ಬೆಂಗಳೂರು : ನಮ್ಮ ಮೆಟ್ರೋ (ಬಿಎಂಆರ್‌ಸಿಎಲ್) ಸಂಸ್ಥೆ ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಮಾಸ್ಕ್ ಇಲ್ಲದೆ ಮೆಟ್ರೋಗೆ ಎಂಟ್ರಿ ಕೊಟ್ಟರೆ ಫೈನ್ ತಪ್ಪದೆ ಬೀಳುತ್ತೆ ಎಂದು ಎಂಡಿ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
ಕೊರೊನಾ, ಒಮಿಕ್ರಾನ್ ಸೋಂಕಿನ ಹೆಚ್ಚಳದ ಹಿನ್ನೆಲೆ ನಮ್ಮ ಮೆಟ್ರೋ ಮಾಸ್ಕ್ ಹಾಕದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ, ಮಾಸ್ಕ್ ಇಲ್ಲದೇ ಇರುವವರಿಗೆ ಫೈನ್ ಹಾಕುತ್ತೇವೆ. ಪ್ರತಿ ಮೆಟ್ರೋ ನಿಲ್ದಾಣದಲ್ಲೂ ಮೆಟ್ರೋ ಸಿಬ್ಬಂದಿ ಪ್ರಯಾಣಿಕರ ಮೇಲೆ ನಿಗಾ ಇಡಲಿದ್ದಾರೆ ಎಂದಿದ್ದಾರೆ.
ಸೆಕ್ಯೂರಿಟಿ ಗಾರ್ಡ್ಸ್, ಹೋಂ ಗಾರ್ಡ್ಸ್, ಮಾರ್ಷಲ್ಗಳಿಂದ ಮೆಟ್ರೋ ಸ್ಟೇಷನ್, ಪ್ಲಾಟ್ ಫಾರಂಗಳಲ್ಲಿ ನಿಗಾ ವಹಿಸಲಾಗುವುದು. ಮಾಸ್ಕ್ ಹಾಕದ ಪ್ರತಿ ಪ್ರಯಾಣಿಕರಿಗೆ 250 ರೂ. ದಂಡ ವಿಧಿಸಲಾಗುವುದು ಎಂದು ಮೆಟ್ರೋ ಮುಖ್ಯಸ್ಥರು ಹೇಳಿದ್ದಾರೆ.
ಓದಿ: ಕಾಲೇಜಿನಲ್ಲೇ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಟ್ರಸ್ಟಿಗಳ ಗಲಾಟೆ : ಕಾರಣ?