ETV Bharat / state

ಪತಿಗೆ 4 ಕೋಟಿ ರೂ. ವಂಚಿಸಿ ಪರಾರಿಯಾದ ಪತ್ನಿ..!

ನನ್ನ ಪತ್ನಿ ನನಗೆ 4 ಕೋಟಿ ರೂ. ವಂಚಿಸಿ ಓಡಿ ಹೋಗಿದ್ದಾಳೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಬೆಂಗಳೂರಿನ ಬಸವನಗುಡಿ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಮಹಿಳೆಯ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದಾರೆ.

FIR against 60 year old wife in Bengaluru

author img

By

Published : Aug 25, 2021, 9:34 PM IST

ಬೆಂಗಳೂರು: ಹೆಂಡತಿ 4 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ 65 ವರ್ಷದ ಉದ್ಯಮಿಯೊಬ್ಬರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸವನಗುಡಿಯ ನಿವಾಸಿ ಉದ್ಯಮಿ ಕೃಷ್ಣ ಎಂಬುವವರು ಕೊಟ್ಟ ದೂರಿನ ಆಧಾರದ ಮೇಲೆ ಪುಣೆ ಮೂಲದ ಪತ್ನಿ ಸಾಧನಾ (60) ಎನ್ನುವವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

ಕೃಷ್ಣಾ ಮತ್ತು ಸಾಧನಾ 1984ರಲ್ಲಿ ವಿವಾಹವಾಗಿದ್ದು, ಕಳೆದ 4 ವರ್ಷದಿಂದ ಇಬ್ಬರೂ ಪ್ರತ್ಯೇಕವಾಗಿದ್ದರು. ಸಾಧನಾ ಜೀವನಾಂಶ ಕೋರಿ ಮಹಾರಾಷ್ಟ್ರ ನ್ಯಾಯಾಲಯ ಮತ್ತು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ದಾನ ಪತ್ರ ರದ್ದು ಕೋರಿ ಹಾಗೂ ಆಸ್ತಿಯಲ್ಲಿ ಭಾಗ ನೀಡುವಂತೆ ದಾವೆ ಹೂಡಿದ್ದರು ಎನ್ನಲಾಗಿದೆ.

ವಿಚ್ಛೇಧನ ಪಡೆಯುವ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಚರ್ಚಿಸಿದ್ದೆವು. 4 ಕೋಟಿ ರೂ. ಕೊಟ್ಟರೆ ಕೋರ್ಟ್‌ನಲ್ಲಿರುವ 4 ಕೇಸ್ ಹಿಂಪಡೆಯುವುದಾಗಿ ಸಾಧನಾ ಹೇಳಿದ್ದಳು. ಈ ಮಾತಿನಂತೆ ನ್ಯಾಯಾಲಯದಲ್ಲಿ ಸಲ್ಲಿಸುವ ಅರ್ಜಿಗೂ ಸಹಿ ಹಾಕಿದ್ದೆವು. ಆಗಸ್ಟ್ 13 ಮತ್ತು ಆಗಸ್ಟ್ 14 ರಂದು 2 ಕೋಟಿ ರೂ.ಗಳ ಎರಡು ಡಿಮ್ಯಾಂಡ್ ಡ್ರಾಫ್ಟ್​ಗಳನ್ನು ಸಾಧನಾಗೆ ಹಸ್ತಾಂತರಿಸಿದ್ದೆ.

ಆದರೆ, ಸಾಧನಾ ಆಗಸ್ಟ್ 18 ರಂದು ಇದ್ದ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿಲ್ಲ. ಆಗಸ್ಟ್ 19 ರಂದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದರೂ ಮತ್ತೆ ಗೈರಾಗಿದ್ದಳು. 4 ಕೋಟಿ ರೂ. ಡಿಡಿ ಪಡೆದು ಕೋರ್ಟ್‌ಗೆ ಹಾಜರಾಗದೇ ಸಾಧನಾ ವಂಚಿಸಿದ್ದಾಳೆ ಎಂದು ಕೃಷ್ಣಾ ದೂರಿನಲ್ಲಿ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.