ETV Bharat / state

ಹೈವೊಲ್ಟೇಜ್ ವೈಯರ್ ತಗುಲಿ ತಂದೆ-ಮಗುವಿಗೆ ಗಾಯ : ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು

ಫೆ.19ರಂದು ಜೆ.ಪಿ.ನಗರ 7ನೇ ಹಂತದಲ್ಲಿರುವ ಆರ್​​ಬಿಐ ಲೇಔಟ್​​ನ ಇಂಡಿಯನ್ ಗ್ಯಾಸ್ ಸರ್ವಿಸ್ ಸೆಂಟರ್​ಗೆ ಧನಂಜಯ್​ ಮತ್ತು ಅವರ ನಾಲ್ಕು ವರ್ಷದ ಮಗ ತನ್ಮಯ್ ಬಂದಿದ್ದರು..

FIR filed against Bescom officials
ಹೈವೋಲ್ಟೆಜ್ ವೈಯರ್ ತಗುಲಿ ತಂದೆ-ಮಗುವಿಗೆ ಗಾಯ
author img

By

Published : Feb 23, 2022, 1:31 PM IST

ಬೆಂಗಳೂರು: ಹೈವೊಲ್ಟೇಜ್ ವೈಯರ್ ತಗುಲಿ ತಂದೆ-ಮಗ ಗಾಯಗೊಂಡಿರುವ ಘಟನೆ ಜೆ.ಪಿ. ನಗರದ 7ನೇ ಹಂತದಲ್ಲಿ ನಡೆದಿದೆ. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ‌‌ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ‌.

ಹೈವೋಲ್ಟೆಜ್ ವೈಯರ್ ತಗುಲಿ ಗಾಯ
ಹೈವೊಲ್ಟೇಜ್ ವೈಯರ್ ತಗುಲಿ ಗಾಯ

ಫೆ.19ರಂದು ಜೆ.ಪಿ.ನಗರ 7ನೇ ಹಂತದಲ್ಲಿರುವ ಆರ್​​ಬಿಐ ಲೇಔಟ್​​ನ ಇಂಡಿಯನ್ ಗ್ಯಾಸ್ ಸರ್ವಿಸ್ ಸೆಂಟರ್​ಗೆ ಧನಂಜಯ್​ ಮತ್ತು ಅವರ ನಾಲ್ಕು ವರ್ಷದ ಮಗ ತನ್ಮಯ್ ಬಂದಿದ್ದರು.

ತನ್ಮಯ್​ ಅಲ್ಲೇ ಆಟವಾಡುತ್ತಾ​ ಅಲ್ಲಿದ್ದ ಒಂದು ಕೇಬಲ್​​​ ವೈಯರ್​​​ನನ್ನು ಮುಟ್ಟಲು ಹೋಗಿದ್ದ. ಇದನ್ನು ಕಂಡ ತಂದೆ ಧನಂಜಯ್ ವೈಯರ್​ನನ್ನು ಮೇಲಕ್ಕಿತ್ತಿಡಲು ಹೋಗಿದ್ದಾರೆ.

ಇದನ್ನೂ ಓದಿ: ಮೈಸೂರು : ಪ್ರೀತಿಸಿ ಕೆಲ ತಿಂಗಳ ಹಿಂದೆಯೇ ಮನೆ ತೊರೆದಿದ್ದ ಯುವ ಪ್ರೇಮಿಗಳು ಆತ್ಮಹತ್ಯೆ

ಈ ವೇಳೆ ​​​ಬೆಸ್ಕಾಂನ ಹೈವೊಲ್ಟೇಜ್ ವೈಯರ್​​ ತಾಗಿ ತಂದೆ-ಮಗ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದಿತ್ತು. ಇದರಿಂದ ಗಂಭೀರವಾಗಿ ಇಬ್ಬರೂ ಗಾಯಗೊಂಡಿದ್ದಾರೆ.‌

ಈ ಸಂಬಂಧ‌ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ಲಕ್ಷ್ಯ ಆರೋಪದಡಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.