ಬೆಂಗಳೂರು: ಕೋವಿಡ್-19 ಮಹಾಮಾರಿ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗೆಡಿಗಳು ವಿನಾ ಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾರಣ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಇದಕ್ಕೆ ಕಡಿವಾಣ ಹಾಕಲು 'ಫ್ಯಾಕ್ಟ್ ಚೆಕ್ ವೆಬ್ ಸೈಟ್' ಲಾಂಚ್ ಮಾಡಿದ್ದಾರೆ.
ಇದರ ಕುರಿತು ಸ್ವತಃ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿ ಫ್ಯಾಕ್ಟ್ ಚೆಕ್ ವೆಬ್ ಸೈಟ್ಗೆ ಹೋದರೆ ಫೇಕ್ ನ್ಯೂಸ್ ಯಾವುದೆಂದು ತಿಳಿಯುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಯನ್ನೆಲ್ಲಾ ನಂಬಬೇಡಿ. ಅದರಲ್ಲಿ ಎಷ್ಟು ಫೇಕ್ ಇದೆ ಎಂದು ತಿಳಿಯಲು http:factcheck.ksp.gov.in ವೆಬ್ ವಿಳಾಸಕ್ಕೆ ಭೇಟಿ ಮಾಡಲು ಪ್ರವೀಣ್ ಸೂದ್ ತಿಳಿಸಿದ್ದಾರೆ.
-
Launching now: Karnataka State Police FactCheck – Don't fall for fake news https://t.co/MX9p17uehe
— DGP KARNATAKA (@DgpKarnataka) April 9, 2020 " class="align-text-top noRightClick twitterSection" data="
">Launching now: Karnataka State Police FactCheck – Don't fall for fake news https://t.co/MX9p17uehe
— DGP KARNATAKA (@DgpKarnataka) April 9, 2020Launching now: Karnataka State Police FactCheck – Don't fall for fake news https://t.co/MX9p17uehe
— DGP KARNATAKA (@DgpKarnataka) April 9, 2020
ಇತ್ತೀಚೆಗೆ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸೋದು ಹಾಗೂ ಕೊರೊನಾ ಕುರಿತು ಜನರು ಭಯಭೀತರನ್ನಾಗಿ ಮಾಡುವ ಕಿಡಿಗೇಡಿಗಳು ಹೆಚ್ಚುತ್ತಿದ್ದಾರೆ. ಹೀಗಾಗಿ ಜನರಿಗೆ ಸತ್ಯಾಸತ್ಯತೆ ತಿಳಿಯಲು ಪ್ರವೀಣ್ ಸೂದ್ ಅವರು ಈ ವೆಬ್ ಸೈಟ್ ಪರಿಚಯಿಸಿದ್ದಾರೆ.