ಬೆಂಗಳೂರು: ಇಂದು ಮಧ್ಯರಾತ್ರಿಯಿಂದ ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಮಧ್ಯರಾತ್ರಿ 12 ಗಂಟೆಯಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತದೆ.
ಜನವರಿ 1 ರಿಂದಲೇ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ನಂತರ ಆ ದಿನಾಂಕವನ್ನು ವಿಸ್ತರಿಸಿ ಫೆಬ್ರವರಿ 15ಕ್ಕೆ ಕೇಂದ್ರ ಸರ್ಕಾರ ಡೆಡ್ ಲೈನ್ ನೀಡಿತ್ತು. ಇದರಿಂದ ವಾಹನ ಸವಾರರಿಗೆ ಮತ್ತಷ್ಟು ಹೊರೆಯಾಗಲಿದೆ. ಯಾಕಂದ್ರೆ ಫಾಸ್ಟ್ ಟ್ಯಾಗ್ ಹಾಕದೇ ಬಂದರೆ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ.
ಫಾಸ್ಟ್ ಟ್ಯಾಗ್ನ ನಿಯಮಗಳೇನು?
*ಟ್ಯಾಗ್ ಆರಂಭದಲ್ಲಿ ಕೆಂಪು ದೀಪದ ಮೂಲಕ ದೃಢಪಡಿಸಿ, ಹಸಿರು ದೀಪದ ಮೂಲಕ ಚಾಲಕನಿಗೆ ಮುಂದೆ ಸಾಗಲು ಸೂಚಿಸುತ್ತದೆ.
*ಟೋಲ್ನಲ್ಲಿ ಚಾಲಕರು ವಾಹನ ನಿಲ್ಲಿಸುವ ಅಗತ್ಯವಿಲ್ಲ.
*ಟ್ಯಾಗ್ ಸ್ವಯಂಚಾಲಿತವಾಗಿ ದೃಢೀಕರಣಕ್ಕೆ ಒಳಗಾಗದೆ ಇದ್ದರೆ ಚಾಲಕರು ಮುಂದೆ ಸಾಗಿ ಪ್ಲಾಜಾದಲ್ಲಿರುವ ರೀಡರ್ ಮೂಲಕ ಅದನ್ನು ದೃಢಪಡಿಸಿಕೊಳ್ಳಬೇಕು.
*ಟ್ಯಾಗ್ ಸರಿಯಾದ ರೀತಿಯಲ್ಲಿ ಇರದೆ ಇದ್ದರೆ, ಶುಲ್ಕದ ಎರಡರಷ್ಟು ಪ್ರಮಾಣದಲ್ಲಿ ಟೋಲ್ ಪಾವತಿ ಮಾಡಬೇಕು.
ಓದಿ: ಫಾಸ್ಟ್ಟ್ಯಾಗ್ ಕಡ್ಡಾಯ ಗಡುವು ಮತ್ತೆ ಮುಂದೂಡಿಕೆ ಮಾಡಿದ ಸಾರಿಗೆ ಸಚಿವಾಲಯ!