ETV Bharat / state

ಕರಕುಶಲ ನಿ‌ಗಮ ಮಾಜಿ ಅಧ್ಯಕ್ಷರ ಮೇಲೆ ಎಫ್​ಐಆರ್.. ಡಿ ರೂಪ‌ ವಿರುದ್ಧ ರಾಘವೇಂದ್ರ ಶೆಟ್ಟಿ ಕಿಡಿ - ಈಟಿವಿ ಭಾರತ ಕನ್ನಡ

ಎಂಡಿ ರೂಪ ಅವರು ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಿಗೆ ನಾನು ಕಾನುನಾತ್ಮಕವಾಗಿ ಉತ್ತರಿಸುತ್ತೇನೆ. ಆರೋಪ ಸುಳ್ಳು ಎಂದು ಸಾಬೀತು ಮಾಡಲು ನನ್ನಲ್ಲಿ ಮಾಹಿತಿ ಇದೆ ಎಂದು ರಾಘವೇಂದ್ರ ಶೆಟ್ಟಿ ಹೇಳಿದ್ದಾರೆ.

fir-against-ex-chairman-of-handicraft-corporation
ರಾಘವೇಂದ್ರ ಶೆಟ್ಟಿ
author img

By

Published : Oct 17, 2022, 3:34 PM IST

ಬೆಂಗಳೂರು : ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ರಾಘವೇಂದ್ರ ಶೆಟ್ಟಿಯವರ ಡಿಐಎನ್ ಸಂಖ್ಯೆ ಅನರ್ಹವಾದ ಹುದ್ದೆಯಲ್ಲಿ ಮುಂದುವರಿದ ಆರೋಪದಡಿ ನಿಗಮದ ಪ್ರಧಾನ ವ್ಯವಸ್ಥಾಪಕರಿಂದ ದೂರು ಸಲ್ಲಿಕೆಯಾಗಿದೆ.

2020 ರಲ್ಲಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಅವರನ್ನು 2022 ರಲ್ಲಿ ಸ್ಥಾನದಿಂದ ಸರ್ಕಾರ ರದ್ದುಪಡಿಸಿತ್ತು. ಬಳಿಕ ರಾಘವೇಂದ್ರ ಶೆಟ್ಟಿ ಅವರ ಡಿಐಎನ್ ಸಂಖ್ಯೆ 3116646 ಅನರ್ಹವಾಗಿರುವ ಬಗ್ಗೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಂದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆಯಲಾಗಿತ್ತು.

ಡಿಐಎನ್ ಅನರ್ಹವಾದಲ್ಲಿ ಅಧ್ಯಕ್ಷ ಅಥವಾ ಡೈರೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುವಂತಿಲ್ಲ‌. ಆದರೂ ರಾಘವೇಂದ್ರ ಶೆಟ್ಟಿ ಈ ವಿಚಾರ ಸರ್ಕಾರ ಹಾಗೂ ನಿಗಮದಿಂದ ಮುಚ್ಚಿಟ್ಟು ಹುದ್ದೆಯಲ್ಲಿ ಒಂದು ವರ್ಷ ಎಂಟು ತಿಂಗಳ ಕಾಲ ಅಧಿಕಾರದಲ್ಲಿದ್ದರು. ಈ ವೇಳೆ ಅನೇಕ ನಿರ್ಧಾರಗಳನ್ನು ಕೈಗೊಂಡಿರುತ್ತಾರೆ. ಡಿಐಎನ್ ಅನರ್ಹವಾದ ವ್ಯಕ್ತಿ ತೆಗೆದುಕೊಂಡ ನಿರ್ಧಾರಗಳು ಅಸಿಂಧುವಾಗಿರುತ್ತೆ. ಈ ಸಮಯದಲ್ಲಿ ಯಾವುದೇ ವೇತನ, ಸಂಬಳ, ವೆಚ್ಚ ಪಡೆಯಲು ಬರುವುದಿಲ್ಲ. ಆದರೂ ತಿಂಗಳು 1.52 ಲಕ್ಷ ರೂಗಳಂತೆ ಒಂದು ವರ್ಷ ಎಂಟು ತಿಂಗಳು 33.68 ಲಕ್ಷ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಕರಕುಶಲ ನಿ‌ಗಮ ಮಾಜಿ ಅಧ್ಯಕ್ಷರ ಮೇಲೆ ಎಫ್​ಐಆರ್

ನನ್ನ ಮೇಲೆ ಪಿತೂರಿ ಮಾಡಲಾಗುತ್ತದೆ: ಇನ್ನೂ ಈ ಎಫ್​ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಘವೇಂದ್ರ ಶೆಟ್ಟಿ ಇದೆಲ್ಲ ನನ್ನ ವಿರುದ್ಧ ಪಿತೂರಿ ಮಾಡಿ ಈ ಕೆಲಸ ಮಾಡಿದ್ದಾರೆ. ನನ್ನ ದಾಖಲೆಗಳಿದ್ದು ಎಲ್ಲವನ್ನೂ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿದ್ದೇನೆ. ನಿಗಮದ ಎಂಡಿಯಾಗಿರೋ ಐಪಿಎಸ್ ಅಧಿಕಾರಿ ಡಿ.‌ರೂಪ ನನ್ನ ಮೇಲೆ ಇಲ್ಲಸಲ್ಲದ ಆರೋಪ‌ ಮಾಡಿದ್ದಾರೆ.

ಇದನ್ನೂ ಓದಿ : ಸಮಯೋಚಿತ ತೀರ್ಮಾನಗಳಿಂದ ಜನರಿಗೆ ನೆರವಾಗಿ.. ಡಿಸಿಗಳಿಗೆ ಸಿಎಂ ಖಡಕ್ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.