ETV Bharat / state

ಬೆಂಗಳೂರು: ಪೊಲೀಸ್​ ಠಾಣೆ ಮೆಟ್ಟಿಲೇರಿದ ಪಿಜಿ ಯುವತಿಯರಿಬ್ಬರ ಗಲಾಟೆ

author img

By

Published : Jan 13, 2023, 2:16 PM IST

ನಡುರಾತ್ರಿ ಮೊಬೈಲ್​ ಬಳಸಿ ಯಾಕೆ ನಿದ್ದೆಗೆ ತೊಂದರೆ ಕೊಡುತ್ತಿದ್ದೀಯಾ ಎಂದು ಪ್ರಶ್ನಿಸಿದ ವೈದ್ಯೆಯೊಬ್ಬಳಿಗೆ ಕೇರಳ ಮೂಲದ ಯುವತಿ ಹಲ್ಲೆ ಮಾಡಿರುವ ಕುರಿತು ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

police station
ಮೈಕೋ ಲೇಔಟ್ ಪೊಲೀಸ್​ ಠಾಣೆ

ಬೆಂಗಳೂರು : ಪಿಜಿಯಲ್ಲಿ ಯುವತಿಯರಿಬ್ಬರ ನಡುವೆ ಆರಂಭವಾದ ಗಲಾಟೆ ಇದೀಗ ಮೈಕೋ ಲೇಔಟ್ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಬಿಟಿಎಂ ಲೇಔಟ್​ನಲ್ಲಿ ಜನವರಿ 10 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಶೀಲಾ ಎಂಬ ಕೇರಳ ಮೂಲದ ನನ್ನ ರೂಮ್‌ಮೇಟ್ ಆಕೆಯ ಸ್ನೇಹಿನ ಜೊತೆ ವಿಡಿಯೋ ಕರೆಯಲ್ಲಿ‌ ಮಾತನಾಡುವಾಗ ನನ್ನನ್ನು ಅಸಭ್ಯವಾಗಿ ತೋರಿಸಿದ್ದಾಳೆ. ಇದನ್ನು ಪ್ರಶ್ನಿಸಿದಾಗ ನನ್ನ ಮೇಲೆಯೇ ಹಲ್ಲೆ ಮಾಡಿದ್ದಾಳೆ ಎಂದು ಸೃಷ್ಟಿ ಎಂಬಾಕೆ ಆರೋಪಿಸಿದ್ದಾರೆ.

ಕನ್ನಡ ಯುವತಿಯ ಆರೋಪವೇನು?: ವೈದ್ಯೆಯಾಗಿರುವ ಸೃಷ್ಟಿ ಬಿಟಿಎಂ ಲೇಔಟಿನ ಪಿಜಿ ಯೊಂದರಲ್ಲಿ ವಾಸವಿದ್ದು, ಅದೇ ಪಿಜಿಯಲ್ಲಿ ರೂಮ್​ಮೇಟ್ ಆಗಿರುವ ಕೇರಳ ಮೂಲದ ಯುವತಿ ಅಶೀಲಾ ವಿರುದ್ಧ ದೂರು ನೀಡಿದ್ದಾಳೆ. 'ರಾತ್ರಿ ವೇಳೆಯಲ್ಲಿಯೂ ಫೋನ್‌ ಕರೆಯಲ್ಲಿ ನಿರತವಾಗುವ ಅಶೀಲಾಳಿಂದ ತನ್ನ ನಿದ್ರೆಗೆ ಭಂಗವಾಗುತ್ತಿತ್ತು. ನಿದ್ರಾವಸ್ಥೆಯಲ್ಲಿದ್ದ ನನ್ನನ್ನು ಆಕೆ ವಿಡಿಯೋ ಕರೆಯಲ್ಲಿ‌ ಯಾರಿಗೋ ಅಸಭ್ಯವಾಗಿ ತೋರಿಸಿ ನಗುತ್ತಿದ್ದಳು. ಅದನ್ನು ಪ್ರಶ್ನಿಸಿದಾಗ, ಬಿಟಿಎಂ ಲೇಔಟ್​ನಲ್ಲಿ ಕೇರಳದವರ ಸಂಖ್ಯೆ ಅಧಿಕವಾಗಿದೆ ಎಂದು ಧಮ್ಕಿ‌ ಹಾಕಿದ್ದಾಳೆ' ಅಂತಾ ಸೃಷ್ಟಿ ಆರೋಪಿಸಿದ್ದಾಳೆ. ಮಾತ್ರವಲ್ಲದೇ, ಕನ್ನಡ ಮಾತನಾಡಬೇಡ, ಕನ್ನಡಿಗರು ಕೌಶಲ್ಯತೆಯಿಲ್ಲದವರು ಎಂದು ಅವಾಚ್ಯವಾಗಿ ಮಾತನಾಡುವ ಮೂಲಕ ಭಾಷೆಯನ್ನು, ಕನ್ನಡಿಗರನ್ನು ನಿಂದಿಸಲಾಗಿದೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಸೃಷ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ಎಂಜಿನಿಯರಿಂಗ್ ಕಾಲೇಜು ಪ್ರತಿನಿಧಿಗಳ ಚುನಾವಣೆ: ಹಾಸನದಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

ಕಳೆದ 2 ವರ್ಷದಿಂದ ಒಟ್ಟಿಗೆ ವಾಸವಿರುವ ಇವರಿಬ್ಬರ ಮಧ್ಯೆ ಆಗಾಗ ಸಣ್ಣಪುಟ್ಟ ಮನಸ್ತಾಪ, ಗಲಾಟೆಗಳು ನಡೆಯುತ್ತಿತ್ತಂತೆ. ಆದರೆ ಮೊನ್ನೆ ನಡೆದ ಗಲಾಟೆ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಸದ್ಯಕ್ಕೆ ವೈದ್ಯೆ ನೀಡಿರುವ ದೂರಿನನ್ವಯ ಮೈಕೋ ಲೇಔಟ್ ಠಾಣೆಯಲ್ಲಿ‌ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಆರೋಪ: ಶಿಕ್ಷಕನ ಅಮಾನತಿಗೆ ಆಗ್ರಹ

ಜಡೆ ಹಿಡಿದು ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು: ಕಳೆದ ಮೂರು ನಾಲ್ಕು ದಿನಗಳ ಹಿಂದೆ ಕಾಲೇಜು​ ವಿದ್ಯಾರ್ಥಿನಿಯರಿಬ್ಬರು ಮೈಸೂರಿನ ರಸ್ತೆಯೊಂದರಲ್ಲಿ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕರೆದುರೇ ವಿದ್ಯಾರ್ಥಿನಿಯರು ಪರಸ್ಪರ ಜಡೆ ಹಿಡಿದುಕೊಂಡು ಎಳೆದಾಡಿಕೊಂಡಿದ್ದರು. ಬಳಿಕ ಇದನ್ನು ಕಂಡ ಸ್ಥಳೀಯರು ಇಬ್ಬರನ್ನೂ ಬಿಡಿಸಿ, ತಿಳಿ ಹೇಳಿ ಕಳುಹಿಸಿದ್ದರು.

ಇದನ್ನೂ ಓದಿ: ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿನಿಯರು: ವೈರಲ್​ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.