ETV Bharat / state

Bengaluru accident: ನಗರದಾದ್ಯಂತ ಕಳೆದ 24 ಗಂಟೆಯಲ್ಲಿ 15 ರಸ್ತೆ ಅಪಘಾತ, ಐವರ ಸಾವು - accidents in last twenty four hours

ಬೆಂಗಳೂರಿನಾದ್ಯಂತ ಕಳೆದ 24 ಗಂಟೆಗಳಲ್ಲಿ 15 ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ರಸ್ತೆ ಅಪಘಾತ
ರಸ್ತೆ ಅಪಘಾತ
author img

By ETV Bharat Karnataka Team

Published : Aug 22, 2023, 4:37 PM IST

ಬೆಂಗಳೂರು: ನಗರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಂಭವಿಸಿದ್ದು, ಹದಿನೈದು ಅಪಘಾತಗಳ ಪ್ರಕರಣಗಳು ಸಂಭವಿಸಿವೆ. ಈ ವೇಳೆ ಐವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ‌. ಹೆಬ್ಬಾಳದಲ್ಲಿ - 1, ರಾಜಾಜಿನಗರ - 2, ಹೆಣ್ಣೂರು - 2, ಬಸವನಗುಡಿ - 2, ಕೆ.ಆರ್ ಪುರಂ - 1 ವೈಟ್ ಫೀಲ್ಡ್ - 2 ಹುಳಿಮಾವು - 2 ಹಾಗೂ ಸದಾಶಿವನಗರ - 1 ಮೈಕೊ ಲೇಔಟ್ - 1, ಎಲೆಕ್ಟ್ರಾನಿಕ್- 1 ಸೇರಿದಂತೆ ಒಟ್ಟು ಹದಿನೈದು ಅಪಘಾತಗಳು ನಡೆದಿವೆ.

ಅಪಘಾತ ಪ್ರಕರಣಗಳು ವರದಿಯಾಗುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ ಎನ್ ಅನುಚೇತ್ ''ವಾರಾಂತ್ಯದಲ್ಲಿ ಮಾತ್ರವಲ್ಲದೇ ಇತರೇ ದಿನಗಳಲ್ಲೂ ಸಹ ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚಿನ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳಾಗಿವೆ '' ಎಂದು ತಿಳಿಸಿದರು.

ಮದ್ಯಪಾನ ಮಾಡಿ ವಾಹನ ಚಾಲನೆ ವಿರುದ್ಧದ ಕಾರ್ಯಾಚರಣೆ ನಿಂತಿಲ್ಲ: ಇದಲ್ಲದೇ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ತಪಾಸಣೆ ಮಾಡಲಾಗುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಮೊದಲು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ತಪಾಸಣೆ ಮಾಡಲಾಗುತ್ತಿತ್ತು. ಆ ಸ್ಥಳಗಳು ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಈಗ ಮೊದಲಿನಂತೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ತಪಾಸಣೆ ಮಾಡದೇ ವಾರಕ್ಕೆ ಎರಡು ಬಾರಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಸ್ಥಳ ನಿಗದಿಪಡಿಸಿಕೊಂಡು ಪರಿಣಾಮಕಾರಿಯಾಗಿ ತಪಾಸಣೆ ಮಾಡಲಾಗುತ್ತಿದೆ. ಈಗ ಆರೇಳು ತಿಂಗಳ ಪ್ರಕರಣಗಳನ್ನು ಪರಿಶೀಲಿಸಿದಾಗ ಕೇವಲ 4-5% ಮಾತ್ರ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಕೇಸ್​ಗಳು ದಾಖಲಾಗಿವೆ. ಆದ್ರೆ ಎಲ್ಲರೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿಲ್ಲ. ಇತ್ತೀಚಿಗೆ ಆ್ಯಪ್ ಆಧಾರಿತ ಇ-ಟ್ಯಾಕ್ಸಿ ಬಳಕೆ, ಬಾಡಿಗೆ ಚಾಲಕರನ್ನು ಬಳಸುತ್ತಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಮಗಳೂರಲ್ಲೂ ಅಪಘಾತ: ನಿನ್ನೆ ದಿನ ಕಾಫಿನಾಡಲ್ಲೂ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ನಡೆದಿತ್ತು. ಅರಸೀಕೆರೆ ತಾಲೂಕಿನ ಮಾವುತನಹಳ್ಳಿ ಗ್ರಾಮದ ಕಲ್ಲಮ್ಮ (60) ಮೃತರು. ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನಲ್ಲೂ ಲಾರಿ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಮಂಜುನಾಥ್ (45) ಮೃತರು. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರಿನ ಕಣಿವೆಯ ಲಕ್ಯ ಕ್ರಾಸ್ ಬಳಿ ಘಟನೆ ನಡೆದಿತ್ತು. ಕೆಲಸ ಮುಗಿಸಿ ಆಟೋದಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: Mangaluru crime: ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್​​ ದಾಳಿ.. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಉರ್ವ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.