ETV Bharat / state

ತಲೆಗೆ ರಾಡ್​​ನಿಂದ ಹೊಡೆದು ಫೈನಾನ್ಶಿಯರ್ ಕೊಲೆ: ಪತ್ನಿಯ ಬಂಧನ - ಬೆಂಗಳೂರಿನಲ್ಲಿ ಫೈನಾನ್ಷಿಯರ್ ಕೊಲೆ

ಸಣ್ಣಪುಟ್ಟ ಫೈನಾನ್ಸ್‌ ನಡೆಸುತ್ತಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್​ ಎಂಬುವವರನ್ನು ಅವರ ಪತ್ನಿಯೇ ರಾಡ್​ನಿಂದ ಹೊಡೆದು ಕೊಂದಿದ್ದಾಳೆ.

Financier murder in Bangalore
ಆರೋಪಿ ಪತ್ನಿಯ ಬಂಧನ
author img

By

Published : Apr 11, 2022, 9:37 PM IST

ಬೆಂಗಳೂರು: ಸಣ್ಣಪುಟ್ಟ ಫೈನಾನ್ಸ್ ಜೊತೆಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್ ನಿವಾಸಿ ಉಮೇಶ್ (52) ಕೊಲೆಯಾದ ಉದ್ಯಮಿ.

ಪ್ರಕರಣದ ಸಂಬಂಧ ಪತ್ನಿ ವರಲಕ್ಷ್ಮಿಯನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಉಮೇಶ್, ಸಣ್ಣಪುಟ್ಟ ಫೈನಾನ್ಸ್‌ ನಡೆಸುತ್ತಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರ ಸಹ ನೋಡಿಕೊಳ್ಳುತ್ತಿದ್ದರು.

ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್

ಇಂದು ಬೆಳಗ್ಗೆ ಉಮೇಶ್ ಪತ್ನಿಗೆ ಕಾಲಿನಿಂದ ಒದ್ದಿದ್ದಾರೆ. ಸಿಟ್ಟಿನಿಂದ ಅವರ ತಲೆಗೆ ಆರೋಪಿ ವರಲಕ್ಷ್ಮಿ ರಾಡಿನಿಂದ ಹಲ್ಲೆ ನಡೆಸಿದ್ದಾಳೆ ಎಂದು ಪ್ರಕರಣ ಕುರಿತು ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ತಕ್ಷಣ ಉಮೇಶ್​​ರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರು ಆಸತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸದ್ಯ ಪತ್ನಿಯನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ಹೆಚ್ಚಿನ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸಂಜೀವ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ದೈವಗಳಿಂದಲೇ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಚಾಲನೆ : ಗಡಿ ಜಿಲ್ಲೆಯಲ್ಲಿ ಸಾಮರಸ್ಯದ ಉತ್ಸವ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.