ETV Bharat / state

ಕಂಟೈನ್ಮೆಂಟ್ ಪ್ರದೇಶದಲ್ಲಿ ಗಲಾಟೆ ಪ್ರಕರಣ; ಕಾರ್ಪೊರೇಟರ್ ಮೇಲೆ ಕೇಸು ದಾಖಲು

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾರ್ಪೊರೇಟರ್ ನಾಜಿಮಾ ಖಾನಮ್‌ ಮತ್ತು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

FIR against corporator najima khanam
ಕಾರ್ಪೊರೇಟರ್ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು
author img

By

Published : May 11, 2020, 10:07 AM IST

ಬೆಂಗಳೂರು: ಅನಗತ್ಯ ಓಡಾಡಿ ಪೊಲೀಸರ ಕರ್ತವ್ಯಕ್ಕೆ ತೊಂದರೆಪಡಿಸಿದ ಗಂಭೀರ ಪ್ರಕರಣದಡಿ ಕಾರ್ಪೊರೇಟರ್ ನಾಜಿಮಾ ಖಾನಮ್‌ ಮತ್ತು ಪ್ರತಿಭಟನಾಕಾರರ ವಿರುದ್ಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (FIR)‌ ದಾಖಲಾಗಿದೆ.

ಬಿಬಿಎಂಪಿ ಕಾರ್ಪೊರೇಟರ್ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು

ಕೆ.ಆರ್.ಮಾರ್ಕೆಟ್ ವಾರ್ಡ್​​​ನ ಟಿಪ್ಪು ನಗರದಲ್ಲಿ ಕೊರೊನಾ ಸೋಂಕು ಹೆಚ್ಚು ಕಂಡು ಬಂದು ಓರ್ವ ಸಾವನ್ನಪ್ಪಿದ್ದು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್​ (ನಿರ್ಬಂಧಿತ ವಲಯ) ಆಗಿ ಘೋಷಣೆ ಮಾಡಲಾಗಿತ್ತು. ಆದ್ರೆ, ಟಿಪ್ಪು ನಗರದ ಕಾರ್ಪೊರೇಟರ್​ ನಾಜಿಮಾ ಶನಿವಾರ ರಾತ್ರಿ ಹೊರಗಡೆ ಓಡಾಡುತ್ತಿದ್ದರು. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಸೀಲ್​​ಡೌನ್ ಇರುವ ಪ್ರದೇಶದಲ್ಲಿ ಯಾರೂ ಓಡಾಟ ನಡೆಸಬಾರದು ಎಂದು ಹೇಳಿದಾಗ ಕಾರ್ಪೊರೇಟರ್​, ನಾನು ಯಾರು ಗೊತ್ತಾ? ಈ ಏರಿಯಾ ಕಾರ್ಪೊರೇಟರ್​ ಎಂದು ಹೇಳಿ‌ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದರು.

ನಿನ್ನೆ ಪೊಲೀಸರ ವಿರುದ್ಧ ಸಾಮಾಜಿಕ‌ ಅಂತರ ಪಾಲಿಸದೆ ಪ್ರತಿಭಟನೆಯನ್ನೂ ಅವರು ನಡೆಸಿದ್ದರು. ಕೊರೊನಾ ಸೋಂಕು ಹಿನ್ನೆಲೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಇದನ್ನು ಲೆಕ್ಕಿಸದೆ ಕಾರ್ಪೊರೇಟರ್​ ಹಾಗೂ ಅವರ ಬೆಂಬಲಿಗರು ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾರಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಬಗ್ಗೆ ಇನ್ನಷ್ಟು ವಿವರ:
ಟಿಪ್ಪು ನಗರದಲ್ಲಿ ಕೊರೊನಾ ಸೋಂಕಿನಿಂದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದ. ಹೀಗಾಗಿ ಬಿಬಿಎಂಪಿ ಆ ಏರಿಯಾವನ್ನು ಸೀಲ್​ಡೌನ್ ಮಾಡಿತ್ತು‌. ಹಾಗೆಯೇ ಕಾರ್ಪೊರೇಟರ್​ ಪತ್ನಿ ಕೊರೊನಾ ಸೋಂಕಿತನೊಬ್ಬನ ಜೊತೆ ಸಂಪರ್ಕದಲ್ಲಿದ್ದ ಕಾರಣ ಇಡೀ ಕಾರ್ಪೊರೇಟರ್​ ಕುಟುಂಬವನ್ನೇ ಕ್ವಾರಂಟೈನ್ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.