ETV Bharat / state

ರಾಜ್ಯದಲ್ಲಿ ಮತ್ತೆ ಶುರುವಾಗಲಿದೆ ಫೀವರ್ ಕ್ಲಿನಿಕ್: ಸಚಿವ ಡಾ.ಕೆ.ಸುಧಾಕರ್ - ಬೆಂಗಳೂರಿನಲ್ಲಿ ಸಚಿವ ಡಾ ಕೆ ಸುಧಾಕರ್ ಹೇಳಿಕೆ

ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಾರ್ ರೂಂ ಏರ್ಪಾಡಬೇಕು, ಗ್ರಾಮಗಳಲ್ಲೂ ವಾರ್ ರೂಮ್ ಸ್ಥಾಪಿಸಬೇಕು. ಹಾಗೆಯೇ ಫೀವರ್ ಕ್ಲಿನಿಕ್ ಹೆಚ್ಚಿಸಲು ಸೂಚಿಸಲಾಗಿದ್ದು ಇದರಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆ‌ ಆಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸಚಿವ ಸುಧಾಕರ್ ಸಭೆ
ಸಚಿವ ಸುಧಾಕರ್ ಸಭೆ
author img

By

Published : Jan 18, 2022, 9:28 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ ನಡೆಸಿದರು. ಇತ್ತ ಆರೋಗ್ಯ ಸೌಧದಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಇಲಾಖೆ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವರು, ಸಿಎಂ ಜೊತೆಗೆ ಎರಡು ಗಂಟೆಗಳ ಕಾಲ ವಿಡಿಯೋ ಸಂವಾದ ನಡೆಸಿದೆವು. ರಾಜ್ಯದ 18 ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇವೆ. ಕೆಲವು ಸೂಚನೆ ಸಲಹೆ ಕೊಟ್ಟಿದ್ದೇವೆ. ವಿಶೇಷವಾಗಿ ಕೋವಿಡ್ ಟೆಸ್ಟಿಂಗ್​​ ICMR ಗೈಡ್‌ಲೈನ್ಸ್‌ನಂತೆ ಮಾಡಬೇಕು. 60 ವರ್ಷ ಮೇಲ್ಪಟ್ಟ ILI & SARI ಪ್ರಕರಣಗಳ ಮೇಲೆ ಹೆಚ್ಚಿನ ಕಾಳಜಿವಹಿಸಬೇಕು. ಹಾಗೆಯೇ ಪಾಸಿಟಿವ್ ಬರುವ ಬಗ್ಗೆ ಹೆಚ್ಚಿನ ಚಿಂತೆ ಬೇಡ ಅಂತ ಹೇಳಲಾಗಿದೆ ಎಂದರು.

ಇನ್ನು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಾರ್ ರೂಂ ಏರ್ಪಾಡಬೇಕು, ಗ್ರಾಮಗಳಲ್ಲೂ ವಾರ್ ರೂಮ್ ಸ್ಥಾಪಿಸಬೇಕು. ಹಾಗೇ ಫೀವರ್ ಕ್ಲಿನಿಕ್ ಹೆಚ್ಚಿಸಲು ಸೂಚಿಸಲಾಗಿದ್ದು ಇದರಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆ‌ ಆಗುತ್ತೆ. ಹೋಮ್ ಐಸೋಲೋಷನ್ ಇದ್ದವರಿಗೆ ಕಿಟ್ಸ್ ವ್ಯವಸ್ಥೆ ಮಾಡುವುದು ಸೇರಿದಂತೆ, ಪಾಸಿಟಿವ್ ಬಂದಿರುವ ವ್ಯಕ್ತಿ ಮನೆಗೆ ತಲುಪಿಸಬೇಕು. ಇದನ್ನು ನಗರ ಹಾಗೂ ಗ್ರಾಮದಲ್ಲಿ ಜಾರಿ ಮಾಡಲಾಗಿದೆ ಎಂದರು.

