರುವ ಆರೋಪ ಕೂಡ ಇದೆ. ಹೆಚ್ಚಿನ ಜನ ಸೇರಲು ಕಾರಣವಾಗಿದ್ದ ಹಿನ್ನೆಲೆ NDMA ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಡಿಸಿಪಿ ತಿಳಿಸಿದರು.

Last Updated : May 31, 2020, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.