ವೈದ್ಯರ ನಡಿಗೆ ಹಳ್ಳಿ ಕಡೆಗೆ:

ವೈದ್ಯರು ಹಾಗೂ ದಾದಿಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಪುನರಾರಂಭಕ್ಕೆ ಸಿಎಂ ಸಲಹೆ ನೀಡಿದ್ದು, ಈಗಾಗಲೇ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದರು. ಈಗಾಗಲೇ ಆಕ್ಸಿಜನ್ ಪ್ಲಾಂಟ್ 264 ರಲ್ಲಿ 222 ಸೇವೆಗೆ ಚಾಲನೆ ನೀಡಲಾಗಿದೆ. ಮೂರನೇ ಡೋಸ್ ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಶೇ 39 ಅಷ್ಟು 3ನೇ ಡೋಸ್ ಆಗಿದ್ದು, ಇದು ನಮಗೆ ಅಸಮಾಧಾನ ಇದೆ. ಇದು ತೃಪ್ತಿದಾಯಕವಾಗಿಲ್ಲ. ಹೀಗಾಗಿ ಮುಂದಿನ ವಾರ ಇದರ ಅಭಿಯಾನ ಮಾಡುತ್ತೇವೆ ಎಂದು ತಿಳಿಸಿದರು.

ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲೇ ಹೆಚ್ಚು ಕೋವಿಡ್ ಟೆಸ್ಟ್ ಆಗುತ್ತಿದೆ. 2 ರಿಂದ 2.50 ಲಕ್ಷ ದಿನದಲ್ಲಿ ಟೆಸ್ಟ್ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿದ್ದು, ಇಂದು ಕೂಡ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆ ತೆಗೆದುಕೊಳ್ಳದವರ ಮೇಲೆ ಇದರ ಪ್ರಭಾವ ಹೆಚ್ಚಾಗಿ ಬೀಳುತ್ತೆ. ಹೀಗಾಗಿ ಲಸಿಕೆ ತೆಗೆದುಕೊಳ್ಳಲು ಮನವಿ ಮಾಡಿದರು.

ವೀಕೆಂಡ್ ಕರ್ಫ್ಯೂ ಬಗ್ಗೆ ಗೊತ್ತಿಲ್ಲ:

ನಗರದಲ್ಲಿ ವೀಕೆಂಡ್ ಕರ್ಫ್ಯೂ ಕೈ ಬಿಡಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶುಕ್ರವಾರ ಸಭೆಯಲ್ಲಿ ನಾಯಕರು ತೀರ್ಮಾನ ಮಾಡುತ್ತಾರೆ. ತಾಂತ್ರಿಕ ಸಲಹಾ ಸಮಿತಿ ಅವರ ಸಲಹೆ ಕೂಡ ಪಡೆಯಬೇಕಾಗುತ್ತೆ. ನಾವೇ ತೀರ್ಮಾನ ಮಾಡೋಕೆ ಆಗಲ್ಲ, ಶುಕ್ರವಾರ ಗೊತ್ತಾಗುತ್ತೆ ಎಂದರು.

ಕೊರೊನಾ ಕೇಸ್​​ನ ಪೀಕ್ ಟೈಮ್ ಹೇಗಿರುತ್ತೆ?

ಕೊರೊನಾ ಕೇಸ್​​​ನ ಪೀಕ್ ಟೈಮ್ ಹೇಗೆ ಇರುತ್ತೆ ಎಂಬ ವಿಚಾರವಾಗಿ ಮಾತನಾಡುತ್ತಾ, ಪ್ರತಿ ದಿನಕ್ಕೆ 1.2 ಲಕ್ಷ ಕೇಸ್​​ಗಳು ಬರಬಹುದು. ಈಗಾಗಲೇ 40 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಬಂದಿದೆ. ಭವಿಷ್ಯದ ವರದಿ ‌ಕೊಟ್ಟಿರುವಂತೆ ಕೇಸ್‌ಗಳು ಹೋಗುತ್ತಿದೆ. ಮೂರನೇ ಅಲೆ, ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಬಹಳಷ್ಟು ವೇಗವಾಗಿದೆ. ನಾಲ್ಕರಿಂದ ಐದು ಪಟ್ಟು ವೇಗವಾಗಿ ಹರಡುತ್ತೆ. ವೇಗವಾಗಿ ಹರಡಿದ‌ ಹಾಗೆಯೇ ‌ಅಷ್ಟೇ ವೇಗವಾಗಿ ಕಡಿಮೆ ಆಗುವುದನ್ನು ನೋಡಿದ್ದೇವೆ. ಫೆಬ್ರವರಿ ಎರಡೂ ಅಥವಾ ಮೂರನೇ ವಾರದಲ್ಲಿ ಕೇಸ್ ಕಡಿಮೆ ಆಗುತ್ತಾ ಹೋಗುತ್ತೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.